ತುಮಕೂರು

ಆಧಾರ್ಕ್ಕಾಗಿ ಜನರ ಪರದಾಟ

Published On :

ಕರೆಂಟ್ ಕಣ್ಣಾಮುಚ್ಚಾಲೆಯಿಂದ ನಿಧಾನಗತಿಯಲ್ಲಿ ಕಾರ್ಯ


ಕ.ಪ್ರ.ವಾರ್ತೆ   ತುರುವೇಕೆರೆ   ಜು.18
ತಾಲೂಕಿನಲ್ಲಿ ಆಧಾರ್ ಪಡೆದವರು ಶೇ. 100 ರಷ್ಟು ಆಗಿದೆ ಎಂದು ತಾಲೂಕು ಆಡಳಿತ ಘೋಷಿಸಿ ವರ್ಷವೇ ಕಳೆದಿದೆ. ಆದರೂ ಇನ್ನೂ ಆಧಾರ್ ಕಾರ್ಡ್ಅನ್ನು ಪಡೆಯುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈಗ ತಾಲೂಕಿನಲ್ಲಿ ಇನ್ನೂ ಸಾವಿರಾರು ಮಂದಿಗೆ ಆಧಾರ್ ಕಾರ್ಡ್ ದೊರೆಯದೆ ತೊಂದರೆ ಅನುಭವಿಸುತ್ತಿದ್ದಾರೆ. ಸದ್ಯ ಪಟ್ಟಣ ಪಂಚಾಯಿತಿಯ ಕೊಠಡಿಯಲ್ಲಿ ತಾಲೂಕಿನಲ್ಲಿ ಆಧಾರ್ ಕಾರ್ಡ್ ದೊರೆಯದೆ ಇರುವವರ ಫೋಟೋ ಪಡೆದು ಅವರಿಗೆ ಸೂಕ್ತ ದಾಖಲೆ ನೀಡುವ ಕಾಯಕ ಮಾಡಲಾಗುತ್ತಿದೆ. ಈಗಾಗಲೇ ಆಧಾರ್ ಮಾಡಿಸಿ ತಪ್ಪಾಗಿರುವ, ಮಾಡಿಸದೆ ಇರುವ ಹಾಗೂ ಮಾಡಿಸಿಯೂ ಇದುವರೆಗೂ ಜನರಿಗೆ ತಲುಪದೇ ಇರುವರು ಪುನಃ ಆಧಾರ್ ಕಾರ್ಡ್ಅನ್ನು ಕಡ್ಡಾಯವಾಗಿ ಮಾಡಿಸಲೇಬೇಕು. ಈಗ ಆಧಾರ್ ಕಾರ್ಡ್ ಪ್ರತಿಯೊಂದು ವ್ಯವಹಾರಕ್ಕೂ ಅಗತ್ಯ ಎಂಬುದು ಗೊತ್ತಾಗಿರುವುದರಿಂದ ಜನರು ಆಧಾರ್ ಕಾರ್ಡ್ ಮಾಡಿಸಲು ಮುಗಿಬಿದ್ದಿದ್ದಾರೆ.  
ಕಳೆದ ಡಿಸೆಂಬರ್ನಿಂದ ಆಧಾರ್ ಕಾರ್ಡ್ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಇಲ್ಲಿ 2 ಯಂತ್ರ ಮಾತ್ರ ಅಳವಡಿಸಲಾಗಿದೆ. ಪ್ರತಿಯೊಬ್ಬರ ದಾಖಲಾತಿ ಪಡೆದುಕೊಳ್ಳಲು ಕನಿಷ್ಠವೆಂದರೂ 20 ನಿಮಿಷ ವ್ಯಯವಾಗುವುದು. ಬೆಳಗ್ಗೆ 10 ರಿಂದ ಸಾಯಂಕಾಲ 6 ರವರೆಗೆ ಕಾರ್ಯ ನಿರ್ವಹಣೆ ಮಾಡಬೇಕಿದೆ. ಇದರ ಮಧ್ಯೆ ಊಟಕ್ಕೆಂದು 1 ಗಂಟೆ. ಉಳಿಯುವುದು 7 ಗಂಟೆ ಮಾತ್ರ. ಇದರ ಮಧ್ಯೆ ಪದೇ ಪದೇ ಕೈಕೊಡುವ ವಿದ್ಯುತ್ನ ಕಣ್ಣಾಮುಚ್ಚಾಲೆಯಾಟ. ಯುಪಿಎಸ್ಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜಾಗಿದ್ದರೆ ಮಾತ್ರ ಕಾರ್ಯ ನಿರ್ವಹಣೆ ಮಾಡುವುದು. ಇಲ್ಲದಿದ್ದರೆ ಇಲ್ಲ. ಪ್ರತಿ ಯಂತ್ರದ ಮೂಲಕ ಕನಿಷ್ಠ 35 ಮಂದಿಯ ದಾಖಲೆಯನ್ನು ಮಾತ್ರ ಕ್ರೋಢೀಕರಿಸಲು ಸಾಧ್ಯ. ಆದರೆ, ಪ್ರತಿದಿನ ಕನಿಷ್ಠವೆಂದರೂ ನೂರಾರು ಮಂದಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಪುಟಾಣಿ ಮಕ್ಕಳಿಂದ ಮುದುಕರ ಪರದಾಟ ನಿಂತಿಲ್ಲ. ಎರಡು ವಿಭಾಗಗಳಿಂದ 100 ಮಂದಿಯ ಭಾವಚಿತ್ರ ತೆಗೆಯಬಹುದು. ಆದರೆ, ಉಳಿದವರಿಗೆ ಮುಂದಿನ ದಿನವೇ ಗತಿ. ಈ ಮಧ್ಯೆ ಕೇಂದ್ರದಲ್ಲಿ ಜಮಾವಣೆ ತಪ್ಪಿಸಲು ಸಂಘಟಕರು ಮುಂಬರುವ ದಿನಗಳ ಬುಕಿಂಗ್ ಮಾಡಿಕೊಂಡು ಹೇಳಿ ಕಳಿಸುತ್ತಿದ್ದಾರೆ.
ಸದ್ಯ ಡಿಸೆಂಬರ್ವರೆಗೂ ಪಟ್ಟಿ ನೀಡಲಾಗಿದೆ. ದಿನವೂ ಹೊಸಬರು ಆಗಮನ ಆಗುತ್ತಿದೆ. ಕೇಂದ್ರದವರೂ ಸಬೂಬು ಹೇಳಿ ಸಾಕಾಗಿ ಹೋಗಿದೆ. ಕೂಡಲೇ 2 ಹೊಸ ಯಂತ್ರ ನೀಡಿ ಬೇಗನೆ ಜನರಿಗೆ ಆಧಾರ್ ಕಾರ್ಡ್ ನೀಡುವುದು ಅಗತ್ಯವಾಗಿದೆ. ಗ್ಯಾಸ್ನಿಂದ ಹಿಡಿದು ಬ್ಯಾಂಕ್ವರೆಗೂ ಆಧಾರ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಜನಸಾಮಾನ್ಯರಿಗೆ ಅಗತ್ಯವಾಗಿದೆ. ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿ ಸಹ ಪಟ್ಟಣ ಪಂಚಾಯಿತಿ ಆವರಣದ ಕೇಂದ್ರಕ್ಕೆ ಆಗಮಿಸಿ ಆಧಾರ್ ಕಾರ್ಡ್ ಮಾಡಿಸಿಕೊಂಡರು. ಆಧಾರ್ ಕಾರ್ಡ್ ಮಾಡಿಸುವವರಿಗೆ ಯಾವುದೇ ಶುಲ್ಕವಿಲ್ಲ. ಆದರೂ ಅಲ್ಲಿಯ ಸಿಬ್ಬಂದಿ ಸಾರ್ವಜನಿಕರಿಂದ ಹಣ ವಸೂಲು ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ. ಇಲ್ಲಿ ಕಾರ್ಡ್ ಮಾಡಿಸಿದ ನಂತರ ಮೊಬೈಲ್ಗೆ ಆಧಾರ್ ಕಾರ್ಡ್ ಬಗ್ಗೆ ಮಾಹಿತಿ ಬರಲಿದ್ದು, ಯಾವುದೇ ಸೈಬರ್ ಸೆಂಟರ್ನಲ್ಲಿ ಆಧಾರ್ ಕಾರ್ಡ್ನ ನಕಲು ಪಡೆಯಬಾಹುದಾಗಿದೆ.
ಇದನ್ನೇ ನೆಪ ಮಾಡಿಕೊಂಡಿರುವ ಸೈಬರ್ ಸೆಂಟರ್ನವರು ಪ್ರತಿ ಕಾರ್ಡ್ ನ್ನು ಅಂರ್ತಜಾಲದ ಮೂಲಕ ತೆಗೆದುಕೊಟ್ಟು ಲ್ಯಾಮಿನೇಷನ್ ಮಾಡಿಕೊಡುವುದಕ್ಕೆ 100 ಶುಲ್ಕ ವಿಧಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.