'ನಾಟಕ ಪರಿಣಾಮಕಾರಿ ಮಾಧ್ಯಮ
ಕ.ಪ್ರ. ವಾರ್ತೆ , ತುಮಕೂರು , ಮೇ 14
ನಾಟಕ ಬಹಳ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದು ಮಕ್ಕಳ ಸಾಹಿತಿ ಪದ್ಮಾ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು. ಅವರು ತುಮಕೂರಿನ ಕಣ್ಮುಚ್ಚಾಲೆ ಮಕ್ಕಳ ಗುಂಪು ಹಾಗೂ ತುಮಕೂರು ವಾಣಿ ಸಂಯುಕ್ತಾಶ್ರಯದಲ್ಲಿ ಬಸವೇಶ್ವರ ಶಾಲಾ ಆವರಣದಲ್ಲಿ ಏರ್ಪಾಟಾಗಿದ್ದ 17 ನೇ ವರ್ಷದ ಮಕ್ಕಳ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಕನಸುಗಳಿಗೆ ಬಣ್ಣ ತುಂಬೋಣ ಎಂದ ಅವರು, ಮಕ್ಕಳ ನಾಟಕಗಳು ಮಕ್ಕಳನ್ನು ಜ್ಞಾನವಂತರನ್ನಾಗಿ ಮಾಡಲು ಸಹಕಾರಿ ಎಂದರು. ಜೀವನದ ಅವಶ್ಯಕತೆಗೆ ತಕ್ಕಂತೆ ಮೌಲ್ಯಪ್ರಜ್ಞೆಯನ್ನು, ನೈತಿಕತೆ, ಅಭಿರುಚಿಗಳನ್ನು ಪ್ರತಿಬಿಂಬಿಸುತ್ತದೆ. ನೋಡುಗರ ಮೇಲೆ ಪರಿಣಾಮ ಬೀರುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಣ್ಮಚ್ಚಾಲೆ ಮಕ್ಕಳ ಗುಂಪಿನ ಅಧ್ಯಕ್ಷೆ ರೇಣುಕಾ ಪರಮೇಶ್ ಮಾತನಾಡಿ, ಅನುಕರಣ ಕೌಶಲ್ಯ ಮಗುವಿನಲ್ಲಿ ಸಹಜವಾಗಿರುತ್ತದೆ. ಮಕ್ಕಳ ನಟನಾ ಕೌಶಲ್ಯ ಮಾತಿನ ಚಾಕಚಕ್ಯತೆ, ಸಹಕಾರ ಮನೋಭಾವನೆ, ವ್ಯವಹಾರಿಕ ಜ್ಞಾನ, ಆತ್ಮವಿಶ್ವಾಸ ಇವುಗಳನ್ನು ಬಲಗೊಳಿಸಲು ಇಲ್ಲಿನ ಚಟುವಟಿಕೆಗಳು ಸಹಕಾರಿಯಾಗಿವೆ. ಇಂತಹ ಬೇಸಗೆ ಶಿಬಿರಗಳ ಕಾರ್ಯಕ್ರಮಗಳಲ್ಲಿ ಸ್ವ ಸೇವಾ ಮನೋಭಾವದೊಂದಿಗೆ ತೊಡಗಿಸಿಕೊಳ್ಳುವ ಮಕ್ಕಳಿಗೆ ಶಿಬಿರಗಳು ದಾರಿದೀಪವಾಗಿವೆ ಎಂದರು. ತುಮಕೂರು ವಾಣಿ ಸಂಪಾದಕರಾದ ಗಣೇಶ್‌ಪ್ರಸಾದ್ ಮಾತನಾಡಿದರು.
ತುರುವೇಕೆರೆಯ ರಂಗ ನಿರ್ದೇಶಕ ಚಂದ್ರಶೇಖರ ಚಿ. ತೋಟದ ಪುಸ್ತಕ ಮಳಿಗೆ ಉದ್ಘಾಟಿಸಿದರು. ವಿಜೇತ ಶಿಬಿರಾರ್ಥಿಗಳಿಗೆ, ಸ್ಪರ್ಧಾ ವಿಜೇತರಿಗೆ, ಪೋಷಕರಿಗೆ ಬಹುಮಾನ ಹಾಗೂ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ತ್ಯಾಗಟೂರು ಪುಟ್ಟಸ್ವಾಮಿ, ಚಂದ್ರಕಲಾ ರಾಜಶೇಖರ್, ಎಂ.ವಿ. ಶಾಂತಲ, ಎಸ್.ಪಿ. ಚಂದ್ರಕಲಾ, ಮಂಜುಳಾ, ಯೋಗಪಟು ಜಿ.ವಿ. ಶ್ರೀನಿವಾಸಮೂರ್ತಿ, ಉಪಸ್ಥಿತರಿದ್ದರು. ಮಕ್ಕಳಿಂದ ಇದೇ ವೇಳೆ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.
ಎಸ್. ಮೋನಿಕಾ ಪ್ರಾರ್ಥಿಸಿ, ಬಿ.ಆರ್. ಹರ್ಷಿತಾ ಸ್ವಾಗತಿಸಿ, ಆರೋಗ್ಯ ಇಲಾಖೆಯ ಟಿ.ಆರ್. ಶಾರದಮ್ಮ ವಂದಿಸಿದರು. ಮಕ್ಕಳ ಸಾಹಿತಿ ಸಿದ್ದರಾಜ ಐವಾರ್ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

