ತುಮಕೂರು

ಹೊಸವರ್ಷದ ಸಂತೋಷ ಕೂಟ

Published On :

ಚಿಕ್ಕನಾಯಕನಹಳ್ಳಿ: ಪಟ್ಟಣದ ಹಿರಿಯ ನಾಗರೀಕರ ವೇದಿಕೆಯಿಂದ  ವಿಭಿನ್ನವಾಗಿ ಹೊಸವರ್ಷದ ಸಂತೋಷವನ್ನು ಹಂಚಲು ನಿಶ್ಚಯಿಸಲಾಗಿದೆ ಎಂದು ವೇದಿಕ ಸಂಚಲಕರಾದ ಮಾಧವರಾವ್ ತಿಳಿಸಿದ್ದಾರೆ. ಜ.1 ರಂದು ಬೆಳಿಗ್ಗೆ 6.30 ಗಂಟೆಯಿಂದ 8 ಗಂಟೆಯವರಗೆ ಪಟ್ಟಣದ ಬ್ರಹ್ಮವಿದ್ಯಾ ಸಮಾಜದ ಕಟ್ಟಡದಲ್ಲಿ ಹೊಸವರ್ಷದ ಸಂತೋಷಕೂಟವನ್ನು ಏರ್ಪಡಿಸಿರುತ್ತದೆ. ಕೂಟದ ಉದ್ಘಾಟನೆಯನ್ನು ಹಿರಿಯ ವೈದ್ಯರಾದ ಡಾ.ಎಚ್.ಕೆ.ದಾಸ್ ಅವರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಸನ್ಮಾನ್ಯ ರೋಟರಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಅವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮನರಂಜನೆಯನ್ನು ಏರ್ಪಡಿಸಿದ್ದು,  ಸಿ.ಎನ್. ಕೃಷ್ಣಾಚಾರ್, ಹಾರ್ಮೋನಿಯಂ ಆರ್. ಆಂಜನೇಯ ಅವರು ನುಡಿಸಲಿದ್ದಾರೆ. ಮೃದಂಗವಾದನವನ್ನು ಬಾಲಕ ಷಣ್ಮುಖಸ್ವಾಮಿಯವರಿಂದ, ರಂಗಗೀತೆ, ಭಾವಗೀತೆ, ಭಕ್ತಗೀತೆ ಎಂ.ಲಿಂಗದೇವರು ಅವರಿಂದ ನಗೆಹಬ್ಬ ಹಾಗೂ ಇತರೆ ಮನರಂಜನಾ ಕಾರ್ಯಕ್ರಗಳನ್ನು ಡಾ.ಪ್ರಶಾಂತಕುಮಾರಶೆಟ್ಟಿ ನಡೆಸಿಕೊಡಲಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.