ಇಂದು ಪೌರಾಣಿಕ ನಾಟಕೋತ್ಸವ
ತುಮಕೂರು: ಇಲ್ಲಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆ. 9 ರಂದು ಪೌರಾಣಿಕ ನಾಟಕೋತ್ಸವ ಆಯೋಜಿಸಲಾಗಿದೆ. ನಾಟಕೋತ್ಸವವನ್ನು ಕೇಂದ್ರ ಸಂಗೀತ ಕರ್ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾಶ್ರೀ ಡಾ. ಲಕ್ಷ್ಮಣದಾಸ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಸ್. ನಾಗಣ್ಣ, ಸಿ.ವಿ. ಮಹದೇವಯ್ಯ, ಪಾಂಡುರಂಗಶೆಟ್ಟಿ, ಹೊನಿಸಿಗೆರೆ ನರಸಿಂಹಯ್ಯ,ಚಿಕ್ಕಹನುಮಂತಯ್ಯ, ಹೆಚ್. ನಾಗರಾಜ್, ವೈ.ಎನ್. ನಾಗರಾಜ್, ಕಂಟಲಗೆರೆ ಸಣ್ಣಹೊನ್ನಯ್ಯ ಉಪಸ್ಥಿತರಿರುವರು.
ರಂಜಾನ್ ಹಬ್ಬದ ಶುಭಾಶಯ
ಸಮಸ್ತ ಮುಸ್ಲಿಂ ಬಾಂಧವರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ರಂಜಾನ್ ಹಬ್ಬದ ಶುಭಾಶಯ ತಿಳಿಸಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್, ಸಚಿವ ಟಿ.ಬಿ. ಜಯಚಂದ್ರ, ಶಾಸಕರಾದ ಕೆ.ಎನ್. ರಾಜಣ್ಣ, ಡಾ. ರಫೀಕ್ ಅಹಮದ್, ಎಸ್. ಷಡಕ್ಷರಿ, ಎಸ್.ಪಿ. ಮುದ್ದಹನುಮೇಗೌಡ, ರಾಮಸ್ವಾಮಿಗೌಡ, ವೆಂಕಟರಮಣಪ್ಪ, ಅಪ್ತಾಬ್ ಅಹಮದ್, ಹೊನ್ನಗಿರಿಗೌಡ, ವೇಣುಗೋಪಾಲ್ ಮುಂತಾದವರು ಹಬ್ಬದ ಶುಭಾಶಯ ಕೋರಿದ್ದಾರೆ.
ನಾಳೆಯಿಂದ ನಾಯಕತ್ವ ಶಿಬಿರ
ಶಿರಾದ ಗುಮ್ಮನಹಳ್ಳಿಯಲ್ಲಿ ಆ. 10 ರಿಂದ ಎರಡು ದಿವಸಗಳ ಕಾಲ ದೊಂಬಿದಾಸ ಸಮುದಾಯ, ನಾಯಕತ್ವ ತರಬೇತಿ ಶಿಬಿರ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಶನಿವಾರ 10 ಗಂಟೆಗೆ ದೊರೈರಾಜು ಉದ್ಘಾಟಿಸಲಿದ್ದಾರೆ. ಪ್ರಾಸ್ತಾವಿಕವಾಗಿ ರವಿಕುಮಾರ್ ಮಾತನಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಜಯಲಕ್ಷ್ಮೀ ಮಾರಣ್ಣ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಗೌ.ಮು. ನಾಗರಾಜ್ ವಹಿಸಲಿದ್ದಾರೆ. ನಂತರ ಡಿ. ಗಂಗಾಧರಯ್ಯ, ಕುಪ್ಪೆ ನಾಗರಾಜ್, ಪ್ರೊ. ಜಿ.ಎಂ. ಶ್ರೀನಿವಾಸಯ್ಯ, ರಂಗನಾಥ್, ಹೆಚ್.ವಿ. ರಂಗಸ್ವಾಮಿ, ಡಾ. ರಾಮಕೃಷ್ಣಪ್ಪ ವಿಷಯ ಮಂಡಿಸಲಿದ್ದಾರೆ. 11 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಪ್ರೊ. ರವಿವರ್ಮ ಕುಮಾರ್, ನರಸೀಯಪ್ಪ, ರಾಜಸಿಂಹ, ಮಂಜುಳಾದೇವಿ, ಹೆಚ್.ವಿ. ಮಂಜುನಾಥ್ ಮುಂತಾದವರು ಉಪಸ್ಥಿತರಿರುವರು.
ಬೀದಿನಾಯಿ ಹಾವಳಿ ತಪ್ಪಿಸಲು ಮನವಿ
ತಿಪಟೂರು: ತಾಲೂಕಿನ ಕಸಬಾ ಹೋಬಳಿಯ ಹುಚ್ಚಗೊಂಡನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಚಿಕ್ಕಮಾರ್ಪನಹಳ್ಳಿಯ ಕಾವಲು (ಶಾಂತಿ ನಿವಾಸ) ಎಸ್ಟೇಟ್ನಲ್ಲಿ ಸುಮಾರು ನಲವತ್ತು ಕುಟುಂಬಗಳಿದ್ದು, ಕಳೆದ ಕೆಲವು ತಿಂಗಳಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಭಯದಿಂದ ಓಡಾಡುವಂತಾಗಿದೆ ಎಂದು ಇಲ್ಲಿನ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ದನಕರು, ಆಡು, ಕುರಿಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತಿದ್ದು, ತುಂಬಾ ತೊಂದರೆಯಾಗಿದೆ. ಚಿಕ್ಕ ಮಕ್ಕಳು ಭಯದ ಭೀತಿಯಲ್ಲಿ ಬದುಕಬೇಕಾಗಿದೆ. ಆದ್ದರಿಂದ ಸಂಬಂಧಪಟ್ಟ ಪಂಚಾಯಿತಿಯ ಅಧಿಕಾರಿಗಳು ಕೂಡಲೇ ಕ್ರಮಕೈಗೊಂಡು ಬೀದಿನಾಯಿಗಳ ಹಾವಳಿ ತಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

