ವಿದ್ಯುತ್ ಆಘಾತ: ಗಂಭೀರ ಗಾಯ
ಕುಣಿಗಲ್: ಬೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ದಿನಗೂಲಿ ನೌಕರನೊಬ್ಬ ವಿದ್ಯುತ್ ಆಘಾತಕ್ಕೆ ಸಿಕ್ಕು, ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಪಟ್ಟಣದ ಹೊರವಲಯದಲ್ಲಿನ ಚಿಕ್ಕಕೆರೆ ಸುತ್ತಮುತ್ತಲ ಪ್ರದೇಶದ ತೋಟಗಳಿಗೆ ಅಳವಡಿಸಲಾಗಿರುವ ಪಂಪ್ಸೆಟ್ಗಳಿಗೆ ವೋಲ್ಟೇಜ್ ನಿರ್ವಹಣೆಗೆ ಪರಿವರ್ತಕ (ಟಿಸಿ)ವನ್ನು ಅಳವಡಿಸಲಾಗಿತ್ತು. ಸದರಿ ಪರಿವರ್ತಕ ಕಳೆದೆರಡು ತಿಂಗಳ ಹಿಂದೆ ಕೆಟ್ಟು ಹೋದ ಪರಿಣಾಮ, ರೈತರು ವ್ಯಾಪಕವಾಗಿ ದೂರಿದ ಮೇರೆಗೆ,ಮಂಗಳವಾರ ಬೆಳಗ್ಗೆ ಹೊಸಪರಿವರ್ತಕ ಅಳವಡಿಸಲು ಇಬ್ಬರು ಲೈನ್ಮೆನ್ ಹಾಗೂ ಇಬ್ಬರು ದಿನಗೂಲಿ ನೌಕರರು ತೆರಳಿದ್ದು,
ಪರಿವರ್ತಕ ಬದಲಾವಣೆಗೆ ಮುನ್ನ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿ, ಲೈನ್ಮೆನ್ಗಳು, ದಿನಗೂಲಿ ನೌಕರರು, ಸ್ಥಳೀಯ ರೈತರ ಸಹಕಾರದಿಂದ ಕೆಟ್ಟುಹೋದ ಪರಿವರ್ತಕ ಕೆಳಗಿಳಿಸಿ, ಹೊಸ ಪರಿವರ್ತಕವನ್ನು ಅಳವಡಿಸಿ, ದಿನಗೂಲಿ ನೌಕರನಾದ ಸುರೇಶ್ ಎಂಬುವವರು ಮಾತ್ರ ಕಂಬದ ಮೇಲಿದ್ದು, ಪರಿವರ್ತಕಕ್ಕೆ ವೈರ್ಗಳ ಸಂಪರ್ಕ ಅಳವಡಿಸುತ್ತಿದ್ದ ವೇಳೆಯಲ್ಲಿ, ಸ್ಥಗಿತಗೊಳಿಸಲಾಗಿದ್ದ ವಿದ್ಯುತ್ ಸರಬರಾಜನ್ನು ದಿಢೀರ್ ಚಾಲನೆಗೊಳಿಸಿದ್ದರಿಂದ ಕಂಬದ ಮೇಲೆ ಸಂಪರ್ಕ ಅಳವಡಿಸುತ್ತಿದ್ದ ದಿನಗೂಲಿ ನೌಕರರ ವಿದ್ಯುತ್ ಅಘಾತಕ್ಕೆ ಸಿಕ್ಕು, ಆತನ ಎಡಗೈ, ಎದೆ ಭಾಗ ಸುಟ್ಟು ಗಂಭೀರವಾಗಿ ಗಾಯಗೊಂಡನು.
ಕೂಡಲೆ, ಲೈನ್ಮೆನ್ಗಳು ದಿನಗೂಲಿ ನೌಕರನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದರು. ದಿನಗೂಲಿ ನೌಕರರ ದುರಸ್ತಿಕಾರ್ಯಕ್ಕೆ ಕಂಬದ ಮೇಲಿದ್ದಾಗಲೆ ವಿದ್ಯುತ್ ಸರಬರಾಜನ್ನು ಚಾಲನೆಗೊಳಿಸಿದಕ್ಕೆ ಸಂಬಂಧಿಸಿದಂತೆ ರೈತರಾದ ಕೃಷ್ಣಪ್ಪ, ವೆಂಕಟೇಶ್ ಇತರರು ಸ್ಥಳದಲ್ಲಿದ್ದ ಕಿರಿಯ ಅಭಿಯಂತರ (ಜೆಇ) ಶ್ರೀನಿವಾಸ್ರನ್ನು ತರಾಟೆಗೆ ತೆಗೆದುಕೊಂಡರು. ಆದರೆ ಜೆಇ, ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೆ ಸ್ಥಳದಿಂದ ಪಲಾಯನಗೈದರು.
ದುರಸ್ತಿಕಾರ್ಯ ಕೈಗೊಳ್ಳುವಾಗ ಆ ಮಾರ್ಗದಲ್ಲಿ ವಿದ್ಯುತ್ ಪ್ರವಹಿಸಿದರ ಬಗ್ಗೆ ತಾಲೂಕು ಕುವೆಂಪು ವೇದಿಕೆ ಅಧ್ಯಕ್ಷ ರಮೇಶ್, ಜೆಇ ಶ್ರೀನಿವಾಸ್ರವರನ್ನು ಪ್ರಶ್ನಿಸಿದಾಗ, ಸ್ಥಗಿತಗೊಳಿಸಲಾಗಿದ್ದ ವಿದ್ಯುತ್ ಸಂಪರ್ಕವನ್ನು ಪುನಹ ಚಾಲನೆ ಮಾಡುವ ನಿಟ್ಟಿನಲ್ಲಿ ಕಂಟ್ರೋಲ್ ರೂಂ ಹಾಗೂ ಲೈನ್ಮೆನ್ಗಳ ನಡುವೆ ಸಂಭಾಷಣೆಯ ಕೊರತೆಯಾದ ಕಾರಣ ಈ ಘಟನೆ ಸಂಭವಿಸಿದೆ.ಇದರಲ್ಲಿ ಯಾರದೂ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರಲ್ಲದೆ, ದುರಸ್ತಿ ಸಮಯದಲ್ಲಿ ಸಣ್ಣ,ಪುಟ್ಟ ಅವಘಡ ಸಾಮಾನ್ಯ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕುವೆಂಪು ವೇದಿಕೆ ಅಧ್ಯಕ್ಷ ರಮೇಶ್, ಬೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದ್ದು,
ಸದರಿ ಘಟನೆಯ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

