ಗ್ರಂಥಪಾಲಕರ ದಿನಾಚರಣೆ
ತುಮಕೂರು: ರೋಟರಿ ತುಮಕೂರು ಆರ್ಐ. ಜಿಲ್ಲೆ 3190 ಇವರ ವತಿಯಿಂದ ಆ. 14 ರಂದು ಸಂಜೆ 7-30 ಕ್ಕೆ ಗ್ರಂಥಪಾಲಕರ ದಿನಾಚರಣೆಯನ್ನು ರೋಟರಿ ಬಾಲಭವನದಲ್ಲಿ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ, ನಿರ್ಮಾಪಕ ರೊ.ಪಿ.ಪಿ. ಮುರಳೀಧರ್ ಹಾಲಪ್ಪ ಪಾಲ್ಗೊಳ್ಳಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ನಿವೃತ್ತ ಗ್ರಂಥಪಾಲಕ ಹಾಗೂ ರೊ.ಪಿ.ಪಿ. ಡಾ.ಎಸ್.ಎಲ್. ಕಾಡದೇವರಮಠ ಹಾಗೂ ಬನಹಟ್ಟಿಯ ಎಸ್.ಟಿ.ಸಿ. ಕಲಾ ಮತ್ತು ವಾಣಿಜ್ಯ ಕಾಲೇಜಿನ ಗ್ರಂಥಪಾಲಕ ವೈ.ಬಿ. ಕೋರಡೂರ ಅವರಿಗೆ ಗೌರವ ಸಮರ್ಪಿಸಲಾಗುವುದು.
ಕೌಶಲ್ಯ ತರಬೇತಿ
ಚಿಕ್ಕನಾಯಕನಹಳ್ಳಿ: ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯಡಿಯಲ್ಲಿ ವಿವಿಧ ರೀತಿಯ ಕೌಶಲ್ಯ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಟಿ.ಆರ್. ವೆಂಕಟೇಶ ಶೆಟ್ಟಿ ತಿಳಿಸಿದ್ದಾರೆ. 2013-14ನೇ ಸಾಲಿನ ಸ್ಟೆಫ್-ಆಫ್ ಘಟಕದಡಿಯಲ್ಲಿ ನಗರ ಪ್ರದೇಶದಲ್ಲಿರುವ ಬಡತನ ರೇಖೆಗಿಂತ ಕೆಳಗಿರುವ ನಿರುದ್ಯೋಗಿ ಯುವಕ, ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಬಿಪಿಎಲ್ ಫಲಾನುಭವಿಗಳಿಗೆ ಈ ಕೆಳಕಂಡ ವಿವಿಧ ರೀತಿಯ ಕೌಶಲ್ಯ ತರಬೇತಿಯನ್ನು ನೀಡಲು ಪುರಸಭಾ ವ್ಯಾಪ್ತಿಗೆ ಒಳಪಡುವ 18 ರಿಂದ 35 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಫಲಾನುಭವಿಗಳು ಅರ್ಜಿಗಳನ್ನು ಆಗಸ್ಟ್ 25ರೊಳಗಾಗಿ ಪುರಸಭಾ ಕಚೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಎಸ್.ಜೆ.ಎಸ್.ಆರ್.ವೈ ಯೋಜನೆಯ ಸಂಘಟನಾಧಿಕಾರಿಯವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೌಶಲ್ಯ ತರಬೇತಿಯಲ್ಲಿ 1) ಎಲೆಕ್ಟ್ರಾನಿಕ್ಸ್ ಅಂಡ್ ಮೈನ್ಟೆನೆನ್ಸ್ ಆಫ್ ಮೊಬೈಲ್ ಪೋನ್ 2)ಕಂಪ್ಯೂಟರ್ ಫಂಡಮೆಂಟಲ್ಸ್ ಅಂಡ್ ಎಂ.ಎಸ್. ಆಫೀಸ್ ಅಂಡ್ ಇಂಟರ್ನೆಟ್ ಅಂಡ್ ಡಿಟಿಪಿ 3)ಸಾಫ್ಟ್ ಸ್ಕಿಲ್ ಸ್ಪೋಕನ್ ಇಂಗ್ಲಿಷ್ ಅಂಡ್ ಕಮ್ಯೂನಿಕೇಷನ್ ಸ್ಕಿಲ್ 4) ಅಂಕೌಂಟಿಂಗ್ ಅಂಡ್ ಟ್ಯಾಲಿ 5) ಬೇಸಿಕ್ ಎಲೆಕ್ಟ್ರಿಕ್ ಅಂಡ್ ಹೌಸ್ ವೈರಿಂಗ್ 6) ವೆಲ್ಟಿಂಗ್ (ಗ್ಯಾಸ್ ಅಂಡ್ ಆರ್ಟ್ಗ್ಯಾಸ್ ಕಟ್ಟಿಂಗ್) 7) ಹ್ಯಾಂಡ್ ಎಂಬ್ರಾಯಿಡರಿ, ಜರ್ದೋಸಿ ವರ್ಕ್ 8)ಜನರಲ್ ಇಂಡಸ್ಟ್ರಿಯಲ್ ಅಂಡ್ ಪರ್ಸನಲ್ ಸೆಕ್ಯೂರಿಟಿ ಗಾರ್ಡ್ 9) ಸ್ಯೂಯಿಂಗ್ ಮೆಷನ್ ಆಪರೇಟರ್, ಟೈಲರಿಂಗ್ 10) ಬೇಸಿಕ್ ಸ್ಕ್ರೀನ್ ಪ್ರಿಂಟಿಂಗ್ ತರಬೇತಿ, ಮುಂತಾದ ವಿಷಯಗಳಲ್ಲಿ ತರಬೇತಿಯನ್ನು ನೀಡಲಾಗುವುದು, ಆಯಾ ತರಬೇತಿಗನುಗುಣವಾಗಿ 5ನೇ ತರಗತಿಯಿಂದ ಪಿಯುಸಿಯವರಗೆ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಆಸಕ್ತರ ಫಲಾನುಭವಿಗಳು ಕೂಡಲೇ ಅರ್ಜಿಯನ್ನು ಸಲ್ಲಿಸಲು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

