'ಪುರುಷರು ದುರಾಭ್ಯಾಸದ ದಾಸರು'
ಕ.ಪ್ರ. ವಾರ್ತೆ , ತುಮಕೂರು , ಮೇ 17
ಪುರುಷ ಪ್ರಧಾನ ಸಮಾಜದಲ್ಲಿ ಪುರಷರೇ ಹೆಚ್ಚು ದುರಭ್ಯಾಸಕ್ಕೆ ದಾಸರಾಗಿ ಹೆಂಡತಿ ಮಕ್ಕಳಿಗೆ ನೋವು ಅಶಾಂತಿ ಕೊಡುವುದರ ಜೊತೆಗೆ ಇಡೀ ಸಮಾಜವನ್ನೇ ಸರ್ವನಾಶ ಮಾಡುತ್ತಾರೆ ಎಂದು ತುಮಕೂರು ತಾಲೂಕು ಎಪಿಎಂಸಿ ಅಧ್ಯಕ್ಷೆ ತಾರಾ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಹೆಬ್ಬೂರು ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದಿಂದ ಹೆಬ್ಬೂರಿನ ಗಣಪತಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ 586 ನೇ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿರು.
ಪ್ರತಿಯೊಬ್ಬರು ಧರ್ಮಸ್ಥಳದ ವತಿಯಿಂದ ನಡೆಸುವ ಶಿಬಿರಕ್ಕೆ ಸೇರಿ ಮದ್ಯಮುಕ್ತರಾಗಿ ಸುಖೀ ಜೀವನದ ಜೊತೆಗೆ ಆದರ್ಶ ವ್ಯಕ್ತಿಗಳಾಗಿ ಬದುಕಬೇಕೆಂದು ಸಲಹೆ ನೀಡಿದರು. ಅಭಿವೃದ್ಧಿ ಯೋಜನೆಗಳು ಯಶಸ್ವಿಯಾಗಬೇಕಾದರೆ ದುರಭ್ಯಾಸ ಮುಕ್ತ ಸಮಾಜ ನಿರ್ಮಾಣವಾಗಬೇಕು.
ಮದ್ಯಪಾನವೆಂಬುದು ದುರಭ್ಯಾಸದ ಮೊದಲ ಮೆಟ್ಟಿಲು. ಇದನ್ನು ಜಾರಿದರೆ ಉಳಿದೆಲ್ಲವನ್ನು ಜಾರಿದಂತೆ ಎಂದು ತಿಳಿದ ವೀರೇಂದ್ರ ಹೆಗ್ಗಡೆಯವರು ಮದ್ಯವ್ಯಸನಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದಕ್ಕಾಗಿ ಕಳೆದ 20 ವರ್ಷದಿಂದ 585 ಮದ್ಯವರ್ಜನ ಶಿಬಿರ ನಡೆಸಿ 40 ಸಾವಿರಕ್ಕೂ ಮಿಕ್ಕಿ ಮದ್ಯ ಮುಕ್ತರಾಗಿರುವರೆಂದು ಜಿಲ್ಲಾ ನಿರ್ದೇಶಕ ಪಿ. ಗಂಗಾಧರ ರೈ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಪಾಂಡುರಂಗಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಯೋಜನಾಧಿಕಾರಿ ಸದಾಶಿವ ಕುಲಾಲ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಯತೀಶ್, ಉದ್ಯಮಿ ರಾಘವೇಂದ್ರ, ಇಲಾಖಾಧಿಕಾರಿ ವೃಶಭೇಂದ್ರ, ಶಿಬಿರಾಧಿಕಾರಿ ಭಾಸ್ಕರ್ ಮತ್ತು ಮೇಲ್ವಿಚಾರಕರಾದ ಮಾಧವ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ 70 ಮಂದಿ ಮದ್ಯವ್ಯಸನಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

