ಬೀದಿ ನಾಟಕ, ಸಂಗೀತ ಕಾರ್ಯಕ್ರಮ
ತುಮಕೂರು: ವಾರ್ತಾ ಇಲಾಖೆ ಗ್ರಾಮಸಂಪರ್ಕ ಕಾರ್ಯಕ್ರಮದಡಿ ಅಭಿವೃದ್ಧಿಪರ ಹಾಗೂ ಪ್ರಚಲಿತ ಸಾಮಾಜಿಕ ವಿಷಯಾಧಾರಿತ ಬೀದಿ ನಾಟಕ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಂಡು ಜನಜಾಗೃತಿಗೊಳಿಸುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅರ್ಹ ಯಕ್ಷಗಾನ, ತೊಗಲುಬೊಂಬೆಯಾಟ, ಮ್ಯಾಜಿಕ್ ಷೋ ಸೇರಿದಂತೆ ವಿವಿಧ ಕಲಾಪ್ರಕಾರಗಳ ಅರ್ಹ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮಸಂಪರ್ಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಕಲಾತಂಡದ ಮುಖ್ಯಸ್ಥರು ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ತುಮಕೂರು ಈ ಕಚೇರಿಯಲ್ಲಿ ಅರ್ಜಿ ನಮೂನೆಯನ್ನು ಉಚಿತವಾಗಿ ಪಡೆದು ಭರ್ತಿ ಮಾಡಿ, ನಮೂನೆಯಲ್ಲಿ ಕೇಳಲಾಗಿರುವ ದಾಖಲಾತಿಗಳನ್ನು ಲಗತ್ತಿಸಿ, ಜೂನ್ 15 ರೊಳಗಾಗಿ ಈ ಕಚೇರಿಗೆ ತಲುಪಿಸಬೇಕಾಗಿ ಕೋರಿದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ವಾರ್ತಾ ಇಲಾಖೆಯ ಉಪನಿರ್ದೇಶಕರ ಅಧ್ಯಕ್ಷತೆಯ ಸಮಿತಿಯು ಕಲಾತಂಡಗಳನ್ನು ಆಯ್ಕೆ ಮಾಡಲಿದ್ದು, ಅನುಭವ, ಕಲೆಯ ಅಭಿವ್ಯಕ್ತಿ, ಸಂಗೀತ, ಸೃಜನಶೀಲತೆ, ಮಾನದಂಡಗಳನ್ನು ಆಧರಿಸಿ ಕಲಾತಂಡಗಳನ್ನು ಆಯ್ಕೆ ಮಾಡಲಿದ್ದು, ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ವಾರ್ತಾಇಲಾಖೆ, ತುಮಕೂರು ಇವರನ್ನು ಸಂಪರ್ಕಿಸಬಹುದಾಗಿದೆ.
ಸೌಲಭ್ಯ ವಂಚಿತ ಗ್ರಾಮ: ದೂರು
ಹಾಸನ: ತಾಲೂಕಿನ ಕಟ್ಟಾಯ ಹೋಬಳಿ ಕೇಂದ್ರವಾಗಿದ್ದರೂ ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಕಟ್ಟಾಯ ಗ್ರಾಮಕ್ಕೆ ಹೋಗಲು ನರಕಯಾತನೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮದಲ್ಲಿ ಬರಿಗಾಲಲ್ಲಿ ನಡೆಯುವುದೇ ದುಸ್ತರವಾಗಿದೆ. ಚರಂಡಿಗಳಿಲ್ಲದೇ ರಸ್ತೆ ಮಧ್ಯದಲ್ಲೆ ನೀರು ಹರಿದು ಎರಡರಿಂದ ಮೂರು ಅಡಿ ಆಳದವರೆಗೆ ಗುಂಡಿಗಳು ಸಾಕಷ್ಟು ಕಾಣಸಿಗುತ್ತದೆ. ದ್ವಿಚಕ್ರವಾಹನಗಳಲ್ಲಿ ಚಲಿಸಬೇಕಾದರೆ ಜೀವ ಹಿಡಿಮಾಡಿ ಕೊಂಡೆ ಚಲಿಸಬೇಕು. ಈ ರಸ್ತೆಗೆ ಕಳೆದ ವರ್ಷ ಡಾಂಬರೀಕರಣ ಮಾಡಿದ್ದರೂ ಹೀಗಿದೆ ಎಂದರೆ ರಸ್ತೆಯ ಗುಣಮಟ್ಟ ಯಾವ ಮಟ್ಟದಲ್ಲಿ ಕಾಯ್ದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆಪಾದಿಸಿದ್ದಾರೆ.
ಜಿ.ಪಂ. ಕೆ.ಡಿ.ಪಿ. ಸಭೆ
ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ಜೂನ್ 15 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2012-13ನೇ ಸಾಲಿನ ಮಾರ್ಚ್ 2013 ರ ಅಂತ್ಯಕ್ಕೆ 4ನೇ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

