ತುಮಕೂರು

ಕನಕದಾಸರು ಅಪರೂಪ ದಾರ್ಶನಿಕ

Published On :

ಕ.ಪ್ರ.ವಾರ್ತೆ   ತುಮಕೂರು   ಮೇ 4
ಹಿಂದುಳಿದ ಜಾತಿಯಲ್ಲಿ ಹುಟ್ಟಿದ ಕನಕದಾಸರು ಜಾತಿಗೆ ಅಂಟಿ ಬೆಳೆಯದ ಸಂತರಾಗಿ ಎಲ್ಲ ಜಾತಿ, ವರ್ಗದ ಜನರ ಒಳಿತನ್ನು ಬಯಸಿದ್ದ ಅಪರೂಪದ ದಾರ್ಶನಿಕರಾಗಿದ್ದರು ಎಂದು ಶಿಶುನಾಳ ಷರೀಫರ ತತ್ವ ಪ್ರಚಾರಕ ಎಂ.ಸಿ. ನರಸಿಂಹಮೂರ್ತಿ ಹೇಳಿದರು.
ಅವರು ತುಮಕೂರು ಜ್ಞಾನಬುತ್ತಿ ಸತ್ಸಂಗ ಕೇಂದ್ರ ಕೃಷ್ಣನಗರದ ವಿದ್ಯಾವಾಹಿನಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ 198ನೇ ವಾರದ ಉಪನ್ಯಾಸ ಕಾರ್ಯಕ್ರಮದಲ್ಲಿ ಕನಕದಾಸರು ಎಂಬ ವಿಷಯದ ಬಗ್ಗೆ ಮಾತನಾಡಿದರು. ಕನ್ನಡ ನಾಡು ಪುಣ್ಯ ಪುರುಷರ ತವರೂರು. ಈ ನಾಡಿನಲ್ಲಿ ಕಣಕಣವೂ ಪವಿತ್ರತೆಯಿಂದ ಕೂಡಿದೆ. ದಾಸರನ್ನು, ಸಾಧು, ಸಂತ, ಸತ್ಪುರಷರನ್ನು ಜಾತಿಯಲ್ಲಿ ನೋಡಬಾರದು ಎಂದರು.
ದಾಸರ ದಾಸನೆಂದು ವಿನಮ್ರನಾಗಿ ಹೇಳಿದ ಕನಕದಾಸರು ತಮ್ಮನ್ನು ತಾವು ಭಗವಂತನಿಗೆ ಅರ್ಪಿಸಿಕೊಂಡಿದ್ದರು. ಕನಕದಾಸರು ರಚಿಸಿರುವ ಹರಿಭಕ್ತಸಾರ, ರಾಮಧಾನ್ಯ ಚರಿತೆ, ಉಗಾಭೋಗಗಳು, ಮಂಡಿಗೆಗಳು ಇಂದಿಗೂ ಸತ್ವಯುತವಾಗಿ ಉಳಿದುಕೊಂಡು ಬಂದಿವೆ. ಕನಕದಾಸರ ಹೆಸರಿನಲ್ಲಿ ಹಲವಾರು ಊರುಗಳು, ಕೆರೆಕಟ್ಟೆ, ಸ್ಥಳಗಳು ಇಂದಿಗೂ ಅಸ್ತಿತ್ವದಲ್ಲಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತುಮಕೂರಿನ ಬೆಸ್ಕಾಂ ಕಚೇರಿಯ ಸಹಾಯಕ ಹಳ್ಳಿಕೆರೆ ಎ. ನಾಗರಾಜ್ ಮಾತನಾಡಿದರು. ಸತ್ಸಂಗ ಕೇಂದ್ರದ ಅಧ್ಯಕ್ಷ ಡಾ.ವೈ.ಎಂ. ರೆಡ್ಡಿ ಮಾತನಾಡಿದರು.
ಬಿ.ಎ. ಶಿವಕುಮಾರ್ ಅವರು ಸತ್ಸಂಗ ಕೇಂದ್ರದ ಸದಸ್ಯರಿಗೆ 300 ಪುಸ್ತಕಗಳನ್ನು ಉಚಿತವಾಗಿ ನೀಡಿದರು. ಮಿಮಿಕ್ರಿ ಈಶ್ವರಯ್ಯ ಪ್ರಾರ್ಥಿಸಿದರು. ಎ. ಚಂದ್ರಯ್ಯ ಸ್ವಾಗತಿಸಿದರು. ಮಿಮಿಕ್ರಿ ಈಶ್ವರಯ್ಯ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.