ನೆಲ್ಸನ್ ಮಂಡೆಲಾಗೆ ನಮನ
ಕ.ಪ್ರ. ವಾರ್ತೆ ತುಮಕೂರು ಡಿ. 8
ಅಗಲಿದ ಸಮಾನತೆಯ ಹೋರಾಟಗಾರ ಗಾಂಧಿಯ ತತ್ವಗಳಿಂದ ಪ್ರಭಾವಿತರಾಗಿದ್ದ ನೆಲ್ಸನ್ ಮಂಡೆಲಾ ಅವರಿಗೆ ವಿವಿಧ ಪ್ರಗತಿಪರ ಸಂಘಟನೆಗಳು ತುಮಕೂರಿನ ಟೌನ್ಹಾಲ್ ವೃತ್ತದಲ್ಲಿ ನಮನ ಸಲ್ಲಿಸಿದವು.
ನೆಲ್ಸನ್ ಮಂಡೆಲಾ ಭಾವಚಿತ್ರದೆದುರು ಮೇಣದ ಬತ್ತಿಯನ್ನು ಹಚ್ಚಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಹಿರಿಯ ಹೋರಾಟಗಾರ ಬಂದಕುಂಟೆ ನಾಗರಾಜಯ್ಯ, ನಟರಾಜಪ್ಪ, ಕವಿ ಕೆ.ಪಿ. ನಟರಾಜ್, ಕೊಳಗೇರಿ ಹಿತರಕ್ಷಣಾ ಸಮಿತಿಯ ನರಸಿಂಹಮೂರ್ತಿ, ಬರಹಗಾರ್ತಿ ಮಲ್ಲಿಕಾ ಬಸವರಾಜು, ಸಾಹಿತಿ ನಾಗಪ್ಪ, ಸಿಐಟಿಯುನ ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿದರು. ನೆಲ್ಸನ್ ಮಂಡೆಲಾ ಅವರ ಅತ್ಯನ್ನತ ಮಾನವಿಯ ತತ್ವ ಆದರ್ಶಗಳನ್ನು ಇಂದಿನ ಸಮಾಜಕ್ಕೆ ಅಗತ್ಯವೆಂದು ಎಲ್ಲರು ಪ್ರತಿಪಾದಿಸಿದರು.
ಸೇಡಿನ ಕ್ರಮಗಳಿಗೆ ಮುಂದಾಗದೆ ಕರಿಯ ಬಿಳಿಯರ ನಡುವೆ ಸಮನ್ವಯತೆ ತರಲು ದುಡಿದ ಮಂಡೆಲಾ ಅವರ ಬದುಕು ದೀರ್ಘ ಹೋರಾಟಗಳ ಕಣಜವಾಗಿದೆ ಎಂದು ಪ್ರತಿಪಾದಿಸಿದರು.
ಜಗತ್ತಿನ ಕಪ್ಪು ಮನುಜರ ಶೋಷಿತರ ಧ್ವನಿಯಾಗಿ ಸಮಾನತೆಯ ಪ್ರತಿಪಾದಕರಾಗಿ ಸದಾ ನೆನಪಿನಲ್ಲಿರುತ್ತಾರೆ ಎಂದು ಅವರ ತತ್ವಾದರ್ಶಗಳನ್ನು ಜಗತ್ತಿನ ಎಲ್ಲರೂ ಅನುಸರಿಸಬೇಕು ಎಂದು ಬಯಸಿದರು.
ಈ ಶ್ರದ್ಧಾಂಜಲಿ ಸಭೆಯಲ್ಲಿ ದಲಿತ ಮುಖಂಡ ನರಸೀಯಪ್ಪ, ಭೂಮಿ ಬಳಗದ ಸೋಮಣ್ಣ, ಸಿಐಟಿಯುನ ಸುಬ್ರಹ್ಮಣ್ಯ ಡಿ.ವೈ.ಎಫ್.ಐನ ರಾಘವೇಂದ್ರ, ಆದಿಮೂರ್ತಿ, ಡಾ. ಆರುಂಧತಿ, ಚರಕ ಆಸ್ಪತ್ರೆಯ ಡಾ. ಬಸವರಾಜು, ಪ್ರಾಂಶುಪಾಲರಾದ ಬಿ. ಮರುಳಯ್ಯ, ಕಂಟಲಗೆರೆ ಸಣ್ಣಹೊನ್ನಯ್ಯ, ಸಾಹಿತಿ ಕರಿಯಣ್ಣ, ಪಂಡಿತ್ ಜವಹರ್, ಪಿ.ಎನ್. ರಾಮಯ್ಯ, ಕೆ.ಬಿ.ಸಿದ್ದಯ್ಯ, ರಾಜಗೋಪಾಲ್, ಎಚ್.ಎಂ. ರಂಗಯ್ಯ, ತುರಾಸು ಮುಂತಾದವರು ಭಾಗವಹಿದ್ದರು. ಸಿರಿವರ ಶಿವರಾಮಯ್ಯ ಅವರು ಮಂಡೆಲಾ ಗೀತೆಗಳನ್ನು ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

