ಬೇಸಿಗೆ ಶಿಬಿರ ಸಮಾರೋಪ
ಕ.ಪ್ರ. ವಾರ್ತೆ ತುಮಕೂರು ಮೇ 11
ಕಳೆದ 5 ದಿನಗಳಿಂದ ನಗರದ ಹೊರಪೇಟೆಯ ಬಾಪೂಜಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಸಮಾನ ಮಕ್ಕಳ ಮಂಟಪದ ಬೇಸಿಗೆ ಶಿಬಿರ “ÈÚßOÚQ×Ú ಹಕ್ಕುಗಳು ನಮ್ಮ Oæç¾ÚßÆÇ’ ಎಂಬ ರೂಪಕದೊಂದಿಗೆ ಸಮಾರೋಪಗೊಂಡಿತು.
ಕೊಳಗೇರಿಗಳಲ್ಲಿರುವ ಪ್ರತಿಭೆ ಹೊರತರುವ ಉದ್ದೇಶದಿಂದ ಚಿತ್ರಕಲೆ ರಂಗತಾಲೀಮು, ತಮಟೆ, ಡ್ಯಾನ್ಸ್ ಮತ್ತು ಮಕ್ಕಳ ಹಕ್ಕುಗಳ ಹಾಡುಗಳನ್ನು ಈ ಶಿಬಿರದಲ್ಲಿ ತರಬೇತಿಗೊಳಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಿಂಗ್ರಿ ನರೇಶ್ ಮಕ್ಕಳಿಗೆ ಈ 5 ದಿನಗಳಲ್ಲಿ ಅಭಿನಯದ ವಿಧಾನ ಮತ್ತು ಯಕ್ಷಗಾನ ಹೇಳಿಕೊಟ್ಟರು.
ಕೊಳಗೇರಿಗಳಲ್ಲಿರುವ ವಿಫುಲವಾದ ಜನಪದ ಸಂಪತ್ತು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಈ ಶಿಬಿರ ಅಯೋಜಿಸಿರುವುದು ನಮ್ಮ ಮಕ್ಕಳಲ್ಲಿ ಕನಸು ಕಾಣುವಂತೆ ಮಾಡಿದೆ ಎಂಬ ಮಾತನ್ನು ಸ್ಲಂ ಲೇಬರ್ ಕಾಲೋನಿ ಸ್ಲಂನ ನಿರ್ಮಲ ಹೇಳಿದರು.
ಸ್ಪರ್ಧೆಯ ಈ ಜಗತ್ತಿನಲ್ಲಿ ವಂಚಿತ ಸಮುದಾಯಲ್ಲಿ ಇರುವ ಮಕ್ಕಳ ಪ್ರತಿಭೆಯನ್ನು ಕೌಶಲ್ಯಪೂರ್ವಕವಾಗಿ ವೃದ್ಧಿಯಾಗುತ್ತಿರುವುದು ಮುಂದೆ ಸಮಾಜ ಕಟ್ಟಲು ಸಹಕಾರಿಯಾಗುತ್ತೆ ಎಂದು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಅನುಪಮಾ ಇದೇ ಸಂದರ್ಭದಲ್ಲಿ ಹೇಳಿದರು.
ಸಮಾರೋಪ ನುಡಿಗಳನ್ನಾಡಿದ ಪತ್ರಕರ್ತ ಎಸ್. ನಾಗಣ್ಣ, ಈ ಶಿಬಿರವನ್ನು ಮುಂದಿನ ದಿನಗಳಲ್ಲಿ ಕನಿಷ್ಠ 10 ದಿವಸಗಳಾದರೂ ನಡೆಸಿ ಶೋಷಿತ ಸಮುದಾಯಗಳಲ್ಲಿರುವ ಜನಪದ ಶ್ರೀಮಂತಿಕೆ ಪ್ರೋತ್ಸಾಹಿಸಲಾಗುವುದು ಎಂದರು. ಕಾರ್ಮಿಕ ಮುಖಂಡರಾದ ಸೈಯದ್ ಮುಜೀಬ್ ಮಾತನಾಡಿ, ಮಕ್ಕಳ ಮನಸ್ಸಿನೊಂದಿಗೆ ಬೆರೆತು ಬೇಸಿಗೆ ಶಿಬಿರ ಮಾಡುತ್ತಿರುವ ಸ್ಲಂ ಸಮಿತಿ ಮತ್ತು ಸಂಪನ್ಮೂಲ ವ್ಯಕ್ತಿಗಳು ನಿಜವಾಗಲು ಅಭಿನಂದನೆಗೆ ಅರ್ಹರು ಎಂದರು.
ಬಾಪೂಜಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಎಸ್. ಚಿದಾನಂದ, ಡಿಂಗ್ರಿ ನರಸಪ್ಪ, ಸೈಯದ್ ಅಲ್ತಾಪ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ವಹಿಸಿದ್ದರು. 8 ಸ್ಲಂಗಳ 48 ಮಕ್ಕಳು, 8 ಶಿಕ್ಷಕರು ಪಾಲ್ಗೊಂಡಿದ್ದರು. ಶಿಬಿರದಲ್ಲಿ 18 ಪ್ರತಿಭಾವಂತ ಮಕ್ಕಳನ್ನು ಮುಂದಿನ ತರಬೇತಿಗೆ ಗುರುತಿಸಲಾಯಿತು. ಶಿಬಿರದ ಸಂಯೋಜನೆಯನ್ನು ಶೆಟ್ಟಳಯ್ಯ, ಗಾಯಿತ್ರಿ, ಕೋಮಲ, ರಘು, ಅರುಣ, ಲತಾ, ಶೃತಿ, ಕೆಂಪೇಶ್ವರಿ ಆಯೋಜಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

