ಹುಡಾ ಅಧ್ಯಕ್ಷರ ರಾಜಿನಾಮೆ
ಹಾಸನ: ನೂತನ ಮುಖ್ಯಮಂತ್ರಿಗಳು ಹಿಂದಿನ ಸರ್ಕಾರದಲ್ಲಿ ನಿಗಮ, ಮಂಡಳಿ ಅಧ್ಯಕ್ಷರು ರಾಜಿನಾಮೆ ನೀಡಬೇಕೆಂದು ಆದೇಶಿಸಿರುವ ಹಿನ್ನೆಲೆಯಲ್ಲಿ ತಾವು ಹಾಸನ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹುಡಾ ಅಧ್ಯಕ್ಷ ನವಿಲೆ ಅಣ್ಣಪ್ಪ ತಿಳಿಸಿದ್ದಾರೆ.
ಮಂದಗತಿಯಲ್ಲಿ ರಸ್ತೆ ಕಾಮಗಾರಿ
ಹಾಸನ: ಮೂಡಿಗೆರೆ, ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವ ಕಾರಣ ಹದಗೆಟ್ಟಿರುವ ರಸ್ತೆಯಿಂದ ಅರಸೀಕೆರೆ ತಾಲೂಕಿನ ಬಾಣಾವರ ಮತ್ತು ಕಣಕಟ್ಟೆ ಹೋಬಳಿಯ ಜನರು ಸಂಚರಿಸಲು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ. ತಾಲೂಕಿನ ಜಾವಗಲ್ ಹೋಬಳಿ ಮಾರ್ಗದಲ್ಲಿ ಹಾದು ಬರುವ ರಾಷ್ಟ್ರೀಯ ಹೆದ್ದಾರಿ 232 ಮೂಡಿಗೆರೆ, ಚಿಕ್ಕ ಬಳ್ಳಾಪುರ ರಸ್ತೆಯ ಅಭಿವೃದ್ಧಿ ಕಾಮಗಾರಿ ಎರಡು ವರ್ಷಗಳಿಂದ ನಡೆಯುತ್ತಿರುವ ಹಿನ್ನಲೆಯಲ್ಲಿ ವಾಹನಗಳ ಸಂಚಾರಕ್ಕೆ ಇನ್ನಿಲ್ಲದ ತೊಂದರೆ ಎದುರಾಗುತ್ತಿವೆ. ಪ್ರತಿನಿತ್ಯ ಈ ಮಾರ್ಗದಲ್ಲಿ ಹಾದು ಹೋಗುವ ವಾಹನಗಳು ಸುಮಾರು 40 ಕಿ.ಮೀ ದೂರದವರೆಗೆ ಹರಸಾಹಸ ಮಾಡಿ ಹೋಗಬೇಕಾಗಿದೆ. ಹೀಗಾಗಿ ಪ್ರತಿ ದಿನ ನರಕ ಯಾತನೆ ಅನುಭವಿಸಬೇಕಾಗಿದೆ. ಈ ಮಾರ್ಗದ ಶಾನೆಗೆರೆ, ಕಲ್ಲಸಾದರಹಳ್ಳಿ, ಕಣಕಟ್ಟೆ ಗ್ರಾಮಗಳ ಜನರಿಗೆ ವಾಹನಗಳ ಹೊಗೆ ಮತ್ತು ರಸ್ತೆಗಳಲ್ಲಿನ ವ್ಯಾಪಕ ಮಣ್ಣು, ಧೂಳು ಉಸಿರುಗಟ್ಟಿಸುವಂತಹ ವಾತಾವರಣ ಉಂಟು ಮಾಡಿದೆ. ಕಾಮಗಾರಿ ಸಂಬಂಧ ರಸ್ತೆಯಲ್ಲಿ ಹರಡಿರುವ ಜಲ್ಲಿ ಕಲ್ಲುಗಳು ವಾಹನಗಳ ಚಕ್ರಗಳಿಗೆ ಸಿಕ್ಕಿ ಸಿಡಿದು ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿರುವ ಘಟನೆಗಳೂ ಉಂಟು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ವರಿತವಾಗಿ ನಿರ್ವಹಿಸಲು ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಳೆ ಶಂಕರ ಜಯಂತಿ
ಅರಸೀಕೆರೆ: ತಾಲೂಕು ಬ್ರಾಹ್ಮಣ ಸಂಘ, ತಾಲೂಕು ಬ್ರಾಹ್ಮಣ ಯುವಕ ಸಂಘ, ಸೀತಾ ಮಹಿಳಾ ಸಂಘ ಮತ್ತಿತರ ಸಂಘಟನೆಗಳ ಸಹಯೋಗದಲ್ಲಿ ಮೇ 15 ರಂದು ಪಟ್ಟಣದ ವಾಚನಾಲಯ ರಸ್ತೆಯಲ್ಲಿರುವ ಶ್ರೀಭವಾನಿ ಶಂಕರ ದೇವಾಲಯದಲ್ಲಿ ಶ್ರೀ ಶಂಕರ ಭಗವತ್ಪಾದರ ಜಯಂತಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ಭವಾನಿ ಶಂಕರರಿಗೆ ಹಾಗೂ ಆದಿಶಂಕರಾಚಾರ್ಯರಿಗೆ ರುದ್ರಾಭಿಷೇಕ ವಿಶೇಷ ಪೂಜಾಧಿಗಳು, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದ್ದು ಮಹಾಮಂಗಳಾರತಿ ನಂತರ ಪ್ರಾಕಾರೋತ್ಸವ ನಡೆಯಲಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶಂಕರ ಭಗವತ್ಪಾದರ ಕೃಪೆಗೆ ಪಾತ್ರರಾಗಬೇಕೆಂದು ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ರಮೆಶ್, ಕಾರ್ಯದರ್ಶಿ ಎಚ್.ಎಂ.ರಾಮಚಂದ್ರರಾವ್ ಕೋರಿದ್ದಾರೆ.
'ಛಲವಿದ್ದರೆ ಯಾವ್ದೂ ಕಷ್ಟವಲ್ಲ'
ಸಕಲೇಶಪುರ: ಸಾಧಿಸುವ ಛಲವಿದ್ದರೆ ಯಾವುದೂ ಕಷ್ಟವಲ್ಲ. ವಿದ್ಯಾರ್ಥಿಗಳು ಓದುವುದರ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಕಾಳಜಿ ಹೊಂದಿರಬೇಕು ಎಂದು ಪತ್ರಕರ್ತೆ ಜಲಜಾಕ್ಷಿ ಕಿವಿಮಾತು ಹೇಳಿದರು. ತಾಲೂಕಿನ ಕುಡುಗರಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಇದೇ ಕಾಲೇಜಿನಲ್ಲಿ ಕಲಿತು ನಾನೀಗ ವಾರ್ತಾ ವಾಚಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಮುನ್ನಡೆದರೆ ಯಶಸ್ಸು ಖಚಿತ ಎಂದು ತಿಳಿಸಿದರು.
ಐಐಜೆಟಿ ಕೋರ್ಸ್ ಕಾರ್ಯಾಗಾರ
ಮೈಸೂರು: ಸರಸ್ವತಿಪುರಂನಲ್ಲಿರುವ ಐಐಜೆಟಿ ಸಂಸ್ಥೆಯಲ್ಲಿ ಸಿಸಿಎನ್ಎ, ಆರ್ಎಚ್ಸಿಟಿ, ಎಂಸಿಐಟಿಪಿ, ಎ ಪ್ಲಸ್, ಸೆಕ್ಯೂರಿಟಿ ಪ್ಲಸ್ ಮುಂತಾದ ತರಬೇತಿ ನೀಡಲಿದ್ದು, ಮೊ. 9620416725 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

