ತುಮಕೂರು

'ಅಭಿವೃದ್ಧಿ ಮೂಲ ಮಂತ್ರವಾಗಲಿ'

Published On :


ಹೊಳೆನರಸೀಪುರ: ಜನಪ್ರತಿನಿಧಿಗಳು ಗ್ರಾಮಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಧ್ಯೇಯವನ್ನು ತಮ್ಮ ಪ್ರಮುಖ ಗುರಿಯೆಂದು ಭಾವಿಸಿದಾಗ ಮಾತ್ರವೇ ಗ್ರಾಮಗಳ ಉದ್ಧಾರ ಸಾಧ್ಯವಾಗುತ್ತದೆ ಎಂದು ಅರಕಲಗೂಡು ಶಾಸಕ ಎ.ಮಂಜು  ಅಭಿಪ್ರಾಯಪಟ್ಟರು.  ತಾಲೂಕಿನ ಹಳ್ಳಿಮೈಸೂರು ಹೋಬಳಿಯಲ್ಲಿನ ನೇರಲೆ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ 40.48ಲಕ್ಷ ರು ವೆಚ್ಚದ ಕಾಮಗಾರಿ ಹಾಗೂ ನೇರಲೆ, ಕೋಗಿಲಹಳ್ಳಿ ರಸ್ತೆಯನ್ನು ಪಿ.ಎಂ.ಜಿ.ಆರ್.ವೈ ಯೋಜನೆಯಡಿಯಲ್ಲಿ 93 ಲಕ್ಷ ರು ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ರಾಜಕಾರಣವನ್ನು ಚುನಾವಣೆಯ ಸಂದರ್ಭಕ್ಕೆ ಮಾತ್ರವೇ ಮೀಸಲಿಟ್ಟು, ಉಳಿದ ಅವಧಿಯಲ್ಲಿ ತಮ್ಮ ಕ್ಷೇತ್ರ ಎಲ್ಲ ವರ್ಗದ ಜನರಿಗೂ ಸಹಕರಿಯಾಗುವ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುವತ್ತ ಗಮನ ನೀಡುವುದು ನಿಜವಾದ ಜನಪ್ರತಿನಿಧಿಯ ಕಾರ್ಯವಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.