ಸಾಮಾನ್ಯ ವಿಚಾರ ಹೊಳೆಯಲೇ ಇಲ್ಲ
ತುಮಕೂರು: ಜಿಲ್ಲೆಯಲ್ಲಿ ಹಳೇ ಬೋರ್ವೆಲ್ಗಳು ವಿಫಲವಾದ ತಕ್ಷಣ ಹೊಸ ಬೋರ್ವೆಲ್ಗಳನ್ನು ಕೊರೆಸಲಾಗುತ್ತಿದೆ. ಬೇಸಗೆ ಬಂತೆಂದರೆ ಬೋರ್ವೆಲ್ ಕೊರೆಯುವುದು ಎಲ್ಲೆಡೆ ಕಂಡು ಬರುವ ದೃಶ್ಯ. ಇದಕ್ಕೆ ತುಮಕೂರು ಜಿಲ್ಲೆ ಕೂಡ ಹೊರತಾಗಿಲ್ಲ. ಗುಬ್ಬಿ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಜಿಪಂ ಕೆಡಿಪಿ ಸಭೆಯಲ್ಲಿ ಮಾತನಾಡಿ, ತಮ್ಮ ತಾಲೂಕಿನಲ್ಲಿ ಕುಡಿಯುವ ನೀರಿನ ಹಿನ್ನೆಲೆಯಲ್ಲಿ 82 ಹೊಸ ಬೋರ್ವೆಲ್ಗಳನ್ನು ಕೊರೆಸಲಾಗಿದೆ. ಆದರೆ ಮೋಟಾರ್, ಪೈಪ್ ಅಳವಡಿಸಿಲ್ಲ ಎಂದು ದೂರಿದರು.
ಕೊರಟಗೆರೆ ಜೆಡಿಎಸ್ ಶಾಸಕ ಸುಧಾಕರ್ ಲಾಲ್ ಮಾತನಾಡಿ, ತಮ್ಮ ತಾಲೂಕಿನಲ್ಲಿ ಸುಮಾರು 60 ಹೊಸ ಬೋರ್ವೆಲ್ಗಳನ್ನು ಕೊರೆಯಲಾಗಿದೆ. ಆದರೆ ಮೋಟಾರ್, ಪೈಪ್ಗಳನ್ನು ಅಳವಡಿಸಿಲ್ಲ ಎಂದು ದೂರಿದರು. ತುಮಕೂರು ನಗರ ಕಾಂಗ್ರೆಸ್ ಶಾಸಕ ಡಾ. ರಫೀಕ್ ಅಹಮದ್ ಸಹ ಹೊಸ ಬೋರ್ವೆಲ್ಗಳನ್ನು ಕೊರೆಯವಲಾಗಿದೆ. ಆದರೆ ಮೋಟಾರ್ ಅಳವಡಿಸಿಲ್ಲ ಎಂದು ದೂರಿದರು.
ಸಾಮಾನ್ಯ ವಿಚಾರ ಹೊಳೆಯಲೇ ಇಲ್ಲ: ಇದೇ ರೀತಿಯ ಸಮಸ್ಯೆ ಇತರೆ ತಾಲೂಕುಗಳ ಶಾಸಕರದ್ದು ಸಹ. ಆದರೆ ಜಿಲ್ಲೆಯ ಯಾವೊಬ್ಬ ಶಾಸಕರೂ ಕೂಡ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣನವರು ಎತ್ತಿದ ಸುಸ್ಥಿತಿಯಲ್ಲಿರುವ ಹಳೇ ಮೋಟಾರ್, ಪೈಪ್, ಸ್ಟಾರ್ಟರ್ಗಳ ಕುರಿತ 5 ಕೋಟಿ ರು. ಮೌಲ್ಯದ ಪ್ರಶ್ನೆಯ ಕುರಿತು ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ಹೊಸ ಬೋರ್ವೆಲ್ಗಳಿಗೆ ಸುಸ್ಥಿತಿಯಲ್ಲಿರುವ ಹಳೇ ಬೋರ್ವೆಲ್ಗಳ ಮೋಟಾರ್, ಪೈಪ್ಗಳನ್ನು ಅಳವಡಿಸಿ, ಕೂಡಲೇ ನೀರು ಪಡೆಯಬಹುದೆಂಬ ವಿಚಾರ ಹೊಳೆಯಲೇ ಇಲ್ಲ. ಕುಡಿಯುವ ನೀರು, ನೀರಾವರಿ ಕುರಿತಂತೆ ತಜ್ಞರಂತೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವ ಜಯಚಂದ್ರ ಕೂಡ ಮೌನ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

