ತುಮಕೂರು

'ಎಲ್ಲ ಧರ್ಮಗಳ ಸಾರವೂ ಒಂದೇ'

Published On :

ಕುಣಿಗಲ್: ಎಲ್ಲ ಧರ್ಮಗಳ ಸಾರವೂ ಒಂದೇ ಆಗಿದ್ದು, ಮಾನವೀಯ ಮೌಲ್ಯಗಳನ್ನು ಆಧರಿಸಿ ಕಷ್ಟದಲ್ಲಿರುವ ಮನುಷ್ಯನ ನೆರವಿಗೆ ಧಾವಿಸಿ ಆರೈಕೆ ಮಾಡುವುದೇ ಆಗಿದೆ. ಈ ನಿಟ್ಟಿನಲ್ಲಿ ದಯಾಭವನ ಸಂಸ್ಥೆ ಶ್ರಮಿಸುತ್ತಿದೆ ಎಂದು  ಕೇರಳದ ಮಲಂಕರ ಆರ್ಥೋಡಕ್ಸ್ ಮಿಷನ್‌ನ ಧರ್ಮಾಧಿಕಾರಿ ಡಾ. ಯೋಹನನ್‌ವಾರ್ ಕ್ರಿಸೋಸ್ಟಮೋಸ್ ತಿಳಿಸಿದರು.
ತಾಲೂಕಿನ ವಾಣಿಗೆರೆ ಗ್ರಾಮದಲ್ಲಿ ದಯಾಭವನ್ ಮೆಡಿಕಲ್ ಮಿಷನ್ ಹಾಸ್ಪಿಟಲ್ ಮತ್ತು ಆಶಿ ಎಲಿಸಾ ಮೆಮೋರಿಯಲ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ  ಮಾತನಾಡಿ, ಕಳೆದ ಕೆಲ ದಶಕಗಳ ಹಿಂದೆ, ಸಮಾಜದ ತಿರಸ್ಕಾರಕ್ಕೆ ಒಳಗಾಗಿದ್ದ ಎಚ್‌ಐವಿ ಪೀಡಿತರಿಗೆ ಸಾಂತ್ವನ ಹೇಳಿ ಅವರಿಗೆ ಧೈರ್ಯ ತುಂಬಿ, ಅವರನ್ನು ಮತ್ತಷ್ಟು ದಿನ ಬಾಳಿ, ಬದುಕಲು ಸಹಕಾರವಾಗುವ ನಿಟ್ಟಿನಲ್ಲಿ ದಯಾಭವನ ಪ್ರಾರಂಭಿಸಲಾಗಿದೆ.  ದಾನಿಗಳ ನೆರವಿನಿಂದ ಕಿಡ್ನಿ ರೋಗಗಳಿಗೆ ಸಂಬಂಧಿಸಿದಂತೆ ಆಸ್ಪತ್ರೆ ಪ್ರಾರಂಭಿಸಲಾಗಿದೇ. ತಾಲೂಕು ಸೇರಿದಂತೆ ಜಿಲ್ಲೆಯ ಜನತೆ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಕ್ರೈಸ್ತರ ಸೇವಾ ಸಂಸ್ಥೆಗಳು ದಯಾ ಹಾಗೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ, ಯಾವುದೇ ಲಾಭಾಂಶದ ಆಸೆ ಇಲ್ಲದೆ ಸೇವೆ ಸಲ್ಲಿಸತ್ತಿವೆ. ನಾಡಿನ ಶೈಕ್ಷಣಿಕ ಮತ್ತು ಆರೋಗ್ಯ ಸುಧಾರಣೆಗೆ ಸರ್ಕಾರದ ಜೊತೆಯಲ್ಲಿ ಪೂರಕವಾಗಿ ಸ್ಪಂದಿಸುತ್ತಾ ಸಹಕಾರಿಯಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಅನುಕೂಲವಾಗುವಂತೆ ಡಯಾಲಿಸಿಸ್ ಕೇಂದ್ರದ  ಅವ್ಯವಸ್ಥೆ ಸರಿಪಡಿಸಿ, ತಾಲೂಕು ಕೇಂದ್ರಗಳಲ್ಲು ಪ್ರಾರಂಭಿಸುವ ಯೋಚನೆ ಸರಕಾರಕ್ಕೆ ಇದೆ. ಶೀಘ್ರದಲ್ಲೆ ಕ್ರಮ ಈ ಕುರಿತು ಕ್ರಮ ಕೈಗೊಳ್ಳಲಾಗುವುದೆಂದರು.
ಮದರ್ ಥೆರೆಸಾ ಚಿಲ್ಡ್ರನ್ ಫೌಂಡೇಶನ್ ಬೆಂಗಳೂರಿನ ಸಾಜನ್ ಜಾರ್ಜ್, ತಮ್ಮ ಮಗಳು ಕ್ಯಾನ್ಸರ್ ಆಘಾತಕ್ಕೆ ಮೃತಪಟ್ಟ ನೆನಪಿಗೆ, ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಿಕೊಟ್ಟರು.  ಆಂಗ್ಲ ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು.  ಧರ್ಮಾಧಿಕಾರಿಗಳಾದ ಡಾ. ಅಬ್ರಹಾಂ ಮಾರ್ಸ್‌ರಾಫಿಮ್, ಕೆ.ಐ. ಫಿಲಿಫ್ ರಂಬಾನ್, ಜಿನೇಶ್, ಅರೆಶಂಕರ ಮಠದ ಸಿದ್ದರಾಮಚೈತನ್ಯ ಸ್ವಾಮೀಜಿ, ಡಿಎಚ್‌ಒ ಚೆನ್ನಮಲ್ಲಯ್ಯ, ಟಿಎಚ್‌ಒ ಶಾಂತಲ, ತಾಪಂ ಸದಸ್ಯ  ಎಲ್. ರಾಮಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.