ನಗರದ ರಸ್ತೆ ಒತ್ತುವರಿ ತೆರವು ಶ್ಲಾಘನೀಯ: ಲಿಂಗರಾಜು
ಕ.ಪ್ರ.ವಾರ್ತೆ ತಿಪಟೂರು ಆ. 1
ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿರುವ ದೊಡ್ಡಪೇಟೆ, ಸಂತೆಪೇಟೆ ರಸ್ತೆಗಳು ಸೇರಿದಂತೆ ಹಲವಾರು ರಸ್ತೆಗಳು ಹತ್ತಾರು ವರ್ಷಗಳಿಂದ ಒತ್ತುವರಿಯಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿ ಸಣ್ಣಪುಟ್ಟ ಅಪಘಾತಗಳಿಗೆ ದಿನನಿತ್ಯ ಕಾರಣವಾಗುತ್ತಿದ್ದರಿಂದ ಸಾರ್ವಜನಿಕರು ನಗರಸಭೆ, ಶಾಸಕರು ಮತ್ತು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಜಾಗ ಮತ್ತು ರಸ್ತೆ ಒತ್ತುವರಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವ ಸದುದ್ದೇಶದಿಂದ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದ್ದಾರೆ. ಬೇರ್ಯಾವ ದುರುದ್ದೇಶಕ್ಕಾಗಿ ಅಲ್ಲ ಎಂದು ನಗರಸಭಾ ಸದಸ್ಯ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಟಿ.ಜಿ.ಲಿಂಗರಾಜು ತಿಳಿಸಿದ್ದಾರೆ. ಸಾರ್ವಜನಿಕ ದೂರಿನನ್ವಯ ನಗರದ ರಸ್ತೆಗಳ ಅಳತೆ ಮತ್ತು ಒತ್ತುವರಿ ಜಾಗದ ಮಾಹಿತಿ ಪಡೆಯಲು ತಿಳಿಸಿರುವ ಶಾಸಕರು ದಿನನಿತ್ಯ ಸಂಭವಿಸುವ ಸಣ್ಣಪುಟ್ಟ ಅಪಘಾತಗಳನ್ನು ತಪ್ಪಿಸಿ, ಸಾರ್ವಜನಿಕರ ಹಿತ ಕಾಯಲು ಮುಂದಾಗಿರುವುದು ಶ್ಲಾಘನೀಯ ಎಂದಿದ್ದಾರೆ.
ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ
ತಿಪಟೂರು: ತಾಲೂಕಿನ ಹೆಡಗರಹಳ್ಳಿಯ ಡಾ.ಅಂಬೇಡ್ಕರ್ ಗ್ರಾಮಾಂತರ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಆ.3 ಮತ್ತು 4ರಂದು ಬೆಳಿಗ್ಗೆ 9 ಗಂಟೆಗೆ ಏರ್ಪಡಿಸಲಾಗಿದೆ.
ಸಾನಿಧ್ಯವನ್ನು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ವಹಿಸಲಿದ್ದು, ತಾ.ಪಂ.ಅಧ್ಯಕ್ಷ ಭಾನುಪ್ರಕಾಶ್ ಅಧ್ಯಕ್ಷತೆ ಹಿಸಲಿದ್ದಾರೆ. ಕ್ರೀಡಾಕೂಟದ ಉದ್ಘಾಟನೆಯನ್ನು ಶಾಸಕ ಕೆ.ಷಡಕ್ಷರಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಬಿ.ನಂಜಾಮರಿ, ಬಿ.ಸಿ.ನಾಗೇಶ್, ಕೆಜೆಪಿ ಮುಖಂಡ ಲೋಕೇಶ್ವರ, ಉಪವಿಭಾಗಾಧಿಕಾರಿ ಶಿಲ್ಪ, ಪ್ರಾಂಶುಪಾಲ ಕೆ.ಆರ್.ಶಂಕರಪ್ಪ ಭಾಗವಹಿಸಲಿದ್ದಾರೆ. ಸಮಾರಂಭವು ಮಧ್ಯಾಹ್ನ 3ಗಂಟೆಗೆ ನಡೆಯಲಿದ್ದು, ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿ ಹಾಗೂ ಶ್ರೀ ಕ್ಷೇತ್ರಾಭಿಮಾನಿಗಳ ಸಂಘದ ಅಧ್ಯಕ್ಷರಾದ ಎಚ್.ಬಿ. ದಿವಾಕರ್ ವಹಿಸಲಿದ್ದು, ಆಡಳಿತಾಧಿಕಾರಿ ಭದ್ರಪ್ಪ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

