ತುಮಕೂರು

ಜ.15 ರಿಂದ ರಾಷ್ಟ್ರೀಯ ಖೋ-ಖೋ

Published On :

ತುಮಕೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ 59ನೇ ಎಸ್ಜಿಎಫ್ಐ ರಾಷ್ಟ್ರಮಟ್ಟದ 14 ವರ್ಷ ವಯೋವುತಿಯ ಬಾಲಕ ಬಾಲಕಿಯರ ಖೋಖೋ ಪಂದ್ಯಾವಳಿಯ ಆತಿಥ್ಯ ಈ ಬಾರಿ ತುಮಕೂರಿಗೆ ಲಭಿಸಿದೆ. ದೇಶದ ಮೂವತ್ತು ರಾಜ್ಯಗಳ ಬಾಲಕ, ಬಾಲಕಿಯರ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ತಿಂಗಳ ಹಿಂದೆಯಷ್ಟೇ ಖೋಖೋ ಕ್ರೀಡಾ ಹಬ್ಬ ಸವಿದಿದ್ದ ನಗರವಾಸಿಗಳಿಗೆ ಮತ್ತೊಂದು ರಾಷ್ಟ್ರೀಯ ಕ್ರೀಡೆಗೆ ಸಾಕ್ಷಿಯಾಗುವ ಭಾಗ್ಯಸಿಕ್ಕಿದೆ. ಜ.15 ರಿಂದ 19ರವರೆಗೆ ತುಮಕೂರಿನ ವಿಜಯನಗರದ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿನ ಸುಸಜ್ಜಿತ ಅಂಗಳದಲ್ಲಿ ಹೊನಲುಬೆಳಕಿನ ಪಂದ್ಯಾವಳಿ ನಡೆಯಲಿದ್ದು ಕ್ರೀಡಾಕೂಟದ ಯಶಸ್ಸಿಗೆ ಜಿಡಳಿತ ಸಿದ್ಧತೆ ನಡೆಸಿದೆ ಎಂದು ಡಿಸಿ ಕೆ.ಎಸ್.ಸತ್ಯಮೂರ್ತಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜ.15 ರಂದು ಬೆ.10.30ಕ್ಕೆ ರಾಮಕೃಷ್ಣ ವಿವೇಕಾನಂದ ಆಶ್ರಮದ ಡಾ.ವೀರೇಶಾನಂದ ಸ್ವಾಮೀಜಿ ಅವರು ಜಿಲ್ಲಾಧಿಕಾರಿ ಕಚೇರಿಯಿಂದ ಸರ್ವೋದಯ ಕ್ರೀಡಾಂಗಣದವರೆಗೂ ಸಾಗಲಿರುವ ಕ್ರೀಡಾಪಟುಗಳ ರೂಟ್ ಮಾರ್ಚ್ಗೆ ಚಾಲನೆ ನೀಡುವರು. ಸಂಜೆ 4ಕ್ಕೆ ನಡೆಯಲಿರುವ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸುವರು. ಜಿ ಉಸ್ತುವಾರಿ ಸಚಿವ ಜಯಚಂದ್ರ, ಸಚಿವರಾದ ಕಿಮ್ಮನೆ ರತ್ನಾಕರ, ಅಭಯಚಂದ್ರ ಜೈನ್ ಭಾಗವಹಿಸುವರು ಎಂದರು. ಪ್ರತಿದಿನ ಬೆಳಗ್ಗೆ 7 ರಿಂದ ರಾತ್ರಿ 11ರ ವರೆಗೂ ಪಂದ್ಯಗಳು ನಡೆಯಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.