ತುಮಕೂರು

ಇಂದು ನಿವೃತ್ತರ ದಿನಾಚರಣೆ

Published On :

ತುಮಕೂರು: ಇಲ್ಲಿನ ಮಾಕಂ ಕಲ್ಯಾಣ ಮಂಟಪದಲ್ಲಿ ಡಿ. 30 ರ ಸೋಮವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾ ನಿವೃತ್ತ ನೌಕರರ ಸಂಘದಿಂದ ನಿವೃತ್ತರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ನ್ಯಾಯಮೂರ್ತಿಗಳಾದ ರತ್ನಕಲಾ ನೆರವೇರಿಸುವರು. ಅಧ್ಯಕ್ಷತೆಯನ್ನು ಜಿಲ್ಲಾ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಆರ್. ಬೋಬಡೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ.ಸಿ. ಸೋಮಶೇಖರ್, ಕೆ.ಎಸ್. ಸತ್ಯಮೂರ್ತಿ, ರಮಣಗುಪ್ತ, ಸಿ. ಗೋವಿಂದರಾಜು, ಜಿ.ಎಂ. ಸಣ್ಣಮುದ್ದಯ್ಯ ಆಗಮಿಸಲಿದ್ದಾರೆ.
ಸೊಬಗು ಕಾರಂಜಿ
ಇಲ್ಲಿನ ಎಂಎಲ್ಎಫ್ ವಿದ್ಯಾ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಗ್ರಾಮೀಣ ಪ್ರತಿಭೆ ಹಾಗೂ ಸೊಬಗು ಕಾರಂಜಿ ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಸ್ವರಚಿತ ಕವನ ಹಾಗೂ ಗ್ರಾಮೀಣ ಸೊಬಗು ವಿಷಯಕ್ಕೆ ಸಂಬಂಧಿಸಿದಂತೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಎಂಎಲ್ಎಫ್ ವಿದ್ಯಾ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಎರಡನೇ ಅಡ್ಡ ರಸ್ತೆ, ಅಕ್ಷಯ ಆಸ್ಪತ್ರೆ ಹತ್ತಿರ, ಅಶೋಕನಗರ, ತುಮಕೂರು ಈ ವಿಳಾಸಕ್ಕೆ ಜನವರಿ 10 ರೊಳಗೆ ಕಳುಹಿಸಿಕೊಡಲು ಸೂಚಿಸಲಾಗಿದೆ.
ಕಡತ ವಿಲೇವಾರಿ
2013-14ನೇ ಸಾಲಿನಲ್ಲಿ ಶಿಕ್ಷಣ ಅದಾಲತ್ ಕಡತ ವಿಲೇವಾರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಬೋಧಕ, ಬೋಧಕೇತರ ನೌಕರರು ಹಾಗೂ ಸಾರ್ವಜನಿಕರ ಅಹವಾಲುಗಳು  ಇದ್ದಲ್ಲಿ ಡಿ.31 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಸಮಾವೇಶ
ಇಲ್ಲಿನ ಶಂಕರಮಠದಲ್ಲಿ ಜ. 4 ರಂದು ಬೆಳಗ್ಗೆ 9.30 ರಿಂದ ಹೊಯ್ಸಳ ಕರ್ನಾಟಕ ಸಂಘದ ವಾರ್ಷಿಕೋತ್ಸವ ಮತ್ತು  ಬಾಂಧವರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಂಚಿ ಕಾಮಕೋಟಿ ಪೀಠಾಧಿಪತಿ ಜಯೇಂದ್ರ ಸರಸ್ವತಿ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಎನ್. ಸತ್ಯನಾರಾಯಣ ವಹಿಸಲಿದ್ದಾರೆ. ಉದ್ಘಾಟನೆಯನ್ನು ಕೆ.ವಿ. ವೆಂಕಟನಾರಾಯಣ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಡಾ. ತೀ.ನಂ. ಶಂಕರನಾರಾಯಣ, ಎಚ್.ಎನ್.ಬಾಬು ಹಿರಿಯಣ್ಣಯ್ಯ, ಸಂತೆಬಾಚಹಳ್ಳಿ ನಂಜುಂಡಸ್ವಾಮಿ ಆಗಮಿಸುವರು.
ಪ್ರಥಮ ಬಹುಮಾನ
ಹಾಸನದಲ್ಲಿ ನಡೆದ ರಾಜ್ಯ ಮಟ್ಟು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತುಮಕೂರು ಬಳಿಯ ಗೂಳೂರಿನ ಗಣೇಶ ಗ್ರಾಮಾಂತರ ಸಂಯುಕ್ತ ಪ.ಪೂ. ಕಾಲೇಜಿನ ವಿದ್ಯಾರ್ಥಿ ಆರ್. ಮಂಜುನಾಥ್ ಪ್ರಥಮ ಬಹುಮಾನ 4 ಸಾವಿರ ರು. ಪಡೆದಿದ್ದಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಉಪನ್ಯಾಸಕ ವೃಂದ ಅಭಿನಂದನೆ ಸಲ್ಲಿಸಿದೆ.
ಕಂಪ್ಯೂಟರ್ ತರಬೇತಿ
ಇಲ್ಲಿನ ಎನ್ಐಸಿಟಿ ವತಿಯಿಂದ ಎಲ್ಲಾ ವರ್ಗದ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ನೀಡಲಾಗುವುದು. ಹೆಚ್ಚಿನ ವಿವರಗಳಿಗೆ 9902533658, 9844092532 ಸಂಪರ್ಕಿಸಬಹುದು.
ಬ್ಯಾಂಕ್ ಕಟ್ಟಡ ಸ್ಥಳಾಂತರಕ್ಕೆ ವಿರೋಧ
ಹುಳಿಯಾರು: ಸಮೀಪದ ಹಂದನಕೆರೆ ಗ್ರಾಮದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ಕಟ್ಟಡವನ್ನು ಬೇರೆಡೆಗೆ ಸ್ಥಳಾಂತರ ಮಾಡ ಹೊರಟಿರುವುದನ್ನು  ಕೆಲವು ಗ್ರಾಹಕರು ವಿರೋಧಿಸಿದ್ದಾರೆ. ಹಂದನಕೆರೆ ಹೋಬಳಿ ಕೇಂದ್ರವಾಗಿದ್ದು, ಎಸ್.ಬಿ.ಎಂ ಉಪಶಾಖೆ ಹಾಲಿ ಸೂಕ್ತ ಸ್ಥಳಾವಕಾಶ ಹೊಂದಿರುವ  ಕಟ್ಟಡದಲ್ಲಿರುತ್ತದೆ. ಇಲ್ಲಿ ಯಾವುದೇ ಗಲಾಟೆ, ಗದ್ದಲ ಆಗುವುದಿಲ್ಲ. ಸ್ವಲ್ಪವೇ ದೂರದಲ್ಲಿ ಪೊಲೀಸ್ ಠಾಣೆಯಿರುತ್ತದೆ. ಗ್ರಾಹಕರ ವಾಹನಗಳ ನಿಲುಗಡೆಗೆ ಉತ್ತಮ ಸೌಕರ್ಯವೂ ಇದೆ. ಇದರಿಂದ ನಿತ್ಯ ಬ್ಯಾಂಕ್ಗೆ ಬರುವ ಗ್ರಾಹಕರಿಗೆ ಅನುಕೂಲವಾಗಿದೆ. ಈಗ ದಿಢೀರನೇ ಬ್ಯಾಂಕ್ ಅಧಿಕಾರಿಗಳು ಬ್ಯಾಂಕ್ ಕಟ್ಟಡವನ್ನು  ಮತ್ತೊಂದೆಡೆಗೆ ಸ್ಥಳಾಂತರಿಸಲು ಹೊರಟಿದ್ದಾರೆ. ಈಗ ಬ್ಯಾಂಕ್ ತೆರೆಯಲಿಚ್ಛಿಸಿರುವ ಕಟ್ಟಡದ ಹತ್ತಿರ ಮದ್ಯದಂಗಡಿಯಿದ್ದು, ನಿತ್ಯ ಗಲಾಟೆ, ಗದ್ದಲದಿಂದ ಕೂಡಿದ್ದು, ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಬ್ಯಾಂಕ್ ಇರುವ ಸ್ಥಳದಲ್ಲೇ ಮುಂದುವರಿಸಬೇಕೆಂದು  ರೇಣುಕಾಂಬ ಸ್ತ್ರೀಶಕ್ತಿ ಮಹಿಳಾ ಸಂಘದ ಪ್ರತಿನಿಧಿಗಳಾದ ಗೌರಮ್ಮ, ಲಕ್ಷ್ಮಿದೇವಿ, ಗ್ರಾಹರಾದ ಲಕ್ಷ್ಮಯ್ಯ, ಗವಿರಂಗಯ್ಯ ಮತ್ತಿತರರು ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.