6 ಮಂದಿ ಕಾರ್ಮಿಕರು ಅಸ್ವಸ್ತ
ತುಮಕೂರು: 12 ಜನ ಕಾಯಂ ನೌಕರರನ್ನು ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಹಳ್ಳಿಯ ಎಲ್ಕಾಂಪೋನಿಕ್ಸ್ ಟೆಕ್ನಾಲಜೀಸ್ನ ಆಡಳಿತ ವರ್ಗದವರ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಆಮರಣ ಸತ್ಯಾಗ್ರಹ ನಡೆಸುತ್ತಿದ್ದ 6 ಮಂದಿ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ.
ಎಲ್ಕಾಂಪೋನಿಕ್ಸ್ ಕಂಪನಿಯ ವಿರುದ್ಧ ಶುಕ್ರವಾರದಿಂದ ಕಾರ್ಮಿಕರು ಆಮರಣ ಉಪವಾಸ ಕುಳಿತಿದ್ದರು. ಶನಿವಾರ ಸಂಜೆ 6 ಕಾರ್ಮಿಕರು ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಡಿಸೆಂಬರ್ 6 ರಂದು 12 ಜನ ಕಾಯಂ ಕಾರ್ಮಿಕರನ್ನು ಅಕ್ರಮವಾಗಿ ಕೆಲಸದಿಂದ ವಜಾಗೊಳಿಸಿರುವುದನ್ನು ವಿರೋಧಿಸಿ 97 ಜನ ಕಾರ್ಮಿಕರು ಕಾನೂನು ರೀತಿಯ ಮುಷ್ಕರವನ್ನು ಆರಂಭಿಸಿದ್ದರು.
ಆಡಳಿತವರ್ಗದ ಹಠಮಾರಿತನದ ಧೋರಣೆಯಿಂದ ಮುಷ್ಕರದಲ್ಲಿ ಪಾಲ್ಗೊಂಡ 21 ಜನ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸುವ ಬೆದರಿಕೆಯನ್ನು ಒಡ್ಡಿದೆ. ಇದು ಸಾಲದೆಂಬಂತೆ ಪೊಲೀಸ್ ಮುಖಾಂತರ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಕಾರ್ಮಿಕರ ಮುಷ್ಕರವನ್ನು ಹತ್ತಿಕ್ಕಲು ಮುಂದಾಗಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಈ ಮುಷ್ಕರವನ್ನು ಬೆಂಬಲಿಸಿ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ, ಗಿರೀಶ್ ಮಾತನಾಡಿ ಆಡಳಿತವರ್ಗದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ವಿನಾ ಕಾರಣ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿರುವುದನ್ನು ವಾಪಸ್ ಪಡೆದು ಕಾನೂನು ರೀತಿಯ ಹೊರಾಟ ಮಾಡುತ್ತಿರುವ ಕಾರ್ಮಿಕರ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಆಡಳಿತ ವರ್ಗದವರು ಇದೇ ರೀತಿ ಕಾರ್ಮಿಕ ವಿರೋಧಿ ಹಠಮಾರಿತನವನ್ನು ಮಂದುವರೆಸಿದರೆ ಜಿಲ್ಲಾ ಮಟ್ಟದ ಎಲ್ಲಾ ಕಾರ್ಮಿಕ ಸಂಘಟನೆಗಳನ್ನು ಸೇರಿಸಿ ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ನ್ಯಾಯಯುತವಾದ ಬೇಡಿಕೆಗಳನ್ನು ಉಭಯ ಕಾರ್ಮಿಕ ಸಂಘ ಮತ್ತು ಆಡಳಿತವರ್ಗವು ಮಾತುಕತೆ ಮುಖಾಂತರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮನವಿಮಾಡಿದರು. ಈ ಮುಷ್ಕರವನ್ನು ಬೆಂಬಲಿಸಿ ಕಾಂ, ಕಂಬೇಗೌಡ, ಕಾಂ, ಚಿನ್ನಪ್ಪ ಮತ್ತು ಕಾಂ.ಗೌಡರಂಗಪ್ಪ ಮಾತನಾಡಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

