ಕಲಾತ್ಮಕ ಚಿತ್ರಗಳಿಗೆ ಪ್ರೋತ್ಸಾಹ ಬೇಕು: ನೀತು
ತುರುವೇಕೆರೆ, ಮೇ,19: ಕಲಾತ್ಮಕ ಚಲನಚಿತ್ರಗಳಿಗೆ ಪ್ರೇಕ್ಷಕರಿಂದಾಗಲೀ ಅಥವಾ ಚಲನಚಿತ್ರ ಕ್ಷೇತ್ರದಿಂದಾಗಲೀ ಹೆಚ್ಚು ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಚಿತ್ರತಾರೆ ನೀತು ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಚಿದಂಬರೇಶ್ವರ ಉಚಿತ ಗ್ರಂಥಾಲಯದ ವತಿಯಿಂದ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಆಯೋಜಿಸಿರುವ ಪಿ.ಶೇಷಾದ್ರಿಯವರ ರಾಷ್ಟ್ರ ಪ್ರಶಸ್ತಿ ಪಡೆದಿರುವ ಚಲನ ಚಿತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ತಾವು ಪಿ.ಶೇಷಾದ್ರಿಯವರ ಗರಡಿಯಲ್ಲಿ ಪಳಗಿರುವುದರಿಂದ ಕಲಾವಿದೆ ಎನ್ನುವ ಸ್ಥಾನವನ್ನು ಅಲಂಕರಿಸಲು ನೆರವಾಯಿತು ಎಂದರು. ಪಿ.ಶೇಷಾದ್ರಿಯವರು ದೂರದೃಷ್ಟಿಯಿಂದ ನೋಡಿದ ಸಂಗತಿಗಳು ಚಲನಚಿತ್ರಗಳಾಗಿ ಮಾರ್ಪಾಟಾಗಿ ಇಂದು ರಾಜ್ಯ, ಅಂತರರಾಜ್ಯ ಹಾಗೂ ಅಂತರ ರಾಷ್ಟ್ರೀಯ ಮಟ್ಟಕ್ಕೆ ಏರುವಂತಾಗಿದೆ ಎಂದರು.
ಸಾಕ್ಷಿ: ತುರುವೇಕೆರೆ ತಾಲೂಕಿನ ದಂಡಿನಶಿವರದವರಾದ ಪಿ.ಶೇಷಾದ್ರಿಯವರ ಕನಸುಗಳನ್ನು ತಾವೂ ಸಹ ಕಲಾತ್ಮಕ ಚಿತ್ರಗಳನ್ನಾಗಿ ಮೂಡಿಸಲು ಪ್ರಯತ್ನಿಸುವುದಾಗಿ ಚಲನಚಿತ್ರ ನಿರ್ಮಾಪಕ ಕೆ.ಮಂಜು ಹೇಳಿದರು. ಗ್ರಾಮಾಂತರ ಪ್ರದೇಶದಲ್ಲೂ ಅತ್ಯುತ್ತಮ ಕಲಾವಿದರು, ತಂತ್ರಜ್ಞಾರು ಇದ್ದಾರೆ ಎಂಬುದಕ್ಕೆ ಪಿ.ಶೇಷಾದ್ರಿ ಸಹಿತ ಚಿತ್ರರಂಗದಲ್ಲಿರುವ ಅನೇಕ ಗಣ್ಯರೇ ಸಾಕ್ಷಿ ಎಂದು ಹೇಳಿದರು.
ಈ ತಾಲೂಕಿನವರೇ ಆಗಿರುವ ಕೆ.ಮಂಜು ಅವರು ನಿರ್ಮಿಸಿರುವ ಹಲವಾರು ಚಿತ್ರಗಳೂ ಸಹ ಕೇವಲ ವಾಣಿಜ್ಯ ಉದ್ದೇಶಕ್ಕೆ ತಯಾರಿಸದೇ ಕಲಾತ್ಮಕವಾಗಿಯೇ ನಿರ್ಮಿಸಿರುವ ಹಲವಾರು ಚಿತ್ರಗಳನ್ನು ಸಹ ಚಿತ್ಸೋತ್ವವ ಮಾದರಿಯಲ್ಲಿ ಜನರಿಗೆ ತೋರಿಸುವ ಕಾರ್ಯವಾಗಬೇಕಿದೆ ಎಂದು ಸಾಹಿತಿ ಹಾಗೂ ಪತ್ರಕರ್ತ ತುರುವೇಕೆರೆ ಪ್ರಸಾದ್ ಹೇಳಿದರು.
ಚಿತ್ರೋತ್ಸವದ ವ್ಯವಸ್ಥಾಪಕರಾದ ಲಲಿತಾ ರಾಮಚಂದ್ರು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸ್ವಾಮಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ವಹಿಸಿದ್ದರು.
ಸೋಮವಾರದಿಂದ ಪ್ರತಿದಿನ ಸಾಯಂಕಾಲ 6.30 ರಿಂದ 6 ದಿನಗಳ ಕಾಲ ಪಿ.ಶೇಷಾದ್ರಿಯವರ ಮುನ್ನುಡಿ, ಅತಿಥಿ, ಬೇರು, ತುತ್ತೂರಿ, ವಿಮುಕ್ತಿ ಚಿತ್ರಗಳನ್ನು ಚಿದಂಬರೇಶ್ವರ ಉಚಿತ ಗ್ರಂಥಾಲಯದಲ್ಲಿ ಪ್ರದರ್ಶಿಸಲಾಗುವುದು. ಪ್ರದರ್ಶನದ ಬಳಿಕ ಸಂವಾದ ಕಾರ್ಯಕ್ರಮವೂ ಸಹ ನಡೆಯಲಿದೆ. 26 ರಂದು ಬೆಳಗ್ಗೆ 10.30ಕ್ಕೆ ಪಿ.ಶೇಷಾದ್ರಿಯವರೊಂದಿಗೆ ನೇರ ಸಂವಾದ ಕಾರ್ಯಕ್ರಮವನ್ನು ಗಾಯಿತ್ರಿ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ವ್ಯವಸ್ಥಾಪಕರಾದ ರಾಮಚಂದ್ರು ತಿಳಿಸಿದರು. ವಕೀಲ ಡಿ.ಟಿ. ರಾಜಶೇಖರ್ ಸ್ವಾಗತಿಸಿದರು. ಗಂಗಾಧರ್ ಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಷಾ ಶ್ರೀನಿವಾಸ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

