ಸಂಗೊಳ್ಳಿ ರಾಯಣ್ಣ ಪ್ರತಿಮೆ ಶಿಲಾನ್ಯಾಸ ಮಾಡಲು ಮನವಿ
ತಿಪಟೂರು: ಜಿಲ್ಲೆಯನ್ನು ಒಳಗೊಂಡಂತೆ ತಿಪಟೂರು ನಗರ ಹಾಗೂ ತಾಲೂಕಿನ 4 ಹೋಬಳಿಗಳಲ್ಲಿ ರಾಷ್ಟ್ರಪ್ರೇಮಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯ ಶಿಲಾನ್ಯಾಸಕ್ಕೆ ಸರ್ಕಾರ ಅನುಮತಿ ನೀಡಿ ಅದಕ್ಕಾಗಿ ತಲಾ 2ಲಕ್ಷ ರು. ಅನುದಾನ ಬಿಡುಗಡೆ ಮಾಡಬೇಕೆಂದು ಸಂಗೊಳ್ಳಿ ರಾಯಣ್ಣ ವೇದಿಕೆ ರಾಜ್ಯಾಧ್ಯಕ್ಷ ಎಲ್.ಪಿ. ಯದುನಂದನ್ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಂಘಟನೆಯ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಗೊಳ್ಳಿ ರಾಯಣ್ಣ ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಅಪ್ರತಿಮ ವೀರ. ಇವರ ತತ್ವಾದರ್ಶಗಳು ಜನತೆಗೆ ದಾರಿ ದೀಪವಾಗಲಿದ್ದು, ಇವರ ಪುತ್ಥಳಿ ಸ್ಥಾಪನೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ದೇಶ, ಭಾಷೆಯ ಬಗ್ಗೆ ಸ್ವಾಭಿಮಾನ ಬೆಳೆಯಲು ಸಹಕಾರಿಯಾಗುವುದು.
ಆದ್ದರಿಂದ ಕೂಡಲೆ ಸರ್ಕಾರ ಈ ಬಗ್ಗೆ ಯೋಜನೆಯನ್ನು ಕೈಗೊಳ್ಳಬೇಕು. ತಾಲೂಕು ಆಡಳಿತಕ್ಕೆ ನಿರ್ದೇಶನ ಕೊಟ್ಟು ಮಹಾನ್ ವ್ಯಕ್ತಿಯ ಶಿಲಾನ್ಯಾಸ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸಭೆಯಲ್ಲಿ ಸಂಘಟನೆಯ ಪ್ರ.ಕಾರ್ಯದರ್ಶಿ ಟೈಗರ್ ರಾಜಶೇಖರ್, ತಾ.ಅಧ್ಯಕ್ಷ ವಸಂತಕುಮಾರ್, ತಾ. ಸಂಘಟನಾ ಕಾರ್ಯದರ್ಶಿ ಮಾಲತೇಶ್, ವಕೀಲ ಚನ್ನಕೇಶವ ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ಮಚ್ಚು ಹಿಡಿದು ಭೀತಿಗೊಳಿಸಿದ ಯುವಕನಿಗೆ ಧರ್ಮದೇಟು
ಕುಣಿಗಲ್: ಪಾನಮತ್ತ ಯುವಕನೋರ್ವ ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು, ಜನವಸತಿ ಪ್ರದೇಶದಲ್ಲಿ ಮನಬಂದಂತೆ ಬೀಸಿ, ನಾಗರಿಕರನ್ನು ಭೀತಿಗೊಳಿಸಿದಾತನನ್ನು ಸಾರ್ವಜನಿಕರು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ.
ವಿಶ್ವ ಎಂಬಾತ ಮದ್ದೂರು ರಸ್ತೆಯ ಮದ್ಯದಂಗಡಿ ಬಳಿ, ಈತನ ಸ್ನೇಹಿತ ಮೂರ್ತಿಯೊಂದಿಗೆ ಕ್ಷುಲಕ ಕಾರಣಕ್ಕೆ ಜಗಳವಾಡಿದ್ದಾನೆ. ಎರಡೂ ಕಡೆಯ ಹುಡುಗರು ಜಗಳಕ್ಕೆ ಇಳಿದಾಗ ಮದ್ಯದಂಗಡಿಯವರು ಸಮಾಧಾನಗೊಳಿಸಿ ಕಳುಹಿಸಿದ್ದರು. ನಂತರ ಪಾನಮತ್ತನಾಗಿದ್ದ ವಿಶ್ವ, ಮಚ್ಚು ಹಿಡಿದು, ಉಪ್ಪಾರರ ಬಡಾವಣೆ, ಬೆಸ್ತರಬೀದಿಯ ಪ್ರದೇಶದಲ್ಲಿ ಸಂಚರಿಸಿ ತನ್ನ ಮೇಲೆ ಹಲ್ಲೆ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅಬ್ಬರಿಸಿ, ಸಿನಿಮೀಯ ರೀತಿಯಲ್ಲಿ ಮಚ್ಚು ಝಳುಪಿಸುತ್ತಾ ಸಂಚರಿಸುತ್ತಾ ಜನವಸತಿ ಪ್ರದೇಶದಲ್ಲಿ ಭೀತಿಯ ವಾತಾವರಣ ನಿರ್ಮಿಸಿದ.
ಯುವಕನೊರ್ವ ಮಚ್ಚು ಝಳುಪಿಸುತ್ತಾ ತಮ್ಮ ಬೀದಿಯಲ್ಲಿ ಸುತ್ತಾಡುತ್ತಿರುವುದನ್ನು ಕಂಡು ಆಕ್ರೋಶಗೊಂಡ ಆ ಬೀದಿಯ ನಾಗರಿಕರು, ವಿಶ್ವನನ್ನು ಹಿಡಿದು, ಥಳಿಸಿ, ಕುಣಿಗಲ್ ಪೊಲೀಸರ ವಶಕ್ಕೆ ನೀಡಿದರು. ಘಟನೆಯಲ್ಲಿ ಸಂತೋಷ್ ಎಂಬಾತನಿಗೆ ಗಾಯಗಳಾಗಿದ್ದು, ವಿಶ್ವ ಜೆಡಿಎಸ್ ಮುಖಂಡರೊಬ್ಬರ ಕಾರಿನ ಚಾಲಕನೆಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

