ಇಂದು ಲೋಕಸಭೆ ಉಪ ಚುನಾವಣೆ
ಕ.ಪ್ರ.ವಾರ್ತೆ , ಕುಣಿಗಲ್ , ೈಆ.20
ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಎಲ್ಲಾ ಅಗತ್ಯ ಸಿದ್ದತೆ ಕೈಗೊಂಡಿರುವ ತಾಲೂಕು ಆಡಳಿತ ಮಂಗಳವಾರ ಪಟ್ಟಣದ ಮಹಾತ್ಮಗಾಂಧಿ ಪದವು ಪೂ ರ್ವ ಕಾಲೇಜಿನಲ್ಲಿ ಚುನಾವಣೆ ಪ್ರಕ್ರಿಯೆಗೆ ಸಿಬ್ಬಂದಿ ನಿಯೋಜನೆ, ಇವಿಎಂ ಮತಯಂತ್ರ ವಿತರಣೆ, ವಾಹನ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಪ್ರಸಕ್ತ ಲೋಕಸಭೆ ಉಪ ಚುನಾವಣೆಯಲ್ಲಿ ಕುಣಿಗಲ್ ವಿಧಾನಸಭಾಕ್ಷೇತ್ರದಲ್ಲಿ 1,70,695 ಮತದಾರರು ತಮ್ಮ ಸಂವಿಧಾನಬದ್ದ ಹಕ್ಕನ್ನು ಚಲಾಯಿಸಲಿದ್ದು, ಈ ಪೈಕಿ 86,234 ಪುರುಷರು, 84,445 ಮಹಿಳಾ ಮತದಾರರು ಹಾಗೂ 16 ಮಂಗಳಮುಖಿ ಮತದಾರರಿದ್ದಾರೆ.
263 ಮತಗಟ್ಟೆಗಳ ಪೈಕಿ 78 ಅತಿಸೂಕ್ಷ್ಮ,78 ಸೂಕ್ಷ್ಮ ಹಾಗೂ 107 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಸುಗಮ ಚುನಾವಣೆ ನಿರ್ವಹಣೆಗಾಗಿ ಒರ್ವ ಡಿವೈಎಸ್ಪಿ ನೇತೃತ್ವದಲ್ಲಿ 4 ಸಿಪಿಐಗಳು ಹಾಗೂ 9ಪಿಎಸೈ ಸೇರಿದಂತೆ ಒಟ್ಟಾರೆ 1100 ಪೊಲೀಸರು, ಗೃಹ ರಕ್ಷಕದಳ ಸಿಬ್ಬಂದಿ ಸೇರಿದಂತೆ 75 ಮಂದಿ ಅರೆಸೇನಾಪಡೆ ಸೂಕ್ತ ಭದ್ರತೆ ಕೈಗೊಳ್ಳಲಿದ್ದು,1100 ವಿವಿಧ ಹಂತದ ಚುನಾವಣೆ ಸಿಬ್ಬಂದಿ ಕರ್ತವ್ಯದಲ್ಲಿ ಪಾಲ್ಗೊಂಡಿದ್ದಾರೆ.
ಮತದಾನ ಬಹಿಷ್ಕಾರ: ಕಸಬಾ ಹೋಬಳಿ ಕಿತ್ತನಾಗಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚನ್ನಾಪುರ ಗ್ರಾಮದಲ್ಲಿ ಕಳೆದ ಐದುವರೆ ದಶಕಗಳಿಂದ ಗ್ರಾಮದ ಜಮೀನಿಗೆ ಸಂಬಂಧಿಸಿದಂತೆ ಸಮಸ್ಯೆ ಉದ್ಭವಿಸಿದ್ದು ಸಮಸ್ಯೆ ಬಗೆಹರಿಸದ ಕಾರಣ ವಿಧಿ ಇಲ್ಲದೆ ಲೋಕಸಭೆ ಉಪಚುನಾವಣೆ ಮತದಾನ ಬಹಿಷ್ಕರಿಸಲು ತೀರ್ಮಾನಿಸಿರುವುದಾಗಿ ಗ್ರಾಪಂ ಸದಸ್ಯ ಬಾಬು ಸೇರಿದಂತೆ ಗ್ರಾಮದ ಮುಖಂಡರಾದ ಲಕ್ಷ್ಣ್ಮಣಗೌಡ,ಪರಶುರಾಮ, ಕೃಷ್ಣಪ್ಪ, ಯಶೋಧಮ್ಮ, ರಂಗಮ್ಮ ಇತರರು ತಿಳಿಸಿದ್ದಾರೆ.
ಈಡೇರದ ಭರವಸೆ: ಚನ್ನಾಪುರ ಗ್ರಾಮದಲ್ಲಿ ಎಪ್ಪತ್ತಕ್ಕೂ ಹೆಚ್ಚು ಮನಗೆಳಿದ್ದು 600 ಮತಗಳಿವೆ, ಗ್ರಾಮ ಪುನರ್ವಿಂಗಡೆ ಸಮಯದಲ್ಲಿ ಚನ್ನಾಪುರ ಜೋಡಿ ಗ್ರಾಮವೆಂದು ಘೋಶಿಸಿದ್ದು, 1959ರಿಂದಲೂ ಗ್ರಾಮದ ವ್ಯಾಪ್ತಿಯಲ್ಲಿನ ಸುಮಾರು 600 ರಿಂದ ಏಳುನೂರು ಎಕರೆ ಪ್ರದೇಶದ ಕೃಷಿ ಜಮೀನಿಗೆ ಸಂಬಂಧಿಸಿದಂತೆ ಸಮರ್ಪಕ ಭೂದಾಖಲೆಗಳನ್ನು ಸಾಗುವಳಿ ಮಾಡಿಕೊಂಡು ಬರುತ್ತಿರುವ ಭೂ ಮಾಲೀಕರಾದ ರೈತಾಪಿ ಜಕ್ಕೆ ಮಾಡಿಕೊಟ್ಟಿಲ್ಲ, 1959ಕ್ಕೆ ಹಿಂದೆ ಕೈಪಹಣಿ ಇದ್ದು ಅದರಂತೆ ಮಾಡಿಕೊಡಿ ಎಂದು ಸಂಬಂಧಪಟ್ಟವರಿಗೆ ಹಲವುಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಂದು, ತಮ್ಮ ತಾತ, ಮುತ್ತಾತರ ಆಸ್ತಿ ಇದ್ದರೂ, ಯಾವುದೇ ದಾಖಲೆಗಳು ನಿರ್ವಹಣೆಯಾಗದ ಕಾರಣ, ನಮ್ಮ ಜಮೀನಿನಲ್ಲಿ ಮನೆ ನಿರ್ಮಿಸಲಾಗಲಿ, ವಿವಿಧ ಇಲಾಖೆಗಳಿಂದ ಸರ್ಕಾರದ ಅರ್ಹ ಸವಲತ್ತುಗಳನ್ನು ಪಡೆಯಲು ವಿಫಲವಾಗಿ, ಪರದಾಡುವಂತಾಗಿದೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿರುವ ಕಾರಣ ಇದೇ 21ರ ಲೋಕಸಭೆ ಉಪಚುನಾವಣೆಯನ್ನು ಗ್ರಾಮಸ್ಥರು ಸಮರ್ಪಕ ನ್ಯಾಯಕ್ಕೆ ಆಗ್ರಹಿಸಿ ಸಾಮೂಹಿಕವಾಗಿ ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

