ಸಮಾನತೆಯ ಹರಿಕಾರ ಬಸವಣ್ಣ
ಕ.ಪ್ರ.ವಾರ್ತೆ , ತುಮಕೂರು , ಮೇ 23
ಬಸವಣ್ಣನವರು ಕಲ್ಯಾಣ ರಾಜ್ಯದ ಕನಸು ಕಂಡವರು, ವರ್ಗ, ವರ್ಣ, ಲಿಂಗ ತಾರತಮ್ಯವಿಲ್ಲದ ಸಮಾನತೆಯ ತಳಹದಿಯ ಶರಣ ಧರ್ಮವನ್ನು ಸಂಸ್ಥಾಪಿಸಿದ ಬಸವಣ್ಣನವರು ಸಮಾನತೆಯ ಹರಿಕಾರರೆಂದು ತುಮಕೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ.ಕೆ.ಶಿವರಶ್ಮಿ ಅಭಿಪ್ರಾಯಪಟ್ಟರು.
ಅವರು ಗೂಳೂರಿನ ಸುಫಾ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಜ್ ಸಂಸ್ಥೆಯು ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಏಕ ದೇವೋಪಾಸನೆಯೇ ಕಲ್ಯಾಣ ರಾಜ್ಯದ ಸಂಸ್ಥಾಪನೆಯ ಮೂಲ. ದೇವನೊಬ್ಬ ನಾಮ ಹಲವು ಎಂದು ಬಸವಣ್ಣನವರು ಹೇಳಿದರೆ, ಗಾಡ್ ಇಸ್ ಲೈಟ್ ಎಂದು ಜೀಸಸ್ ಹೇಳಿದರು. ಅಲ್ಲಾ ಏಕ್ ನೂರ್ ಹೇ ಎಂದು ಮುಸ್ಲಿಂ ಬಾಂಧವರು ಹೇಳಿದರೆ, ಗೌತಮ ಬುದ್ಧ, ದಿವ್ಯ ಜ್ಯೋತಿ ಎಂದರು. ಅದನ್ನೇ ಮಹಾವೀರ ಆರ್ಹಂತ ಎಂದರು. ಎಲ್ಲ ಧರ್ಮ ಪ್ರವರ್ತಕರ ಸಂದೇಶವೂ ಒಂದೇ ಆಗಿದೆ. ಆದ್ದರಿಂದ ಇಂದಿನ ಯುವ ಜನಾಂಗ ಜಾತಿ, ಮತ ಪಂಥಗಳನ್ನು ಮರೆತು ಸಮಾನತೆಯ ತಳಹದಿಯ ರಾಷ್ಟ್ರವನ್ನು ಕಟ್ಟುವ ಕಾರ್ಯದಲ್ಲಿ ನಿರತರಾಗಬೇಕು ಎಂದು ಹೇಳಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯ ಸಹಜ ರಾಜಯೋಗದ ಮೂಲಕ ಸದೃಢ ಸಮಾಜವನ್ನು ಕಟ್ಟುವಲ್ಲಿ ನಿರತವಾಗಿದೆ. ಸದಭಿರುಚಿ, ಸಚ್ಚಾರಿತ್ರ್ಯ, ಧರ್ಮಸಮನ್ವಯ, ರಾಷ್ಟ್ರ ಪ್ರೇಮವನ್ನು ಯುವಜನಾಂಗದಲ್ಲಿ ಜಾಗೃತಗೊಳಿಸುತ್ತಿದ್ದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿಶ್ವವಿದ್ಯಾನಿಲಯ ಕನ್ನಡ ಸಹಾಯಕ ಪ್ರಾಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ, ಬಸವಣ್ಣನವರ ಹೋರಾಟದ ಬದುಕು ನಮ್ಮ ಯುವ ಜನಾಂಗಕ್ಕೆ ಮಾದರಿಯಾಗಿದೆ. ಸಮಾಜಮುಖಿ ಚಿಂತನೆಗಳನ್ನೊಳಗೊಂಡಿರುವ ಬಸವಣ್ಣನವರ ವಚನಗಳನ್ನು ಅರ್ಥಮಾಡಿಕೊಂಡು ತಮ್ಮ ಬದುಕುನಲ್ಲಿ ಅಳವಡಿಸಿಕೊಳ್ಳಲು ಯುವಕರಿಗೆ ಕರೆ ನೀಡಿದರು.
ಅಧ್ಯಕ್ಷತೆಯನ್ನು ಸುಫಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಡಾ.ಇಂತಿಯಾಜ್ ಅಹಮದ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಫಾ ಶಿಕ್ಷಣ ಸಂಸ್ಥೆಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

