'3 ವರ್ಷಕ್ಕೊಮ್ಮೆಯಾದ್ರೂ ಮಣ್ಣು ಪರೀಕ್ಷೆ ಅಗತ್ಯ'
ಕ.ಪ್ರ.ವಾರ್ತೆ ಟೇಕಲ್ ಜು.29
ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಲು ಲಘು ಪೋಷಕಾಂಶಗಳನ್ನು ಭೂಮಿಗೆ ಸೇರಿಸುವುದರಿಂದ ಫಲವತ್ತತೆ ಹೆಚ್ಚುತ್ತದೆ ಹಾಗೂ 3 ವರ್ಷಕ್ಕೊಮ್ಮೆಯಾದರೂ ರೈತ ತಮ್ಮ ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರ ಕೃಷಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಹಾಗೂ ಸಂಶೋಧನಾ ತಜ್ಞ ಶಶಿಕುಮಾರ್ ಸಲಹೆ ನೀಡಿದರು.
ಅವರು ಟೇಕಲ್ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಭೂಚೇತನ ಯೋಜನೆ ಹೋಬಳಿ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.
ಭೂಚೇತನ ಯೋಜನೆಯ 2ನೇ ಹಂತದಲ್ಲಿ 5 ವರ್ಷಗಳಲ್ಲಿ ಕೃಷಿ ಉತ್ಪಾದನೆಯನ್ನು ಶೇ.20 ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ, ಖುಷ್ಕಿ ಪ್ರದೇಶದೊಂದಿಗೆ ಈ ಯೋಜನೆಯನ್ನು ನೀರಾವರಿ ಪ್ರದೇಶಕ್ಕೆ ವಿಸ್ತರಿಸುವುದು ಮುಂತಾದ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಹಾಗೂ ಮಾಲೂರು ತಾಲೂಕಿನಲ್ಲಿ ಜಿಪ್ಸಂ, ಜಿಂಕ್ ಲಲ್ಫೇಟ್ ಮತ್ತು ಬೋರಾಕ್ಸ್ ಅನ್ನು ನೆಲಗಡಲೆ, ರಾಗಿ, ಭತ್ತ, ಅಲಸಂದೆ, ತೊಗರಿ ದ್ವಿದಳ ಧಾನ್ಯಗಳು ಹಾಗೂ ಎಲ್ಲಾ ಕೃಷಿ ತೋಟಗಾರಿಕಾ ಬೆಳೆಗಳಿಗೆ ಬಳಸಿ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಹಲವಾರು ರೈತರು ತಮ್ಮ ಪ್ರಶ್ನೆಗಳನ್ನು ತಿಳಿಸಿ ಉತ್ತರ ಪಡೆದರು.
ರೈತ ಸಂಪರ್ಕ ಕೇಂದ್ರದ ಅಧಿಕಾರಿ ರಮೇಶ್ ಬಾಬು ಪ್ರಸ್ತಾವಿಕ ಭಾಷಣ ಮಾತನಾಡಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷಗಳಾದ ಪದ್ಮನಾಭಯ್ಯ, ಮುನಿಯಪ್ಪ, ಮುಖಂಡ ಟೇಕಲ್ ಆಂಜಿನಪ್ಪ, ಕೆ.ಜಿ.ಹಳ್ಳಿ ಗ್ರಾ.ಪಂ.ನ ಅಧ್ಯಕ್ಷೆ ಲಕ್ಷ್ಮಮ್ಮ ರಮೇಶ್, ಸೊಣ್ಣಪ್ಪ, ಪ್ರಗತಿ ಪರ ರೈತರಾದ ಹಳೇಪಾಳ್ಯದ ಚಿಕ್ಕಪ್ಪಯ್ಯ, ದಾಸರಹಳ್ಳಿ ಶ್ಯಾಮಣ್ಣ, ಕೆ.ಜಿ.ಹಳ್ಳಿ ವೆಂಕಟರಮಣಪ್ಪ, ಡಿ.ಕೆ. ಕೃಷ್ಣಮೂರ್ತಿ, ಕಸಬಾ ಕೃಷಿ ಅಧಿಕಾರಿ ಮುನಿರಾಜು ಹಾಗೂ ಭೂಚೇತನ ಕಾರ್ಯಕ್ರಮದ ಅನುಗಾರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

