ತುಮಕೂರು

ಜೀವನ ಜೋಪಾನ ಯಕ್ಷಗಾನ

Published On :

ಚಿಕ್ಕನಾಯಕನಹಳ್ಳಿ: ಎಚ್‌ಐವಿ ಮತ್ತು ಏಡ್ಸ್ ರೋಗದ ವಿರುದ್ಧ ಯಕ್ಷಗಾನದ ಮೂಲಕ ಜನಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಜೀವನ ಜೋಪಾನ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯಕ್ಷಗಾನದ ಮೆರಗು ಜನಾಕರ್ಷಣೆ ಕೇಂದ್ರ ಬಿಂದುವಾಗಿತ್ತು.  ಮನುಷ್ಯನ ದೇಹದಲ್ಲಿರುವ  ಸಹಜವಾದ ರೋಗನಿರೋಧಕ ಶಕ್ತಿಯನ್ನು ಕುಂದಿಸುವ   ವೈರಾಣುಗಳಿರುತ್ತದೆ.ಇದು ಸೂಕ್ಷ್ಮ ವೈರಸ್. ಇದು ಮನುಷ್ಯನ ದೇಹದಲ್ಲಿ ಮಾತ್ರ ಬದುಕಬಲ್ಲದು ಎಂಬ ಕುರಿತು ವಿವರಿಸಲಾಯಿತು.
ತಡೆಗಟ್ಟುವಿಕೆ: ಸುರಕ್ಷಿತ ಲೈಂಗಿಕ ಕ್ರಿಯೆ, ವಿವಾಹಪೂರ್ವ ಬ್ರಹ್ಮಚರ್ಯೆ, ಮುಂತಾದವುಗಳ ಕುರಿತಂತೆ ವಿವರಿಸಲಾಯಿತು. ರೋಗಬರದಂತೆ ತಡೆಗಟ್ಟುವುದು ಮಾತ್ರ ಪರಿಹಾರ. ಏಡ್ಸ್‌ನ್ನು ದೂರವಿಡಿ,ಏಡ್ಸ್ ರೋಗಿಗಳನ್ನಲ್ಲ ಎಂಬ ಘೋಷಣೆಯಂತೆ ಯಕ್ಷಗಾನದಲ್ಲಿ ರೋಗದಿಂದಾಗುವ ದುಷ್ಪಪರಿಣಾಮಗಳನ್ನು ಮನಮುಟ್ಟುವಂತೆ ಪಾತ್ರಧಾರಿಗಳು ವೇದಿಕೆಯಲ್ಲಿ ಅಭಿನಯಿಸಿದರು.
ಭಾಗವಹಿಸಿದ ಕಲಾವಿದರು. ಕುಮಟಾದ ಗಣಪತಿ ಹೆಗಡೆ ನಿರ್ದೇಶನದಲ್ಲಿ, ಕುಂದಾಪುರದ ಗಣೇಶ್ ನಾಯಕ್, ಶ್ರೀಧರ್ ಕುಂಚನ್, ಗಂಗಾಧರ್ ಶೇಳಗಿ, ಸುರೇಂದ್ರ ಗಾಣಿಗ, ಶಿವಕುಮಾರ್ ಶಿರಳಗಿ,ರ ಾಜು ಪಾಜಾರ್  ಉತ್ತಮ ಅಭಿನಯ ನೀಡಿದರು. ಧನಂಜಯ್ ಚಂಡೆ, ನಾಗರಾಜ್ ಮದ್ದಲೆ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಎಸ್.ರಂಗನಾಥ್, ಎಸ್.ನವೀನ್, ಎಸ್.ಡಿ.ಶ್ರೀನಿವಾಸ್,ನರಸಿಂಹಮೂರ್ತಿ, ಪಿ.ಕೆ.ಶಿವನಂಜಮ್ಮ, ವಿಮಲಮ್ಮ, ಶ್ರೀಧರ್, ಡಾ.ಪ್ರದೀಪ್  ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.