ತುಮಕೂರು

ವೀರಶೈವ ಪ್ರತಿಭಾ ಪುರಸ್ಕಾರ

Published On :

ತುಮಕೂರು: ತುಮಕೂರು ಜಿಲ್ಲಾ ವೀರಶೈವ - ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಏರ್ಪಾಟಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಪ್ರತಿಭಾ ಪುರಸ್ಕಾರ ಏರ್ಪಾಟಾಗಿದ್ದು, 2012-13 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 90 ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 85 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕಾಗಿ ಜು.25 ರೊಳಗೆ ತುಮಕೂರು, ಶಿರಾ, ಕುಣಿಗಲ್ ತಾಲೂಕುಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ  ಬಾಲಚಂದ್ರ, ಪ್ರಧಾನ ಕಾರ್ಯದರ್ಶಿ, ಶ್ರೀಕಂಠೇಶ್ವರ ನಿಲಯ, 11 ನೇ ಕ್ರಾಸ್, ಅಶೋಕ ನಗರ, ಎಸ್‌ಪಿ ಕಚೇರಿ, ಹತ್ತಿರ, ಸಿದ್ದಲಿಂಗೇಶ್ವರ ಫ್ಲೋರ್‌ಮಿಲ್ಸ್, ತುಮಕೂರು, ಮೊ. 9164351010 ಸಂಪರ್ಕಿಸುವಂತೆ ಕೋರಲಾಗಿದೆ.

ಭಾವಸಾರ ಕ್ಷತ್ರಿಯ
ಪ್ರತಿಭಾ ಪುರಸ್ಕಾರ
ಭಾವಸಾರ ಕ್ಷತ್ರಿಯ ಯುವಜನ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಏರ್ಪಾಟಾಗಿದೆ. 2012-13 ನೇ ಸಾಲಿನಲ್ಲಿ 7 ನೇ ತರಗತಿಯಲ್ಲಿ ಶೇ. 90, 10 ನೇ ತರಗತಿಯಲ್ಲಿ ಶೇ. 80, ಹಾಗೂ ದ್ವಿತೀಯ ಪಿಯೂಸಿಯಲ್ಲಿ ಶೇ. 75 ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಕೇಂದ್ರೀಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಶೇ. ರಿಯಾಯ್ತಿಯಿರುತ್ತದೆ. ಇದೇ ಸಂದರ್ಭದಲ್ಲಿ ತುಮಕೂರು ನಗರ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ಹಾಗೂ ನೋಟ್ ಪುಸ್ತಕಗಳನ್ನು ನೀಡಲಾಗುವುದು.ಜು. 13 ರೊಳಗೆ ಅರ್ಜಿ ಸಲ್ಲಿಸುವಂತೆ ಪ್ರಧಾನ ಕಾರ್ಯದರ್ಶಿ ಎ.ವಿ. ವಿಠಲರಾವ್ ಕೋರಿದ್ದಾರೆ. ಮಾಹಿತಿಗಾಗಿ 9448173980 ಸಂಪರ್ಕಿಸುವಂತೆ  ಕೋರಲಾಗಿದೆ.

ಪದಾಧಿಕಾರಿಗಳು
ತುಮಕೂರು ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಪದಾಧಿಕಾರಿಗಳ ಪಟ್ಟಿ ಇಂತಿದೆ.ಗೌರವಾಧ್ಯಕ್ಷರಾಗಿ ಸಿ. ಯತಿರಾಜು, ಅಧ್ಯಕ್ಷರಾಗಿ ಎಂ.ವಿ. ನಂಜಪ್ಪ, ಉಪಾಧ್ಯಕ್ಷರಾಗಿ ಹೆಚ್.ಟಿ. ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ಕೃಷ್ಣಮೂರ್ತಿ, ಖಜಾಂಚಿಯಾಗಿ ಕುಮಾರಸ್ವಾಮಿ, ವಿಭಾಗೀಯ ಉದ್ಯಾಕ್ಷರಾಗಿ ರಮೇಶ್, ರಾಜಶೇಖರ್, ಸಿಂಧಗೀಕರ್, ನಟರಾಜ್, ಗಂಗಾಧರ್, ಜಿ.ಡಿ. ನಿಜಾನಂದಪ್ಪ, ರವಿಕುಮಾರ್, ಸಹಕಾರ್ಯದರ್ಶಿಗಳಾಗಿ ನಂಜಪ್ಪ, ಈಶ್ವರಯ್ಯ, ಹೆಚ್.ಎನ್. ಮಲ್ಲೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಜಯಪ್ರಕಾಶ್, ಪರಮೇಶ್, ಸದಾಶಿವಯ್ಯ, ಶಿವಲಿಂಗಯ್ಯ, ಎನ್. ಪ್ರಸಾದ್, ನಾಗೇಶ್, ಓಂಕಾರಸ್ವಾಮಿ, ಹಾಲಪ್ಪ, ರವಿಕುಮಾರ್, ಎಂ.ಎಸ್. ಮರುಳಯ್ಯ, ನಿರ್ದೇಶಕರಾಗಿ ಲೋಕೇಶ್, ಲಕ್ಷ್ಮಣ್, ಚಂದ್ರಶೇಖರ್, ರಾಜಯ್ಯ, ಅರಸೇಗೌಡ, ಶಿವಾನಂದಮೂರ್ತಿ, ಸಿ. ಚೌಡಯ್ಯ, ಸಿದ್ದವೀರಪ್ಪ, ನಂಜುಂಡಸ್ವಾಮಿ, ಗೋವಿಂದಪ್ಪ, ಪಂಚಾಕ್ಷರಿ, ಚಂದ್ರಶೇಖರಯ್ಯ, ಅಜಿಮುಲ್ಲಾಖಾನ್, ಪುಟ್ಟಸ್ವಾಮಯ್ಯ, ಎ.ಜಿ. ಸುಗಂಧರಾಜ್, ಥಾಮಸ್, ನಾಗರಾಜು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಇಂದು ನಾಟಕ ಪ್ರದರ್ಶನ
ತುಮಕೂರು: ಗುರುವಾದ್ಯವೃಂದದ ವತಿಯಿಂದ ಜು. 3 ರಂದು ಸಂಜೆ 6-30 ಕ್ಕೆ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಮುದುಕನ ಮದುವೆ, ಸುರಪುರದ ವೀರವನಿತೆ ನಾಟಕಗಳು ಏರ್ಪಾಟಾಗಿವೆ. ಸಮಾರಂಭವನ್ನು ಶಾಸಕ ಡಾ. ರಫೀಕ್ ಅಹಮದ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಪತ್ರಿಕೋದ್ಯಮಿ ಎಸ್. ನಾಗಣ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಲತಿ ಸುಧೀರ್ ಪಾಲ್ಗೊಳ್ಳಲ್ಲಿದ್ದಾರೆ. ಸಾನಿಧ್ಯವನ್ನು ಸಿದ್ದಗಂಗೆಯ ಕಿರಿಯ ಶ್ರೀಗಳಾದ ಸಿದ್ದಲಿಂಗಸ್ವಾಮಿಗಳು ವಹಿಸಲಿದ್ದಾರೆ.

ನೇಕಾರರ ಸಹಕಾರ ಸಂಘದಿಂದ ಅರ್ಜಿ ಆಹ್ವಾನ
ತುಮಕೂರು: 2013-14ನೇ ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಆಯವ್ಯಯದಲ್ಲಿ ಮುಂದುವರೆಸಿದ, ಕೇಂದ್ರ, ರಾಜ್ಯ ವಲಯದ ವಿವಿಧ ಕಾರ್ಯಕ್ರಮಗಳಡಿ, ಮಾರ್ಗಸೂಚಿಯನ್ವಯ ಅರ್ಹ ನೇಕಾರರ ಸಹಕಾರ ಸಂಘ ಅಸಂಘಟಿತ ವಲಯದ ನೇಕಾರರು ಕಚೇರಿಯನ್ನು ಸಂಪರ್ಕಿಸಿ. ಉಪನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಟೂಡಾ ಕಚೇರಿ ಎದುರು, ಶ್ರೀ ಶಿರಡಿ ಸಾಯಿಬಾಬ ನಗರ, ಬೆಳಗುಂಬ ರಸ್ತೆ, ತುಮಕೂರು ದೂ.0816-2275370.

ಜಾಗೃತ, ಉಸ್ತುವಾರಿ ಸಮಿತಿ ಸಭೆ
ತುಮಕೂರು: ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ  ಮಾರ್ಚ್ 2013 ರ ಅಂತ್ಯಕ್ಕೆ ವಿವಿಧ ಇಲಾಖೆಗಳು ಸಾಧಿಸಿರುವ ಪ್ರಗತಿಯನ್ನು ಪರಿಶೀಲಿಸಲು ಜಿಲ್ಲಾ ಮಟ್ಟದ ಜಾಗೃತ ಹಾಗೂ ಉಸ್ತುವಾರಿ ಸಮಿತಿ ಸಭೆಯನ್ನು ತುಮಕೂರು ಸಂಸದ ಜಿ.ಎಸ್. ಬಸವರಾಜು ಅವರ ಅಧ್ಯಕ್ಷತೆಯಲ್ಲಿ ಜುಲೈ 6 ರಂದು ಬೆಳಿಗ್ಗೆ 11 ಗಂಟೆಗೆ ಜಿ.ಪಂ. ಸಭಾಂಗಣದಲ್ಲಿ  ಏರ್ಪಡಿಸಲಾಗಿದೆ. ಜಿ.ಪಂ. ಅಧ್ಯಕ್ಷರು ಹಾಗೂ ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷೆ ಪ್ರೇಮಾ ಮಹಲಿಂಗಪ್ಪ ಇವರ ಅಧ್ಯಕ್ಷತೆಯಲ್ಲಿ ಜುಲೈ 6  2013 ರಂದು ಮಧ್ಯಾಹ್ನ 3 ಗಂಟೆಗೆ ಜಿ.ಪಂ. ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಯೋಜನಾ ಸಮಿತಿ (ಡಿಪಿಸಿ) ಸಭೆಯನ್ನು ಏರ್ಪಡಿಸಲಾಗಿದೆ.

ರಾಜ್ಯ ಕಾವ್ಯ ಮೇಳಕ್ಕೆ ಕವನಗಳಿಗೆ ಆಹ್ವಾನ
ತುರುವೇಕೆರೆ: ತಾಲೂಕಿನ ರೂಪಾ ಪ್ರಕಾಶನದ ವತಿಯಿಂದ ಮುಂಬರುವ ತಿಂಗಳು ರಾಜ್ಯಮಟ್ಟದ ಕವಿ ಕಾವ್ಯ ಮೇಳವನ್ನು ಆಯೋಜಿಸಲಾಗಿದೆ. ಅದರ ಸಲುವಾಗಿ ರಾಜ್ಯದ ಉದಯೋನ್ಮುಖ ಕವಿಗಳಿಂದ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಕವನಗಳು ಒಂದೇ ಪುಟದಲ್ಲಿರಬೇಕು. ಡಿಟಿಪಿಯಾಗಿದ್ದು. ತಮ್ಮ ಸ್ವ ಪರಿಚಯ ಹಾಗೂ ತಮ್ಮ ಇತ್ತೀಚಿನ ಭಾವಚಿತ್ರವನ್ನು ಲಗತ್ತಿಸಬೇಕು. ಆಯ್ಕೆಯಾದ ಕವನಗಳನ್ನು ಸಂಪಾದಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕವನಗಳನ್ನು ಕಳಿಸಲು 10-07-13 ರಂದು ಕೊನೆ ದಿನಾಂಕವಾಗಿದೆ. ಕವನಗಳನ್ನು ಕಳಿಸುವ ವಿಳಾಸ ಕೆ.ಮಂಜೇಶ್ ಸಾಹಿತಿಗಳು ಚಂದನ್ ಸ್ಟೋರ್ಸ್‌ಂ ತಿಪಟೂರು - ಎಡೆಯೂರು ರಸ್ತೆ ತುರುವೇಕೆರೆ ತುಮಕೂರು ಜಿಲ್ಲೆ, ಮೊ. 9481555836. ಹೆಚ್ಚಿನ ವಿವರಗಳಿಗೆ ಚಂದ್ರಶೇಖರ್ ಚಿ ತೋಟದ ಮೊ. 988695580, ರಾಮಚಂದ್ರ ಮೊ. 9986484688, ಹೆಚ್.ಸಿ.ಗಂಗಾಧರ್ ಮೊ. 8710894700 ಗೆ ಸಂಪರ್ಕಿಸಲು ಕೋರಲಾಗಿದೆ.

ನೀರು ಹರಿಸಲು ರೇವಣ್ಣ ಆಗ್ರಹ
ಹಾಸನ: ನೀರಾವರಿ ಇಲಾಖೆಯ ಸಲಹಾ ಸಮಿತಿ ಹಾಗೂ ಕೃಷಿ ಇಲಾಖೆ ಕೂಡಲೇ ಸಭೆ ಕರೆದು ಜು.5ರೊಳಗೆ ನಾಲೆಗಳಿಗೆ ನೀರನ್ನು ಹರಿಸಬೇಕು ಎಂದು ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜು.30ರೊಳಗೆ ಜಿಲ್ಲೆಯ ರೈತರು ನಾಟಿ ಕಾರ್ಯ ಮಾಡಬೇಕಾಗಿರುವುದರಿಂದ ಈ ಕೂಡಲೇ ನೀರನ್ನು ಬಿಡಬೇಕು. ಈ ತಿಂಗಳೊಳಗೆ ನಾಟಿ ಮಾಡದಿದ್ದರೆ ರೈತರು ಸಂಕಷ್ಟ ಎದುರಿಸ ಬೇಕಾಗುತ್ತದೆ. ಜೊತೆಗೆ ಕೃಷಿ ಇಲಾಖೆ ರೈತರಿಗೆ ಸೂಕ್ತ ಮಾಹಿತಿ ನೀಡಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಒದಗಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದರು.

ಶಾಸಕರಿಗೆ ಸನ್ಮಾನ
ತಿಪಟೂರು: ತಾಲೂಕು ಸವಿತಾ ಸಮಾಜದ ವತಿಯಿಂದ ಶಾಸಕರಾದ ಕೆ.ಷಡಕ್ಷರಿ ಅವರಿಗೆ ಸೋಮವಾರ ಅವರ ಗೃಹ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ಸವಿತಾ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಮುಖಂಡರು ಶಾಸಕರಿಗೆ ಮನವಿ ಮಾಡಿದರು.  ಸವಿತಾ ಸಮಾಜದ ತಾ.ಅಧ್ಯಕ್ಷ ಮುತ್ತುರಾಜ್, ಜಿಲ್ಲಾಪ್ರತಿನಿಧಿ ನಾಗರಾಜು, ತಾ.ಪ್ರತಿನಿಧಿ ಟಿ.ಸಿ.ಗೋವಿಂದರಾಜು, ಗೌರವಾಧ್ಯಕ್ಷ ವರದರಾಜ್, ಕಾರ್ಯದರ್ಶಿ ಕುಮಾರ್, ಉಪಾಧ್ಯಕ್ಷ ನರಸಿಂಹಯ್ಯ, ಮುಖಂಡರಾದ ರಾಮಲಿಂಗು, ವಿಜಯಕುಮಾರ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.