ತುಮಕೂರು

ನಾಳೆ ತುಮಕೂರಿಗೆ ಲಾಮಾ

Published On :

ಕ.ಪ್ರ.ವಾರ್ತೆ ಟಿ ತುಮಕೂರು ಟಿ ಮಾ.4
ತುಮಕೂರು ವಿವಿ ಹಾಗೂ ಬೈಲಕುಪ್ಪೆಯ ಸೆರಾ ಜೆ ಮೊನಾಸ್ಟಿಕ್ ಯೂನಿವರ್ಸಿಟಿ ಆಶ್ರಯದಲ್ಲಿ ಭಗವಾನ್ ಬುದ್ಧನ ಚಿಂತನೆ ಕುರಿತು ಮಾ. 6 ರಂದು ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ದಲೈಲಾಮ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ವಿವಿ ಕುಲಪತಿ ಎಸ್.ಸಿ. ಶರ್ಮ ವಹಿಸಲಿದ್ದಾರೆ. ಕುಲಸಚಿವ ಪ್ರೊ. ಡಿ. ಶಿವಲಿಂಗಯ್ಯ, ಸೆರಾ ಜೆ ಮೊನಾಸ್ಟಿಕ್ ಯೂನಿವರ್ಸಿಟಿಯ ಅಬೋಟ್ ಗೆಶೆ ಲೊಬ್ಸಾಂಗ್ ಡೆಲೆಕ್ ಮತ್ತಿತರರು ಉಪಸ್ಥಿತರಿರುವರು. ತುಮಕೂರು ವಿಶ್ವವಿದ್ಯಾನಿಲಯದ ಡಾ. ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಜರುಗಲಿದೆ. ಇದೇ ಸಂದರ್ಭ ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಮುಂಬೈ ಇದರ ನಿರ್ದೇಶಕ ಡಾ. ಎಸ್. ಪರಶುರಾಮನ್ ಅವರಿಗೆ ತುಮಕೂರು ವಿಶ್ವವಿದ್ಯಾನಿಲಯದ ವಿಶಿಷ್ಟ ಗೌರವ ಪ್ರಾಧ್ಯಾಪಕ ಪದವಿ ಪ್ರದಾನ ಮಾಡಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.