ಇಂದು ಡಾ. ಶರ್ಮಗೆ ಸನ್ಮಾನ
ತುಮಕೂರು: ಇಲ್ಲಿನ ಎಸ್ಐಟಿ ಸಭಾಂಗಣದಲ್ಲಿ ಮೇ 12ರಂದು ಸಂಜೆ 5.30 ಕ್ಕೆ ನಾಗರಿಕ ಸಮಿತಿ ವತಿಯಿಂದ ಡಾ. ಎಸ್.ಸಿ. ಶರ್ಮಾ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ನೇತೃತ್ವವನ್ನು ಡಾ. ಶಿವಕುಮಾರ ಸ್ವಾಮೀಜಿ ವಹಿಸಲಿದ್ದಾರೆ. ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವೀರೇಶಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತರಿರುವರು. ಎಂ.ಎನ್. ವೆಂಕಟಾಚಲಯ್ಯ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಸ್ಐಟಿ ನಿರ್ದೇಶಕ ಡಾ.ಎಂ.ಎನ್. ಚನ್ನಬಸಪ್ಪ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕೆ.ಎಸ್. ಸಚ್ಚಿದಾನಂದ ಮೂರ್ತಿ ಆಗಮಿಸಲಿದ್ದಾರೆ.
ಸಚಿವ ಸ್ಥಾನ ನೀಡಲು ಒತ್ತಾಯ
ತಿಪಟೂರು: ಶಾಸಕರಾದ ಕೆ.ಷಡಕ್ಷರಿ ಅವರಿಗೆ ಜಾತಿಭೇದವಿಲ್ಲದೆ ಎಲ್ಲಾ ವರ್ಗದ ಜನರು ಅತ್ಯಧಿಕ ಮತ ನೀಡುವ ಮೂಲಕ ವಿಧಾನಸಭೆಗೆ ಆರಿಸಿ ಕಳುಸಿದ್ದಾರೆ. ಆದ್ದರಿಂದ ಈ ಎಲ್ಲಾ ಜನರ ಆಸೆಯಂತೆ ಇವರನ್ನು ಕ್ಯಾಬಿನೆಟ್ ದರ್ಜೆಯ ಸಚಿವರನ್ನಾಗಿ ನೇಮಕ ಮಾಡಬೇಕೆಂದು ವೀರಶೈವ ಮಹಾಸಭಾ ಉಪಾಧ್ಯಕ್ಷ ಮಾದೀಹಳ್ಳಿ ಎಂ.ದಯಾನಂದಸ್ವಾಮಿ ಒತ್ತಾಯಿಸಿದ್ದಾರೆ.
ಮತ್ತೆ ಚಿರತೆ ಪ್ರತ್ಯಕ್ಷ
ಕಿಕ್ಕೇರಿ: ಇಲ್ಲನ ಗೂಬೆಗುಡ್ಡದ ಬಳಿ ಅಗಿಂದಾಗ್ಗೆ ಚಿರತೆ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಬೋರೆಯ ಮೇಲೆ ವಾಸವಾಗಿರುವ ಸಾಕಷ್ಟು ರೈತರು, ಫಾರಂ ಹೌಸ್ನಲ್ಲಿರುವವರಿಗೆ ಈಗ ಚಿರತೆ ಭಯ ಮೂಡಿದೆ. ರಾತ್ರಿ ವೇಳೆಯಿರಲಿ, ಬೆಳಗ್ಗಿನ ವೇಳೆಯಲ್ಲಿಯೇ ಧೈರ್ಯವಾಗಿ ಸಂಚರಿಸಲು ಆಗದ ಸ್ಥಿತಿ ಇದೆ. ಗುಡ್ಡದ ಬಳಿ ಇರುವ ವಿಜಯಲಕ್ಷ್ಮಿ ಅವರ ಮನೆಯ ಸಾಕಷ್ಟು ಕೋಳಿ ಮರಿಗಳು ಚಿರತೆಗೆ ಆಹುತಿಯಾಗಿವೆ. ಅಲ್ಲದೆ, ಫಾರಂ ಹೌಸ್ನಲ್ಲಿರುವ ನಾಯಿಗಳು, ಗುಡ್ಡಗಾಡಿನಲ್ಲಿ ಓಡಾಡುವ ಬೀದಿ ನಾಯಿಗಳನ್ನು ಚಿರತೆಗಳು ತಿಂದು ಹಾಕಿವೆ. ರಾತ್ರಿ ವೇಳೆಯಲ್ಲಿ ಚಿರತೆ ಮನೆಯ ಬಾಗಿಲ ಮುಂದೆ ಶಬ್ಧ ಮಾಡುವುದನ್ನು ಕೇಳಿದ್ದೇವೆ. ಆರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಮಾಹಿತಿ ತಿಳಿಸಿದರೂ ಪ್ರಯೋಜನವಾಗಿಲ್ಲ. ನಿತ್ಯವೂ ಒಂಟಿಯಾಗಿ ಓಡಾಡಲು, ರಾತ್ರಿ ವೇಳೆ ಹೊರಗಡೆ ಹೋಗುವುದೆ ಕಷ್ಟವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಚಿನ್ನದ ನಾಣ್ಯ ಮಾರಾಟ
ಮಂಡ್ಯ: ಭಾರತ ಸರ್ಕಾರದ ಅಧೀನದಲ್ಲಿರುವ ಮಂಡ್ಯ ಪ್ರಧಾನ ಅಂಚೆ ಕಚೇರಿಯಲ್ಲಿ ಚಿನ್ನದ ನಾಣ್ಯಗಳನ್ನು ಅಕ್ಷಯ ತೃತೀಯ ಮೇ 13 ಮತ್ತು ಪುಷ್ಯ ನಕ್ಷತ್ರ ಮೇ 15 ಮತ್ತು 16ರಂದು 7.5 ರಿಯಾಯಿತಿ ದರದಲ್ಲಿ 24 ಕ್ಯಾರೆಟ್ನ ಶೇ.99.99 ಪರಿಶುದ್ಧವಾದ ಸ್ವಿಸ್ ಪ್ರಮಾಣಿತ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

