ಸಾಧನೆಗೆ ಉತ್ತಮ ತರಬೇತಿ ಅಗತ್ಯ
ಹುಳಿಯಾರು: ಜಗತ್ತಿನಾದ್ಯಂತ ಹೆಚ್ಚಿನ ತಾಂತ್ರಿಕತೆಯಿಂದಾಗಿ ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತಿವೆ ಹಾಗೂ ಅಧಿಕ ಕೈಗಾರಿಕೆಗಳು ಸ್ಥಾಪನೆಯಾಗುತ್ತಿದ್ದು, ಉತ್ತಮ ತರಬೇತಿ ಪಡೆದವರನ್ನು ಗುರುತಿಸಿ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ಉತ್ತಮ ತರಬೇತಿ ಅನಿವಾರ್ಯವಾಗಿದೆ ಎಂದು ಹುಳಿಯಾರು ರೋಟರಿ ಅಧ್ಯಕ್ಷ ಈ. ರವೀಶ್ ತಿಳಿಸಿದರು.
ಹುಳಿಯಾರಿನ ಯೋಗಿನಾರಾಯಣ ಕೈಗಾರಿಕಾ ತರಬೇತಿ ಕಾಲೇಜಿನ 7ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ರೋಟರಿ ಸಂಸ್ಥೆ ವತಿಯಿಂದ ಕಾಲೇಜಿಗೆ ಉಚಿತವಾಗಿ ಕಂಪ್ಯೂಟರನ್ನು ವಿತರಿಸಿ ಅವರು ಮಾತನಾಡಿದರು. ಪ್ರಸ್ತುತ ಪ್ರತಿಯೊಂದು ಕ್ಷೇತ್ರದಲ್ಲಿ ಪೈಪೋಟಿಯಿದ್ದು, ಉತ್ತಮ ವಿದ್ಯಾಭ್ಯಾಸವಿದ್ದರೂ ಕೆಲಸಕ್ಕಾಗಿ ಅಲೆಯುವ ಪರಿಸ್ಥಿತಿ ಎದುರಾಗಿದೆ. ಆದರೆ ತಾಂತ್ರಿಕ ಶಿಕ್ಷಣ ಪಡೆದವರು ತಾವು ಮಾಡುವ ಕಾರ್ಯದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಾಗ ಕೆಲಸಗಳೇ ತಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದರು.
ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು ತುಣುಕು ನಾಟಕ ಹಾಗೂ ನೃತ್ಯ ಪ್ರದರ್ಶಿಸಿದರು ಹಾಗೂ ರೋಟರಿ ಕಮ್ಯೂನಿಟಿ ಕಾರ್ಪ್‌ನ ಅಧ್ಯಕ್ಷರಾಗಿ ಶಿಕ್ಷಕ ಅಥೀಕ್ ಅವರನ್ನು ನೇಮಿಸಲಾಯಿತು. ತೆಂಗಿನ ನಾರು ಉದ್ಯಮಿ ಎಲ್.ಆರ್.ಚಂದ್ರಶೇಖರ್, ಪ್ರಾಂಶುಪಾಲ ಬಸವರಾಜು ಮಾತನಾಡಿದರು.
ಯೋಗಿನಾರಾಯಣ ಸಂಸ್ಥೆಯ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಸಣ್ಣವರದಯ್ಯ, ದಾನಿಗಳಾದ ಟಿ.ಆರ್.ಲಕ್ಷ್ಮಿಕಾಂತ್, ಬಡಗಿ ರಾಮಣ್ಣ, ಯುವ ಕಾಂಗ್ರೆಸ್‌ನ ವೆಂಕಟೇಶ್, ರೋಟರಿ ಕಮ್ಯೂನಿಟಿ ಕಾರ್ಪ್‌ನ ಮಾಜಿ ಅಧ್ಯಕ್ಷ ಕೆ.ಎಸ್.ರಮೇಶ್, ಬೆಸ್ಕಾಂನ ಉಮೇಶ್‌ನಾಯಕ್, ಶಿಕ್ಷಕರಾದ ವಿಜಯ್‌ಕುಮಾರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

