ತುಮಕೂರು

37 ಭಿಕ್ಷುಕರಿಗೆ ಮತದಾನ ಭಾಗ್ಯ

Published On :

ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 37 ಮಂದಿ ಭಿಕ್ಷುಕರು ಇದೇ ಮೊದಲ ಬಾರಿಗೆ ಮತದಾನ ಮಾಡಿದರು. ಹೆಗ್ಗೆರೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿರುವ ಭಿಕ್ಷುಕರೇ ಮತದಾನ ಭಾಗ್ಯ ಪಡೆದವರು. ಜಿಲ್ಲಾಡಳಿತ, ನಿರಾಶ್ರಿತರ ಪರಿಹಾರ ಸಮಿತಿ ಇವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಗುರುತಿನ ಚೀಟಿ ನೀಡಲಾಗಿತ್ತು. 37 ಭಿಕ್ಷುಕರು ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದಾರೆ.
'125ರಲ್ಲಿ ಕಾಂಗ್ರೆಸ್ ಗೆಲವು ಖಚಿತ'
ಹಾಸನ: ಭ್ರಷ್ಟ, ಕೋಮುವಾದಿ ಬಿಜೆಪಿ  ದುರಾಡಳಿತದಿಂದ ಪಾರಾಗಲು ಜನತೆ ರಾಜ್ಯಾದ್ಯಂತ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದು, ಕಾಂಗ್ರೆಸ್ ಅತ್ಯಧಿಕ ಮತಗಳ ಅಂತರದಿಂದ ಸುಮಾರು 125 ಕ್ಷೇತ್ರಗಳಲ್ಲಿ  ಗೆಲವು ಸಾಧಿಸುವುದು ಖಚಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ಶ್ರೀಧರ್ಕಲಿವೀರ್ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸ್ವಂತ ಬಲದಲ್ಲಿ ಅಧಿಕಾರ ಹಿಡಿಯಲಿದ್ದು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು  ಹಾಗೂ ಎಲ್ಲ ಜಾತಿ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಬಡತನ, ನಿರುದ್ಯೋಗ ನಿವಾರಿಸಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿದೆ ಎಂದು ಹೇಳಿದರು.
ಹೆಜ್ಜೇನು ದಾಳಿ
ತುಮಕೂರು: ಹೆಜ್ಜೇನು ದಾಳಿಯಿಂದ ಮತಗಟ್ಟೆಯೊಂದರಲ್ಲಿ ಮತದಾನಕ್ಕೆ ಅಡ್ಡಿಯಾದ ಘಟನೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಊರ್ಡಿಗೆರೆಯ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ ನಡೆದಿದೆ. ಹೆಜ್ಜೇನು ದಾಳಿಯಿಂದ ನಾಲ್ಕು ಜನ ಗಾಯಗೊಂಡಿದ್ದಾರೆ. ಮತದಾನ ಸಂದರ್ಭದಲ್ಲಿ ಮತದಾರರು ಗದ್ದಲ ಎಬ್ಬಿಸಿದರು. ಪಕ್ಕದಲ್ಲೇ ಮರದಲ್ಲಿದ್ದ ಹೆಜ್ಜೇನು ಹಿಂಡು ಗದ್ದಲಕ್ಕೆ ಹರಡಲಾರಂಭಿಸಿತು. ಇದರಿಂದ ಮತದಾರರು ಓಡಿದರು. ಹೀಗಾಗಿ ಸ್ವಲ್ಪ ಕಾಲ ಗೊಂದಲ ಉಂಟಾಯಿತು. ನಂತರ ಬೆಂಕಿ ಹಚ್ಚಿ ಹೆಜ್ಜೇನು ಓಡಿಸಿ ಸುಗಮ ಮತದಾನಕ್ಕೆ ಅವಕಾಶ ನೀಡಲಾಯಿತು.
ಮತ ಪತ್ರ ಅವಾಂತರ
ತುಮಕೂರು: ಸಾಮಾನ್ಯ ಮತದಾರರಿಗೂ ಸರ್ಕಾರಿ ನೌಕರರಿಗೆ ಬ್ಯಾಲೆಟ್ ಪೇಪರ್ ನೀಡಿದ ಘಟನೆ ನಗರದ ಚಿಕ್ಕಪೇಟೆಯ ಮತಗಟ್ಟೆಯಲ್ಲಿ ನಡೆದಿದೆ. ಪ್ರಾಂತ ರೈತ ಸಂಘದ ಬಿ. ಉಮೇಶ್ ಅವರು ಮತದಾನಕ್ಕೆ ಹೋದರು. ಆದರೆ ಇವರಿಗೆ ಸರ್ಕಾರಿ ನೌಕರರಿಗೆ ನೀಡಿದ ಬ್ಯಾಲೆಟ್ಪೇಪರ್ ನೀಡಿದ್ದನ್ನು ನೋಡಿ ಹೌಹಾರಿದರು. ಕಡೆಗೆ ಅದನ್ನು ಸರಿಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.'
ಜಾವಗಲ್: ಶೇ. 70
ಜಾವಗಲ್: ಹೋಬಳಿಯಾದ್ಯಂತ ಶಾಂತಿಯುತವಾಗಿ ಮತದಾನ ನಡೆಯಿತು. ಹೋಬಳಿಯ 57 ಮತಗಟ್ಟೆಗಳಲ್ಲಿ ಬೆಳಿಗ್ಗೆ  ಮಂದಗತಿಯಲ್ಲಿ ಪ್ರಾರಂಭವಾದ ಪ್ರಕ್ರಿಯೆ ಸಂಜೆ ವೇಳೆಗೆ ಚುರುಕುಗೊಂಡು, ಶೇ. 70ರಷ್ಟು ಮತದಾನ ನಡೆದಿದೆ.   ಜಾವಗಲ್ನ ಒಟ್ಟು 9 ಮತಗಟ್ಟೆಗಳಿಂದ 6330 ಮತಗಳಿಗೆ 4437 ಮತಗಳು ಚಲಾವಣೆಗೊಂಡು ಶೇ. 70 ರಷ್ಟು ಮತದಾನ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.