ತುಮಕೂರು

ಇಂದು ರೇಲ್ವೆ ಪ್ರಯಾಣಿಕರ ಸಭೆ

Published On :

ತುಮಕೂರು: ಬಿಜಾಪುರ ಮತ್ತು ಯಶವಂತಪುರ ಕುರ್ಕುರೆ ರೈಲು ಪ್ರಯಾಣದ ಸಮಯ ಬದಲಾಗಿದ್ದು ಈ ಸಂಬಂಧ ಇದೇ ತಿಂಗಳ 2 ರಂದು ಬೆಳಿಗ್ಗೆ 10.30 ಕ್ಕೆ ರೇಲ್ವೆ ನಿಲ್ದಾಣದ ಮುಂಭಾಗ ಸಭೆ ಕರೆಯಲಾಗಿದೆ. ಈಗಿರುವಂತೆ ಬೆಳಗ್ಗೆ 7.58ಕ್ಕೆ  ಬದಲಾಗಿ ಬೆಳಗ್ಗೆ ಸುಮಾರು 6.30ಕ್ಕೆ ತುಮಕೂರಿಗೆ  ಬರಲಿದೆ. ನಮ್ಮಲ್ಲಿ ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಯ ಕೆಲಸಗಾರರು, ಮಹಿಳೆಯರು, ಕಡಿಮೆ ಸಂಬಳದ ಕೆಲಸಗಾರರು, ಮಕ್ಕಳಿರುವ ಮಹಿಳೆಯರೂ ಇದ್ದಾರೆ. ನಮ್ಮೆಲ್ಲರಿಗೂ 8 ಗಂಟೆಯ ರೈಲು ಅನುಕೂಲವಾಗಿತ್ತು. ಮನೆಯ ಕೆಲಸ ಮುಗಿಸಿ, ತಿಂಡಿ, ಅಡುಗೆ ಮಾಡಿ, ಮಕ್ಕಳನ್ನು ಸ್ಕೂಲಿಗೆ ರೆಡಿ ಮಾಡಿ ಕಳುಹಿಸಿ ಬರುವ ಮಹಿಳೆಯರಿಗಂತೂ ಈಗಿರುವ ರೈಲು ತುಂಬಾ ಅನುಕೂಲವಾಗಿತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಅಲ್ಲದೆ, ನಮ್ಮಲ್ಲಿ ಐದಾರು ಸಾವಿರ ರು.ಸಂಬಳಕ್ಕೆ ಹೋಗುವವರೂ ಇದ್ದಾರೆ. ಇಂಥವರು ಮತ್ತು ಆರ್ಥಿಕವಾಗಿ ಅನುಕೂಲವಾಗಿಲ್ಲದವರಿಗೆ ರೇಲ್ವೆ ಪ್ರಯಾಣ ಅತ್ಯಂತ ಸೂಕ್ತವಾಗಿತ್ತು. ಇವರಿಗೆ 1800 ರೂಪಾಯಿ ಕೊಟ್ಟು ಬಸ್ನಲ್ಲಿ ಹೋಗಲು ಸಾಧ್ಯವಿಲ್ಲ. ಇನ್ನು ಈ ರೈಲಿನ ವೇಳೆ ಬದಲಾದರೆ ಈಗಾಗಲೇ ತುಂಬಿ ತುಳುಕುತ್ತಿರುವ ಪುಶ್ಪುಲ್ ರೈಲಿಗೆ ಎಲ್ಲರೂ ಹೋಗುವ ಮಾತಂತೂ ಅಸಾಧ್ಯವೇ ಸರಿ. ಈ ಹಿನ್ನೆಲೆಯಲ್ಲಿ ನಮ್ಮ ದಿನ ನಿತ್ಯದ ಪ್ರಯಾಣಕ್ಕೆ ಅನುಕೂಲವಾಗುವಂತೆ ಪ್ರತ್ಯೇಕ ರೈಲು ಓಡಿಸುವುದೊಂದೇ ಪರಿಹಾರವಾಗಲಿದೆ ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.
ಇಂದು ಶರ್ಮಗೆ ಅಭಿನಂದನೆ
ತುಮಕೂರು: ಇಲ್ಲಿನ ಮಾದಿಗ ವಿದ್ಯಾರ್ಥಿ ಪರಿಷತ್ ವತಿಯಿಂದ ತುಮಕೂರು ವಿವಿ ವಿಶ್ರಾಂತ ಕುಲಪತಿ ಡಾ.ಎಸ್.ಸಿ. ಶರ್ಮ ಅವರಿಗೆ ಇದೇ ತಿಂಗಳ 2 ರಂದು ಮಧ್ಯಾಹ್ನ 1.30 ಕ್ಕೆ ಕೃಷ್ಣ ಕಾಲೇಜಿನ ಶ್ರೀಕೃಷ್ಣ ಆಡಿಟೋರಿಯಂನಲ್ಲಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ಕರ್ನಾಟಕ ಮಾದಿಗ ದಂಡೋರ ರಾಜ್ಯಾಧ್ಯಕ್ಷ ಎಂ. ಶಂಕರಪ್ಪ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಹೆಚ್. ಹುಚ್ಚಯ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕ ರಫೀಕ್ ಅಹಮದ್, ತುಮಕೂರು ವಿವಿ ಹಿಂದಿನ ಕುಲ ಸಚಿವ ಪ್ರೊ. ಎನ್. ಲಕ್ಷ್ಮೀಕಾಂತ್, ಎನ್.ಆರ್. ನಾಗರಾಜರಾವ್, ಮರಿಚೆನ್ನಮ್ಮ, ಸುಬ್ಬರಾವ್, ರವಿವರ್ಮ ಆಗಮಿಸಲಿದ್ದಾರೆ.
ವಿದ್ಯುತ್ ತಗುಲಿ ವ್ಯಕ್ತಿ ಸಾವು
ಚಿಕ್ಕನಾಯಕನಹಳ್ಳಿ:  ಟಿವಿ ನೋಡುವ ಆಕಾಂಕ್ಷೆಯಿಂದ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಪ್ರಾಣಕ್ಕೇ ಎರವಾದ ಘಟನೆ  ತಾಲೂಕಿನ ಕ್ಯಾತನಾಯಕನಹಳ್ಳಿಯಲ್ಲಿ ನಡೆದಿದೆ. ಕಸಬಾ ಹೋಬಳಿ ಕ್ಯಾತನಾಯಕನಹಳ್ಳಿಯಲ್ಲಿ ಶುಕ್ರವಾರ ಸಂಜೆ ಉಮೇಶ್ (27) ಎಂಬ ವ್ಯಕ್ತಿ ತಮ್ಮ ಮನೆಯಲ್ಲಿ ಟಿವಿಗೆ ವಿದ್ಯುತ್ ಕನೆಕ್ಷನ್ ನೀಡಲು ಹೋಗಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಕೆ. ಪ್ರಭಾಕರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.