ತುಮಕೂರು

ಕಾರು ಅಪಘಾತ: ಅಪ್ಪ, ಮಗ ಸಾವು

Published On :

ಕ.ಪ್ರ.ವಾರ್ತೆ   ಕುಣಿಗಲ್   ಮೇ 25
ಕಾರು ಚಾಲಕರ ನಿರ್ಲಕ್ಷ್ಯಕ್ಕೆ ಆಟೋರಿಕ್ಷಾದಲ್ಲಿ ಹೋಗುತ್ತಿದ್ದ ಅಪ್ಪ, ಮಗ ದಾರುಣವಾಗಿ ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ರಾ.ಹೆ. 48ರ ಬೈಪಾಸ್ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ಮೃತರನ್ನು ಬೆಂಗಳೂರು ಲಗ್ಗೆರೆಯ ಚೌಡೇಶ್ವರಿನಗರದ ವಾಸಿ ಮಹಾದೇವಯ್ಯ (55) ಇವರ ಪುತ್ರ ವಿಜಯ್ (30) ಎಂದು ಗುರುತಿಸಲಾಗಿದೆ, ಇವರು ಆಟೋರಿಕ್ಷಾದಲ್ಲಿ ಬೆಳ್ಳೂರು ಕ್ರಾಸ್ನಲ್ಲಿ ತಮ್ಮ ಸಂಬಂಧಿಕರ ಮನೆಗೆ ತೆರಳಿ, ಶನಿವಾರ ಬೆಳಗ್ಗೆ ಬೆಂಗಳೂರಿಗೆ ಹಿಂದಿರುಗುವ ವೇಳೆ, ಪಟ್ಟಣದ ಹೊರವಲಯದ ರಾ.ಹೆ.48ರ ಚತುಷ್ಪಥರಸ್ತೆಯ ಬೈಪಾಸ್ರಸ್ತೆಯ ಉರ್ಕೆಹಳ್ಳಿ ಗ್ರಾಮದ ದೊಂಬರಹಟ್ಟಿ ಕ್ರಾಸ್ ಬಳಿ, ಮಂಗಳೂರಿಗೆ ತೆರಳುತ್ತಿದ್ದ ಡಸ್ಟರ್ ಕಾರು ತೆರಳುತ್ತಿದ್ದು, ಇದರ ಹಿಂದೆಯೇ   ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹುಂಡೈ ಕಾರಿನಲ್ಲಿ ತೆರಳುತ್ತಿದ್ದ ಕಾರು, ಅತಿವೇಗವಾಗಿ ಬಂದು ಡಸ್ಟರ್ ಕಾರನ್ನು ಹಿಂದಿಕ್ಕುವ ಭರದಲ್ಲಿ, ರಸ್ತೆಯ ಡಿವೈಡರ್ ಗುದ್ದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಹುಂಡೈಕಾರು ಡಸ್ಟರ್ ಕಾರಿಗೆ ಗುದ್ದಿ, ವಿರುದ್ಧ ಪಥದ ರಸ್ತೆಗೆ ನುಗ್ಗಿತು. ವಿರುದ್ಧ ಪಥದಲ್ಲಿ ತಮ್ಮ ಪಾಡಿಗೆ ತಾವು ಬೆಂಗಳೂರು ಕಡೆಗೆ ತೆರಳುತ್ತಿದ್ದ ಆಟೋರಿಕ್ಷಾಕ್ಕೆ ಮುಖಾಮುಖಿ ಡಿಕ್ಕಿ ಹೊಡೆಯಿತು, ಇದರಿಂದ ಹಿಂದೇಯೆ ಡಸ್ಟರ್ ಕಾರು ಸಹ ಆಟೋ ರಿಕ್ಷಾಕ್ಕೆ ಗುದಿದ್ದ ಪರಿಣಾಮ ಆಟೋ ರಿಕ್ಷಾದಲ್ಲಿದ್ದ ಅಪ್ಪ, ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರುಗಳಲ್ಲಿದ್ದ ವರ ಪೈಕಿ ಎಲ್ಲರಿಗೂ ಸಣ್ಣ, ಪುಟ್ಟ ಗಾಯಗಳಾಗಿವೆ. ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷ ದರ್ಶಿಗಳು, ಹುಂಡೈ ಕಾರಿನ ಅತಿವೇಗದಿಂದ, ಯಾವುದೇ ತಪ್ಪು ಮಾಡದೆ ತಮ್ಮ ಪಾಡಿಗೆ ಹೋಗುತ್ತಿದ್ದ ಆಟೋರಿಕ್ಷಾದಲ್ಲಿದ್ದವರ ದುರಂತ ಸಾವು ನಿಜಕ್ಕೂ ದುರಾದೃಷ್ಟ ಎಂದು ಮಮ್ಮಲ ಮರುಗಿದರು. ಕುಣಿಗಲ್ ಪಿಎಸೈ ಗುರುಪ್ರಸಾದ್, ಡಿವೈಎಸ್ಪಿ ಉಮಾರಾಣಿ, ಸ್ಥಳಕ್ಕೆ ಭೇಟಿ ನೀಡಿ,ಕಾರಿನ ಚಾಲಕರ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಂಚಾರ ವ್ಯತ್ಯಯ: ಘಟನೆಯಿಂದ ಕೆಲಕಾಲ ರಾಹೆ48ರಲ್ಲಿ ಸಂಚಾರ ವ್ಯತ್ಯಯಗೊಂಡಿದ್ದು, ವಾಹನಗಳನ್ನು ತೆರವುಗೊಳಿಸಿದ ನಂತರ ಸಂಚಾರ ವ್ಯವಸ್ಥೆ ಸುಗಮಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.