ನಮ್ಮ ನಡಿಗೆ ಹಳ್ಳಿಯ ಕಡೆಗೆ
ಮಾಗಡಿ : ಕನ್ನಡ ನಾಡು ಕೇವಲ ಗಂಧದ ಬೀಡಲ್ಲ, ಆರೋಗ್ಯದ ತವರು ಎಂದು ಪಾರಂಪರಿಕ ವೈದ್ಯ ಮಹದೇವ್ ಹೇಳಿದರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಿಪ್ಪಸಂದ್ರ ಹೋಬಳಿ ಹೊನ್ನಾಪುರದ ಶಿವಪ್ರಸಾದ ಮನೆಯಂಗಳದಲ್ಲಿ ಏರ್ಪಡಿಸಿದ್ದ ಹಳ್ಳಿಕಟ್ಟೆ ಕಾರ್ಯಕ್ರಮದಲ್ಲಿ ನಮ್ಮ ನಡಿಗೆ ಹಳ್ಳಿಯ ಕಡೆಗೆ ಎಂಬ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ನಮ್ಮ ಮನೆಯ ಸುತ್ತ ಮತ್ತು ತೋಟಗಳ ಸುತ್ತಮುತ್ತಲ ಅಮೃತ ಬಳ್ಳಿ ಇತರೆ ಗಿಡಮೂಲಕೆಗಳನ್ನು ನೆಡಬೇಕೆಂದರು
ಡಾ.ಶಿವಕುಮಾರಸ್ವಾಮೀಜಿ ಯುವಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಳ್ಳಿಕಟ್ಟೆ ಕಾರ್ಯಕ್ರಮ ಗ್ರಾಮೀಣ ಜನತೆಗೆ ಸಹಕಾರಿಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂ.ದಯಾನಂದ್ ಮಾತನಾಡಿ ಪರಿಷತ್ ಗ್ರಾಮೀಣ ಭಾಗದ ಪ್ರಕೃತಿಯ ತಾಯಿ ಬೇರು ಉಳಿಸಿ ಬೆಳೆಸುವ ಕೆಲಸ ಮಾಡಿಕೊಂಡು ಬರುತ್ತಿದೆ ಎಂದರು. ಗಂಗಾಧರ್, ಕು.ಮು.ದಯಾನಂದ್,ಚಂದ್ರಶೇಖರ್, ಬಸವರಾಜು,ವೆಂಕಟೇಶ್, ಸಿಂಗ್ರಿಗೌಡ, ಗಿರೀಶ್ ಹಾಜರಿದ್ದರು.
ಟೋಲ್ ಸಂಗ್ರಹ: ಪ್ರಾಯೋಗಿಕ ತರಬೇತಿ
ಹೊಸಕೋಟೆ: ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಗುತ್ತಿಗೆ ಪಡೆದಿರುವ ಲ್ಯಾನ್ಸ್ಕೊ ಸಂಸ್ಥೆ ಟೋಲ್ ಸಂಗ್ರಹಕ್ಕೆ ತಯಾರಿ ನಡೆಸಿದೆ. ಪೂರ್ವಸಿದ್ಧತೆಗಾಗಿ ವಾಹನಗಳನ್ನು ನಿಲುಗಡೆ ಮಾಡಿ ನೋಂದಣಿ ಮಾಡುವ ಕಾರ್ಯ ಕೈಗೊಳ್ಳಲಾಗಿದೆ. ವಸೂಲಿಗೆ ನಿರ್ದಿಷ್ಟ ದಿನಾಂಕವನ್ನು ಇನೂ ನಿಗದಿಪಡಿಸಿಲ್ಲವಾದರೂ ಬೆಂಗಳೂರಿಗೆ, ಇತರೆ ಸ್ಥಳಗಳಿಂದ ಹಾಗೂ ಪಟ್ಟಣಕ್ಕೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ, ಬಿಎಂಟಿಸಿ ಬಸ್ಗಳ ಪ್ರಯಾಣ ದರ ಕನಿಷ್ಠ 1ರು. ಏರಿಕೆಯಾಗುವ ಸಂಭವವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

