ತುಮಕೂರು

ಸ್ವಾತಂತ್ರ್ಯ ದಿನಾಚರಣೆ

Published On :

ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಸಬಾ ವಲಯದ ವತಿಯಿಂದ ನಗರದ ಗಾಂಧಿನಗರ, ಕೋಟೆ, ಮಾರನಗೆರೆ ಮತ್ತು ವಿದ್ಯಾನಗರಗಳಲ್ಲಿ 67ನೇ ಸ್ವಾತಂತ್ಯ್ರ ದಿನಾಚರಣೆಯನ್ನು  ಆಚರಿಸಲಾಯಿತು. ಅಧ್ಯಕ್ಷತೆಯನ್ನು ರಘುಪತಿ ವಹಿಸಿದ್ದರು. ದಿನಾಚರಣೆಯ ಅಂಗವಾಗಿ ಭಾರತಕ್ಕೆ ಸ್ವಾತಂತ್ರ್ಯ ಬರಲು ಹೋರಾಡಿದಂತಹ ನಾಯಕರುಗಳ ಬಗ್ಗೆ ತಿಳಿಸಲಾಯಿತು. ಅಲ್ಲದೆ ಸುತ್ತಮುತ್ತಲಿನ ಪರಿಸರದ ಬಗ್ಗೆ ಶಾಲಾ ಮಕ್ಕಳಿಂದ ಜಾಗೃತಿ ಮೂಡಿಸಲಾಯಿತು. ಸೇವಾ ಪ್ರತಿನಿಧಿ ಗಾಯಿತ್ರಿ, ಒಕ್ಕೂಟದ ಅಧ್ಯಕ್ಷೆ ಕವಿತಾ, ವಕೀಲೆ ಗೀತಾ, ನಗರಸಭಾ ಸದಸ್ಯ ನಿಜಗುಣ, ಕಾಂತರಾಜು ಮತ್ತಿತರರಿದ್ದರು.



ಆರೋಗ್ಯ, ಮನಸ್ಸು ಕುರಿತು ಉಪನ್ಯಾಸ ಸಂವಾದ
ತುಮಕೂರು: ಇಲ್ಲಿನ ಎಸ್ಐಟಿ ಬಡಾವಣೆಯ 28ನೇ ಕ್ರಾಸ್ನಲ್ಲಿರುವ ಎಚ್.ಎಸ್. ಆರ್ ಸಭಾಂಗಣದಲ್ಲಿ ಆ.21 ರ ಬುಧವಾರ ಸಂಜೆ 7 ಗಂಟೆಯಿಂದ ನಗೆಮುಗುಳು ಹಾಸ್ಯ ಮಾಸಪತ್ರಿಕೆ ಹಾಗೂ ಪೂರ್ಣಿಮಾ ಸಾಹಿತ್ಯ ಮಂದಿರದ ಆಶ್ರಯದಲ್ಲಿ ಆರೋಗ್ಯ ಮತ್ತು ಮನಸ್ಸು ಕುರಿತು ಉಪನ್ಯಾಸ, ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಸಲಹೆಗಾರ ಸಿ.ಸಿ.ಪಾವಟೆ ಅವರು ಆರೋಗ್ಯ ಮತ್ತು  ಮನಸ್ಸು ಕುರಿತು ಉಪನ್ಯಾಸ ನೀಡಿ ಸಂವಾದ ನಡೆಸಿಕೊಡುವರು. ಹಿರಿಯ ಯೋಗಪಟು ಹಾಗೂ ಆಹಾರ ತಜ್ಞ ಜಿ.ವಿ.ವಿ.ಶಾಸ್ತ್ರಿ, ಪ್ರಸಿದ್ಧ ವೈದ್ಯ ಡಾ.  ಬಿ.ಎನ್. ನಿರ್ವಾಣಿರಾವ್, ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಸಿದ್ದಸಮಾಧಿ ಯೋಗದ ಆಚಾರ್ಯ  ಮೋಹನ್ ಗುರೂಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಎಲ್ಲಾ ಆಸಕ್ತರು ಈ ಕಾರ್ಯಕ್ರಮದಲ್ಲಿ  ಭಾಗವಹಿಸಿ ಕಾರ್ಯಕ್ರಮ ಅರ್ಥಪೂರ್ಣಗೊಳಿಸಬೇಕೆಂದು ಕಾರ್ಯಕ್ರಮದ ಆಯೋಜಕ  ಎಚ್.ಎಸ್. ರಾಮಣ್ಣ ಕೋರಿದ್ದಾರೆ.
ಉದ್ಯೋಗ ಮೇಳ
ತುಮಕೂರು: ಉದ್ಯೋಗ ಮತ್ತು ತರಬೇತಿ ಇಲಾಖೆ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ತುಮಕೂರು ಮತ್ತು ಸೆಂಟಮ್ ಎಲೆಕ್ಟ್ರಾನಿಕ್ಸ್ ಬೆಂಗಳೂರು ವತಿಯಿಂದ ಆ. 21ರಂದು  ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ವಿವೇಕಾನಂದ ರಸ್ತೆ, ತುಮಕೂರು ಇಲ್ಲಿ ಉದ್ಯೋಗಮೇಳ ಹಮ್ಮಿಕೊಳ್ಳಲಾಗಿದೆ.  ಡಿಪ್ಲೊಮಾ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್, ಎಲೆಕ್ಟ್ರಿಕಲ್ ಮತ್ತು  ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕಲ್ ಮ್ಯಾಥಮೆಟಿಕ್ಸ್ ಪಾಸಾದ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮಾಡಲಿದ್ದು, ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಶೈಕ್ಷಣಿಕ ದಾಖಲಾತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಉದ್ಯೋಗಾಧಿಕಾರಿಗಳು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 9448281855 ಸಂಪರ್ಕಿಸಬಹುದು.
ಸೀಮೆಎಣ್ಣೆ ವಿತರಣೆ
ತುಮಕೂರು: ನಗರದ ಎಪಿಎಲ್ ಅನಿಲರಹಿತ ಪಡಿತರ ಚೀಟಿದಾರರಿಗೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ತಲಾ 3 ಲೀಟರ್ ಸೀಮೆಎಣ್ಣೆಯನ್ನು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುವುದು. ನಗರದ ಎಪಿಎಲ್ ಅನಿಲರಹಿತ ಪಡಿತರ ಚೀಟಿದಾರರು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಅಡುಗೆ ಅನಿಲ ವಿತರಕರನ್ನು ಸಂಪರ್ಕಿಸಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳೊಳಗಾಗಿ ಅಡುಗೆ ಅನಿಲ ಸಂಪರ್ಕ ಪಡೆದುಕೊಳ್ಳುವಂತೆ ತಿಳಿಸಲಾಗಿದೆ. ಆಗಸ್ಟ್ ತಿಂಗಳಿಗೆ ಬಿಪಿಎಲ್ ಮತ್ತು ಅಂತ್ಯೋದಯ ಅನ್ನ ಯೋಜನೆಯ ಅನಿಲರಹಿತ ಪಡಿತರ ಚೀಟಿದಾರರಿಗೆ ತಲಾ 5 ಲೀಟರಿನಂತೆ ಸೀಮೆಎಣ್ಣೆ ಹಂಚಿಕೆ ನೀಡಲಾಗಿದೆ. ರಾಜ್ಯಾದ್ಯಂತ ಪಡಿತರ ಸೀಮೆಎಣ್ಣೆಯ ವಿತರಣೆ ದರದಲ್ಲಿ ಏಕರೂಪತೆ ಮಾಡಲಾಗಿದ್ದು, ಪಡಿತರ ಸೀಮೆಎಣ್ಣೆ ಬೆಲೆ ಆಗಸ್ಟ್ ತಿಂಗಳಿನಿಂದ ಜಿಲ್ಲಾದ್ಯಂತ ಪ್ರತಿ ಲೀಟರ್ಗೆ 16.20 ಇರುತ್ತದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.