ಶೌಚಾಲಯ ಕಟ್ಟಿಸಿದರೂ ಬಾರದ ಹಣ
ಮೈಸೂರು: ಬಯಲು ಶೌಚಾಲಯಕ್ಕೆ ಇತಿಶ್ರೀ ಹಾಡಬೇಕೆಂದು ಕೇಂದ್ರ ಸರ್ಕಾರ ಶೌಚಾಲಯ ನಿರ್ಮಿಸಿಕೊಳ್ಳಲು ಅನುದಾನ ನೀಡುತ್ತಿದೆ. ಸರ್ಕಾರದ ಆಶಯದಂತೆ ಶೌಚಾಲಯ ನಿರ್ಮಿಸಿಕೊಂಡವರಿಗೆ ಇಲ್ಲಿಯವರೆಗೆ ಸಹಾಯಧನ ಮಾಡದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಪ್ರಕರಣ ಪಿರಿಯಾಪಟ್ಟಣ ತಾಲೂಕಿನ ಕಸಬಾ ಹೋಬಳಿಯ ಹುಣಸವಾಡಿ ಗ್ರಾಪಂಗೆ ಸೇರಿದ ಕುಂದನಹಳ್ಳಿ ಜನತಾ ಬಡಾವಣೆಯಲ್ಲಿ ಕಂಡು ಬಂದಿದೆ.ಕುಂದನಹಳ್ಳಿ ಜನತಾ ಬಡಾವಣೆ ನಿವಾಸಿ ರುಕ್ಮಿಣಿ ಎಂಬವರು ಬಡತನ ರೇಖೆಗಿಂತ ಕೆಳಸ್ತರದಲ್ಲಿ ಬರುತ್ತಾರೆ. ಬಿಪಿಎಲ್ ಪಟ್ಟಿಯಲ್ಲಿರುವವರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರ 10 ಸಾವಿರ ಸಹಾಯಧನ ನೀಡುತ್ತದೆ. ಈ ಸಂಬಂಧ ಸಂಬಂಧಪಟ್ಟ ಗ್ರಾಪಂಗೆ ಅರ್ಜಿ ಸಲ್ಲಿಸಿ ರುಕ್ಮಿಣಿ ಅವರು ಶೌಚಾಲಯ ನಿರ್ಮಿಸಿಕೊಂಡು ಮೂರು ವರ್ಷಗಳೇ ಕಳೆದು ಹೋದವು. ಆದರೂ ಅನುದಾನ ಮಾತ್ರ ಈವರೆಗೆ ಬಿಡುಗಡೆಯಾಗಿಲ್ಲ.
ಹುಣಸವಾಡಿ ಗ್ರಾಪಂನವರು ಶೌಚಾಲಯ ಸಾಮಗ್ರಿ ನೀಡುತ್ತೇವೆ ಎಂದವರು ಇಲ್ಲಿಯವರೆಗೆ ನೀಡಿಲ್ಲ. ಈ ಗುಂಡಿಗಳಲ್ಲಿ ದನ, ನಾಯಿ, ಮಕ್ಕಳು ಬೀಳುತ್ತಿವೆ. ಶೌಚಾಲಯ ನಿರ್ಮಿಸಿಕೊಂಡು ಫೋಟೋ ತೆಗೆಸಿ ಪಂಚಾಯಿತಿಗೆ ಕೊಟ್ಟರೂ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. 2012ರ ಡಿ. 17 ರಂದು ಗ್ರಾಮೀಣಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ತಿಳಿಸಿದ್ದರು ಸಹಾಯಧನ ಬಂದಿಲ್ಲ ಎಂದು ಅವರು ದೂರಿದ್ದಾರೆ.ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನಿರ್ಮಲ್ ಭಾರತ್ ಅಭಿಯಾನದ ಸಹಾಯಧನವನ್ನು ಬಿಡುಗಡೆ ಮಾಡುವಂತೆ ರುಕ್ಮಿಣಿ ಕೋರಿದ್ದಾರೆ. ರಸ್ತೆ, ಚರಂಡಿ ನಿರ್ಮಿಸಿ: ಮತ್ತೊಂದು ಪ್ರಕರಣದಲ್ಲಿ ಇಲ್ಲಿನ ಜನತಾ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸುವಂತೆ ಪ್ರಧಾನಿ ಕಚೇರಿಯಿಂದ ಎರಡು ಆದೇಶ ಪತ್ರ ಬಂದರೂ ಇಲ್ಲಿನ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಆದೇಶ ಕೊಟ್ಟಿದ್ದರೂ ಜಿಲ್ಲಾಡಳಿತ ಕ್ರಮ ವಹಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

