ನೂತನ ಯುವ ರೆಡ್ ಕ್ರಾಸ್ ಘಟಕ
ಕ.ಪ್ರ.ವಾರ್ತೆ ್ಣ ಹುಳಿಯಾರು ್ಣ ಮಾರ್ಚ್ 9
ಇಲ್ಲಿನ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನೂತನವಾಗಿ ಆಸ್ತಿತ್ವಕ್ಕೆ ಬಂದ ಯುವ ರೆಡ್ ಕ್ರಾಸ್ ಘಟಕವನ್ನು ನಿವೃತ್ತ ಪ್ರಾಂಶುಪಾಲ ಚಿ.ನಾ.ಹಳ್ಳಿ ವಿಶ್ವೇಶ್ವರಯ್ಯ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ರೆಡ್ ಕ್ರಾಸ್ ಸಂಸ್ಥೆಯು ಪ್ರಚಂಚದಾದ್ಯಂತ ಹೆಚ್ಚು ಪ್ರಚಲಿತವಿರುವಂತಹ, ಸಮಾಜ ಸೇವೆಯನ್ನು ಮೂಲ ಮಂತ್ರವಾಗಿಸಿ ಕೊಂಡಿರುವ ಬಹು ದೊಡ್ಡ ಸಂಸ್ಥೆಯಾಗಿದೆ. ಇಂತಹ ರೆಡ್ ಕ್ರಾಸ್ ಘಟಕಗಳನ್ನು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಪ್ರಾರಂಭಿಸಿ, ಇಂದಿನ ಯುವ ಪೀಳಿಗೆಯವರು ಇವುಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ಸೇವಾ ಮನೋಭಾವವನ್ನು ಮೈಗೂಡಿಸಿಕೊಳ್ಳಿ ಎಂದರು. ರಕ್ತದಾನದ ಶ್ರೇಷ್ಠತೆ ಹಾಗೂ ರಕ್ತದಾನದ ಬಗ್ಗೆ ಜನ ಹೊಂದಿರುವಂತ ಮೂಢ ಮನೋಭಾವನೆಯನ್ನು ಕೈಬಿಡಬೇಕಿದ್ದು, ರಕ್ತದಾನದ ಮಹತ್ವವನ್ನು ತಿಳಿಸಿದರು.
ಪ್ರಾಚಾರ್ಯ ಆರ್. ಮೂಗೇಶಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಯುವ ರೆಡ್ಕ್ರಾಸ್ ಘಟಕದ ಸ್ಥಾಪನೆಯಿಂದ ಯಾವ ರೀತಿ ಸಮಾಜ ಸೇವೆ ಮಾಡಬಹುದಾಗಿದೆ ಮತ್ತು ಇದರ ಉದ್ದೇಶ ಹಾಗೂ ಮಹತ್ವವನ್ನು ತಿಳಿಸಿದರು. ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಉಪನ್ಯಾಸಕ ಹನುಮಂತಪ್ಪ ಪ್ರಾಸ್ತಾವಿಕ ನುಡಿ ಹಾಗೂ ಪ್ರತಿಜ್ಞಾವಿಧಿ ಮಂಡಿಸಿದರು. ಹುಳಿಯಾರು ರೋಟರಿ ಸಂಸ್ಥೆಯ ಅಧ್ಯಕ್ಷ ಈ. ರವೀಶ್, ಕಾರ್ಯದರ್ಶಿ ಗಂಗಣ್ಣ, ರಕ್ತ ಪರಿಕ್ಷಾ ಕೇಂದ್ರದ ರವಿ, ಆನಂದ್ ಉಪಸ್ಥಿತರಿದ್ದ ಸಮಾರಂಭದಲ್ಲಿ ಉಪನ್ಯಾಸಕ ಇಬ್ರಾಹಿಂ ಸ್ವಾಗತಿಸಿ, ಮಮತ ಪ್ರಾರ್ಥಿಸಿ, ಶ್ರೀನಿವಾಸಪ್ಪ ನಿರೂಪಿಸಿ, ಕೃಷ್ಣಮೂರ್ತಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

