ದುರ್ಗಮ್ಮನ ಕಳಸ ಇಂದು
ಹುಳಿಯಾರು: ಗ್ರಾಮದೇವತೆ ದುರ್ಗಾಪರಮೇಶ್ವರಿ ಅಮ್ಮನವರ ಕಳಸ ಸ್ಥಾಪನೆ ಕಾರ್ಯಕ್ರಮ ಹುಳಿಯಾರಮ್ಮ, ಕೆಂಚಮ್ಮ, ಗೌಡಗೆರೆ ದುರ್ಗಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮ, ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿ, ಕೆ.ಸಿ.ಪಾಳ್ಯದ ಅಂತರಘಟ್ಟಮ್ಮ ದೇವಿ, ಹೊಸಹಳ್ಳಿಯ ಅಂತರಘಟ್ಟಮ್ಮ ದೇವಿಯವರ ಸಮ್ಮುಖದಲ್ಲಿ ಗುರುವಾರ ಬೆಳಗಿನ ಜಾವ ಹಮ್ಮಿಕೊಳ್ಳಲಾಗಿದೆ.
ರಾತ್ರಿ 8 ಘಂಟೆಗೆ ದೇವಾಲಯದ ಆವರಣದಲ್ಲಿ ಉಯ್ಯಾಲೋತ್ಸವ, 9 ಗಂಟೆಗೆ ಗಾನವಿಶಾರದ ಆರ್ಕೆಸ್ಟ್ರದವರಿಂದ ರಸಮಂಜರಿ ಕಾರ್ಯಕ್ರಮ ಇದೆ.
ಅಂಚೆ ಕಾರ್ಡ್ನಲ್ಲಿ ಕಥಾ ಸ್ಪರ್ಧೆ
ತುಮಕೂರು: ತುಮಕೂರು ನಗರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಂಚೆ ಕಾರ್ಡ್ನಲ್ಲಿ ಕಥಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಥಾ ಸ್ಪರ್ಧೆಯಲ್ಲಿ 30 ಮಂದಿ ಬರಹಗಾರರು ಪಾಲ್ಗೊಂಡಿದ್ದರು. ಮುಖ್ಯ ಅತಿಥಿಯಾಗಿ ಎಚ್.ಆರ್. ನವೀನ್ ಪಾಲ್ಗೊಂಡಿದ್ದರು. ಪ್ರಥಮ ಬಹುಮಾನ ತುಮಕೂರು ಭಾರ್ಗವಿ, ದ್ವಿತೀಯ ರಾಮಕೃಷ್ಣಭಟ್, ತೃತೀಯ ಎಂ.ಜಿ. ಸಿದ್ದರಾಮಯ್ಯ ಪಡೆದರು. ಸಮಾಧಾನಕರ ಬಹುಮಾನವನ್ನು ಎಚ್.ಎಸ್. ಸಿದ್ದಪ್ಪ ಹಾಗೂ ಶಾಂತಲಕ್ಷ್ಮಿ ಪಡೆದರು. ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಕೆಂ.ಬ ರೇಣುಕಯ್ಯ ವಹಿಸಿದ್ದರು.
ಕಾವೇರಿ ಕಲ್ಪತರು ಬ್ಯಾಂಕ್ ಶಾಖೆ: ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ನ 338 ಶಾಖೆಯನ್ನು ತುಮಕೂರು ನಗರದ ಚಿಕ್ಕಪೇಟೆಯಲ್ಲಿ ಕಳೆದ ತಿಂಗಳ 29 ರಂದು ಪ್ರಾರಂಭಿಸಲಾಗಿದೆ ಎಂದು ಬ್ಯಾಂಕ್ನ ಪ್ರಾದೇಶಿಕ ವ್ಯವಸ್ಥಾಪಕರು ತಿಳಿಸಿದ್ದಾರೆ. ಆಧುನಿಕ ಕೋರ್ ಬ್ಯಾಂಕಿಂಗ್ ಮತ್ತು ಎನ್ಇಎಫ್ಟಿ ಸೌಲಭ್ಯಗಳನ್ನು ಹೊಂದಿದ್ದು, ಕಂಪ್ಯೂಟರೀಕರಣ ಗೊಳಿಸಲಾಗಿದೆ. ಪ್ರಾದೇಶಿಕ ವ್ಯವಸ್ಥಾಪಕ ಕೆ.ಟಿ. ಮಂಜುನಾಥಯ್ಯ ಹಾಗೂ ಹಿರಿಯ ವ್ಯವಸ್ಥಾಪಕರು ಶಾಖೆಯನ್ನು ಉದ್ಘಾಟಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

