ಗೂಳೂರು ಗಣೇಶ ವಿಸರ್ಜನೆ
ಕ.ಪ್ರ. ವಾರ್ತೆ ತುಮಕೂರು ಡಿ. 8
ಇತಿಹಾಸ ಪ್ರಸಿದ್ಧ ಗೂಳೂರು ಗಣೇಶನನ್ನು ಭಾನುವಾರ ಸಂಜೆ ಗೂಳೂರು ಕೆರೆಯಲ್ಲಿ ವಿಸರ್ಜಿಸಲಾಯಿತು. ಬಲಿಪಾಡ್ಯಮಿ ದಿನದಂದು ಈ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು. ಇಡೀ ಊರಿನವರೆಲ್ಲರೂ ಒಟ್ಟಾಗಿ ಸೇರಿ ಆಚರಿಸುವ ಹಬ್ಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಭಕ್ತರು ಈ ಇತಿಹಾಸ ಪ್ರಸಿದ್ಧ ಗಣೇಶನ ಮೆರವಣಿಗೆ ಮತ್ತು ವಿಸರ್ಜನಾ ಮಹೋತ್ಸವಕ್ಕೆ ಬರುತ್ತಾರೆ.
ಗೂಳೂರಿನ 18 ಕೋಮಿನ ಜನರು ಭಾಗವಹಿಸಿ ಡೊಳ್ಳು, ವೀರಗಾಸೆ ಹಾಗೂ ಜಾನಪದ ಕಲಾ
ತಂಡಗಳೊಂದಿಗೆ ಶನಿವಾರ ಸಂಜೆ ಮೆರವಣಿಗೆ ಆರಂಭವಾಯಿತು. ಪ್ರಮುಖ ಬೀದಿಯಲ್ಲಿ ಸಂಚರಿಸಿದ ಗಣೇಶನನ್ನು ನಂತರ ವಿಸರ್ಜಿಸಲಾಯಿತು.
ಜನಸಾಗರ: ಗೂಳೂರು ಗಣೇಶನ ಮೆರವಣಿಗೆ ಅಂಗವಾಗಿ ಗೂಳೂರಿಗೆ ಜನಸಾಗರವೇ ಸೇರಿತ್ತು. ಭೃಗು ಮಹರ್ಷಿಯಿಂದ ಸ್ಥಾಪಿತವಾದ ಈ ಗಣೇಶನ ಮೆರವಣಿಗೆ ಪ್ರಸಿದ್ಧಿ ಹೊಂದಿದೆ.
ದೀಪಾವಳಿ ದಿವಸದಂದು ಈ ಗಣೇಶನನ್ನು ಪ್ರತಿಷ್ಠಾಪಿಸುವುದು ಇದರ ಮಹತ್ವವಾಗಿದೆ. ಶನಿವಾರ ಸಂಜೆಯಿಂದಲೇ ಸಾವಿರಾರು ಜನರು ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕಿದರು.
ಜಾತ್ರೆಯ ಅಂಗವಾಗಿ ವಿವಿಧ ಆಟಿಕೆಗಳು, ತಿನಿಸಿಗಳು, ಮನರಂಜನಾ ಕಾರ್ಯಕ್ರಮಗಳು ನಡೆದವು. ದಾರಿಯುದ್ದಕ್ಕೂ ಥರೇವಾರಿ ತಿನಿಸುಗಳನ್ನು ಭಕ್ತಾದಿಗಳಿಗೆ ನೀಡಲಾಯಿತು. ಶನಿವಾರ ರಾತ್ರಿ ಆಕರ್ಷಕ ಬಾಣ, ಬಿರುಸಿನ ಪ್ರದರ್ಶನ ನಡೆದವು. ಸ್ಥಳೀಯರು, ಜನಪ್ರತಿನಿಧಿಗಳು ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಜನಸಾಗರವೇ ನೆರೆದಿತ್ತು. ಭಾನುವಾರ ಸಂಜೆ ವಿಸರ್ಜಿಸುವುದರ ಮೂಲಕ ವೈಭವದ ಗಣೇಶ ಉತ್ಸವಕ್ಕೆ ತೆರೆ ಎಳೆಯಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

