ತುಮಕೂರು

ಯಶಸ್ವಿ ನಾಟಕ ಪ್ರದರ್ಶನ

Published On :

ತುಮಕೂರು: ಇಲ್ಲಿಗೆ ಸಮೀಪ ಮೆಳೇಹಳ್ಳಿಯ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ಡಮರುಗ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ  ಅಲೆಗಳಲ್ಲಿ ರಾಜಹಂಸಗಳು  ನಾಟಕ ಪ್ರದರ್ಶನ ಪ್ರದರ್ಶನಗೊಂಡಿತು.
ಗೌತಮ ಬುದ್ಧನ ಪ್ರಭಾವಳಿ ಮತ್ತು ಅಂದಿನ ಸಂದಿಗ್ಧ ಸನ್ನಿವೇಶದಲ್ಲಿ ಸಿದ್ದಾರ್ಥನ ಮನಸ್ಸಿನಲ್ಲಿನ ತುಮುಲ ಮತ್ತು ಬೌದ್ಧ ಧರ್ಮದ ಬಗೆಗಿನ ಹಲವು ಮನಸ್ಸುಗಳು ಎತ್ತಿರುವ ಇಂದಿನ ಪ್ರಶ್ನೆಗಳು ಕಂಡುಕೊಳ್ಳಲೆತ್ನಿಸಿದ ವಿಚಾರಗಳು ಈ ನಾಟಕದಲ್ಲಿ ಬಿಂಬಿತವಾದವು.
ನಾಟಕಕಾರರದ ಮೋಹನ್ ರಾಕೇಶ್ ಅವರ ಈ ನಾಟಕ ಕೃತಿಯನ್ನು ನಿರ್ದೇಶಕ ಮಹದೇವ ಹಡಪದರ ನಿರ್ದೇಶನದಲ್ಲಿ ಈ ನಾಟಕ ನಡೆಯಿತು. ಸರಳ ರಂಗಸಜ್ಜಿಕೆ ಗಮನಸೆಳೆಯಿತು. ಬುದ್ಧನ ಪಾತ್ರದಲ್ಲಿ ಬಿ. ಅರುಣಕುಮಾರ್ ಮಾನ್ವಿ, ಕುಮಾರನ ಪಾತ್ರದಲ್ಲಿ ಅವಿನಾಶ ರೈ, ಸುಂದರಿ ಪಾತ್ರದಲ್ಲಿ ಅಕ್ಷತಾ, ಶಾಮಾಂಗನ ಪಾತ್ರದಲ್ಲಿ ಮಂಜು ಹಿರೇಮಠ್, ಅಲಕಾಳ ಪಾತ್ರದಲ್ಲಿ ಶೀಲ ಎನ್. ಕುರುವಂತೆ ಮನೋಜ್ಞವಾಗಿ ಅಭಿನಯಿಸಿದರು.
ಠಾಕೂರ್ ಅವರ ಬೆಳಕಿನ ಸಂಯೋಜನೆ, ಮೂರ್ತಿ ವಿ.ಎಸ್. ಅವರ ಸಂಗೀತ ನಾಟಕಕ್ಕೆ ಪೂರಕವಾಗಿತ್ತು. ಡಮರುಗ ತಂಡದ ದೇವರಾಜ್ ಮೆಳೇಹಳ್ಳಿ ನಟರನ್ನು ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.