ತಲೆ ಮೇಲೆ ಕಾಯಿ ಬಿದ್ದು ಗಾಯ
ಕುಣಿಗಲ್: ಆರ್ಥಿಕ ಗಣತಿಯ ವರದಿ ಸಲ್ಲಿಕೆಗೆ ತಾಲೂಕು ಕಚೇರಿಗೆ ಅಗಮಿಸಿದ್ದ ಸಿಆರ್ಪಿಯೊಬ್ಬರ ತಲೆಮೇಲೆ, ಕಚೇರಿ ಆವರಣಲ್ಲಿನ ತೆಂಗಿನಮರದಿಂದ ಕಾಯಿ ಬಿದ್ದು, ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಗಾಯಗೊಂಡವರನ್ನು ಹುಲಿಯೂರುದುರ್ಗ ಕ್ಲಸ್ಟರ್ನ ಸಿಅರ್ಪಿ ಎಸ್.ಎಲ್ .ಲಕ್ಷ್ಮಿನಾರಾಯಣ ಎಂದು ಗುರುತಿಸಲಾಗಿದೆ. ಅವರು ಆರ್ಥಿಕ ಗಣತಿಯ ವರದಿಯನ್ನು, ತಾಲೂಕು ಕಚೇರಿಗೆ ಸಲ್ಲಿಸಲು, ಗುರುವಾರ ತಾಲೂಕು ಕಚೇರಿಗೆ ಆಗಮಿಸಿದ್ದಾಗ, ಕಚೇರಿ ಆವರಣದಲ್ಲಿನ ತೆಂಗಿನಮರದಿಂದ ಕಾಯಿ, ಅವರ ತಲೆಮೇಲೆ ಬಿದ್ದ ಕಾರಣ, ತಲೆಗೆ ಪೆಟ್ಟಾಗಿ ಪ್ರಜ್ಞಾಹೀನರಾಗಿ ಬಿದ್ದರು. ಜೊತೆಯಲ್ಲಿದ್ದ ಶಿಕ್ಷಕ ರಮೇಶ್, ಸಿಆರ್ಪಿಯವರನ್ನು, ಸಮೀಪದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ದಿನಂಪ್ರತಿ ತಾಲೂಕು ಕಚೇರಿಗೆ ಹಲವಾರು ನಾಗರಿಕರು ತಮ್ಮ ಕೆಲಸ ಕಾರ್ಯಗಳಿಗೆ ಆಗಮಿಸುತ್ತಿದ್ದು, ಕಚೇರಿಯಲ್ಲಿನ ಸಿಬ್ಬಂದಿಗಳು ಕಾಲಕಾಲಕ್ಕೆ ತೆಂಗಿನ ಮರದಲ್ಲಿ ಹಣ್ಣಾಗಿರುವ ಕಾಯಿಗಳನ್ನು, ಉದುರಿ ಬೀಳುವ ಗರಿಗಳ ಸಮರ್ಪಕ ನಿರ್ವಹಣೆ ಮಾಡುವಂತೆ ಘಟನೆ ನಂತರ ನಾಗರಿಕರು ಆಗ್ರಹಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

