ತುಮಕೂರು

ಅಪರಿಚಿತ ಹುಡುಗನ ಶವ ಪತ್ತೆ

Published On :

ಕುಣಿಗಲ್: ಪಟ್ಟಣದ ದೊಡ್ಡಕೆರೆಯಲ್ಲಿ ಅಪರಿಚಿತ ಹುಡುಗನ ಶವ ಪತ್ತೆಯಾಗಿದೆ.  ಮಂಗಳವಾರ  ಹುಡುನ ಶವ ತೇಲುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ, ಪಿಎಸೈ ಗುರುಪ್ರಸಾದ್ ಸಿಬ್ಬಂದಿ ಪರಿಶೀಲಿಸಿದ್ದು ಹುಡುಗ 12 ವರ್ಷ ಪ್ರಾಯದವನಾಗಿದ್ದಾನೆ. ಹೆಚ್ಚಿನ ವಿವರ ತಿಳಿದು ಬಂದಿಲ್ಲ, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಡಿಕ್ಕಿ: ಯುವತಿ ಸಾವು  
ಕುಣಿಗಲ್: ರಸ್ತೆದಾಟುತ್ತಿದ್ದ ಯುವತಿಗೆ, ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡದ ಕಾರಣ, ಯುವತಿ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ರಾಹೆ 48ರ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಾಗಡಿಪಾಳ್ಯ ಗ್ರಾಮದ ಬಳಿ ಮಂಗಳವಾರ ವಲ್ಧ್ಯಾಹ್ನ ನಡೆದಿದೆ. ಮೃತಪಟ್ಟವಳನ್ನು ಮಾಗಡಿಪಾಳ್ಯ ಗ್ರಾಮದ ಐರೀಸ್ ಬಾನು (20ವರ್ಷ) ಎಂದು ಗುರುತಿಸಲಾಗಿದೆ, ಹಾಸನದ ಕಡೆಗೆ ತೆರಳುತ್ತಿದ್ದ ಲಾರಿ ಚಾಲಕನ, ಅತಿವೇಗ ಹಾಗೂ ಅಜಾಗರೂಕತೆಯಿಂದ ಘಟನೆ ಸಂಭವಿಸಿದ್ದು,ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹಗಲಲ್ಲೇ ಕಳ್ಳತನ
ಶಿರಾ : ಪಟ್ಟಣದ ಸೊಪ್ಪಿನಹಟ್ಟಿ ವಾಸಿ ಮಂಜುನಾಥ ಎಂಬುವರ ಮನೆಗೆ ಹಗಲಿನಲ್ಲೆ ನುಗ್ಗಿದ ಕಳ್ಳರು 40 ಸಾವಿರ ಹಣ ಹಾಗೂ 28 ಗ್ರಾಂ. ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ. ಮಂಜುನಾಥ್ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಪತ್ನಿ ಆಸ್ಪತ್ರೆಗೆ  ಹೋಗಿದ್ದಾಗ ಮನೆಯಲ್ಲಿ ಯಾರು ಇಲದಾಗ ಕಳ್ಳರು ಬೀಗ ಮುರಿದು ಒಳ ಹೊಕ್ಕಿರಬಹುದೆಂದು ಶಂಕಿಸಲಾಗಿದೆ. ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಾಲದ ಹೊರೆ; ವ್ಯಕ್ತಿ ನೇಣಿಗೆ ಶರಣು
ಶಿರಾ : ಸಾಲದ ಹೊರೆ ತಾಳಲಾಗದೆ ವ್ಯಕ್ತಿಯೊಬ್ಬ ನೇಣಿಗೆ ಶರಣಾದ ಘಟನೆ ತಾಲೂಕಿನ ಚಿಕ್ಕದಾಸರಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಹನುಮಂತರಾಯಪ್ಪ (50) ಎಂಬಾತ ಹೊಸ ಮನೆ ಕಟ್ಟಲೆಂದು ಕೈಸಾಲ ಮಾಡಿದ್ದು ತೀರಿಸುವುದು ಹೇಗೆ ಎಂಬ ಚಿಂತೆಯಲ್ಲೆ ತಮ್ಮ ಹಳೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಕಳ್ಳಂಬೆಳ್ಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.