ತಂಬಾಕಿನಲ್ಲಿ ರಾಸಾಯನಿಕ
ಕ.ಪ್ರ. ವಾರ್ತೆ ತುಮಕೂರು ಜೂ. 2
ತಂಬಾಕಿನಲ್ಲಿ 4 ಸಾವಿರಕ್ಕೂ ಹೆಚ್ಚು ರಾಸಾಯನಿಕ ಪದಾರ್ಥಗಳಿದ್ದು ಇವುಗಳಲ್ಲಿ ಪ್ರಧಾನವಾಗಿ ನಿಕೋಟಿನ್ ಮಾನವನ ಕೇಂದ್ರಿಯ ನರಮಂಡಲನವನ್ನು ಹಿಡಿತಕ್ಕೆ ತೆಗೆದುಕೊಂಡು ಮತ್ತೆ ಮತ್ತೆ ಬಳಸುವಂತೆ ಪ್ರಚೋದಿಸುತ್ತದೆ ಎಂದು ಆಚರ್ಡ್ ಸಂಸ್ಥೆಯ ವೈದ್ಯಾಧಿಕಾರಿ ಡಾ. ಶಾಲಿನಿ ತಿಳಿಸಿದರು.
ಅವರು ಇಲ್ಲಿನ ಆಚರ್ಡ್ ಮದ್ಯವರ್ಜನ ಮತ್ತು ಸಮಗ್ರ ಪುನರ್ವಸತಿ ಕೇಂದ್ರದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯಲ್ಲಿ ಮಾತನಾಡಿದರು.
ತಂಬಾಕನ್ನು ಮನುಷ್ಯ ವಿವಿಧ ರೂಪಗಳಲ್ಲಿ ಬಳಸುತ್ತಿದ್ದು ಅವುಗಳಲ್ಲಿ ಪ್ರಧಾನವಾಗಿ ಸಿಗರೇಟು, ಬೀಡಿ, ಗುಟ್ಕಾ, ಹನ್ಸ್, ಪಾನ್ ಪರಾಗ್, ಕಡ್ಡಿಪುಡಿ ಇತ್ಯಾದಿಗಳಲ್ಲಿ ರಾಸಾಯನಿಕವಿದ್ದು ವ್ಯಸನಕ್ಕೆ ಒಳಪಟ್ಟ ವ್ಯಕ್ತಿ ತಂಬಾಕಿನ ಕೈಗೊಂಬೆಯಾಗುತ್ತಾನೆ ಎಂದರು.
ಇದರಲ್ಲಿರುವ ವಿಷಕಾರಕ ವಸ್ತುಗಳಾದ ಮೆಗ್ನಿಷಿಯಂ, ಕಾರ್ಬನ್ ಮಾನಾಕ್ಸೈಡ್, ಟಾರ್, ಶೌಚಾಲಯ ಸ್ವಚ್ಛಮಾಡಲು ಬಳಸುವ ಅಮೋನಿಯಂ ಇನ್ನು ಮುಂತಾದ ವಸ್ತುಗಳ ಸೇವನೆಯಿಂದ ವ್ಯಕ್ತಿ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಾನೆ ಎಂದರು.
ಇದರ ಜತೆಗೆ ಹೃದಯಾಘಾತ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಜೀರ್ಣಾಂಗ ಸಮಸ್ಯೆ, ಲೈಂಗಿಕ ಸಮಸ್ಯೆ, ಬಂಜೆತನ ಇನ್ನು ಮುಂತಾದ ಸಮಸ್ಯೆಗಳಿಗೆ ಒಳಗಾಗಿ ವ್ಯಕ್ತಿ ಅಕಾಲಿಕ ಮರಣಕ್ಕೆ ಬಲಿಯಾಗುತ್ತಾನೆ ಎಂದರು.
ತಂಬಾಕು ವ್ಯಸನಕ್ಕೆ ಒಳಗಾಗಿರುವ ಮಂದಿ ನಿಕೋಟಿನ್ ರಿಪ್ಲೆಸ್ಮೆಂಟ್ ಥೆರಪಿಗೆ ಒಳಪಡುವುದರ ಮೂಲಕ ಮುಂದಾಗುವ ಆರೋಗ್ಯ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಹಿರಿಯ ಸಮಾಲೋಚಕ ವಿ. ಮುತ್ತುರಾಯಪ್ಪ ಮಾತನಾಡಿ ತಂಬಾಕು ಸೇವಿಸುವವರಲ್ಲಿ ಯುವಕ ಯುವತಿಯರು ಶೀಘ್ರವಾಗಿ ಒತ್ತಡಗಳಿಂದ ಪಾರಾಗಲು ಹಾಗೂ ನಾಯಕ ನಟರನ್ನು ಅನುಕರಿಸಲು ಹೋಗಿ ತಮ್ಮ ಅಮೂಲ್ಯವಾದ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ವಿಷಾದನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಚ್.ಜಿ.ಸದಾಶಿವಯ್ಯ ಮಾತನಾಡಿ ತಂಬಾಕು ಸೇವನೆಯಿಂದ ಚರ್ಮ ಸುಕ್ಕಾಗಿ ಬೇಗ ವಯಸ್ಸಾದವರಂತೆ ಕಾಣುತ್ತಾರೆ. ಬಾಯಿ ಕ್ಯಾನ್ಸರ್, ಧ್ವನಿ ಪೆಟ್ಟಿಗೆ ಕ್ಯಾನ್ಸರ್ ಹಾಗೂ ಅನೇಕ ಸಾಮಾಜಿಕ ಮುಜುಗರಕ್ಕೆ ಒಳಗಾಗಿ ವ್ಯಕ್ತಿ ಕೀಳರಿಮೆಯಿಂದ ಬಳಲುತ್ತಾನೆ.ಇಂತಹ ದುಶ್ಚಟಕ್ಕೆ ಒಳಗಾಗಿರುವ ವ್ಯಕ್ತಿಗಳನ್ನು ಕುಟುಂಬ ಮತ್ತು ಸಮಾಜ ಮೂಲೆಗುಂಪು ಮಾಡದೆ ಅವರನ್ನು ಚಿಕಿತ್ಸೆಗೆ ಪ್ರೇರೇಪಿಸಿ ಅವರ ಮನೋಬಲವನ್ನು ಹೆಚ್ಚಿಸಬೇಕೆಂದರು. ಸುಲೋಚನ ಸ್ವಾಗತಿಸಿದರು. ರೂಪಶ್ರೀ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

