ರಸ್ತೆ ಅಗಲೀಕರಣಕ್ಕೆ ಒತ್ತಾಯ
ಕ.ಪ್ರ. ವಾರ್ತೆ ತಿಪಟೂರು ಮೇ 31
ಇಲ್ಲಿನ ರೇಲ್ವೆ ಗೇಟ್ಬಳಿಯಿಂದ ಗಾಂಧಿನಗರದ ಮೂಲಕ ದಸರೀಘಟ್ಟಕ್ಕೆ ಹೋಗುವ ರಸ್ತೆಯನ್ನು ಅಗಲೀಕರಣ ಮಾಡಬೇಕೆಂದು ಗಾಂಧಿನಗರದ ಹಿತರಕ್ಷಣಾ ವೇದಿಕೆ ಶಾಸಕರನ್ನು ಒತ್ತಾಯಿಸಿದೆ.
ತಾಲೂಕಿನ ಇತಿಹಾಸ ಪ್ರಸಿದ್ದ ರಂಗಾಪುರ-ಕೆರೆಗೋಡಿ ಸುಕ್ಷೇತ್ರ ಮತ್ತು ದಸರೀಘಟ್ಟ ಚೌಡೇಶ್ವರಿ ದೇವಾಲಯಕ್ಕೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಪಟ್ಟಣದ ರೇಲ್ವೆ ಗೇಟ್ನಿಂದ ಗಾಂಧಿನಗರದ ಮೂಲಕವೇ ಹಾದು ದೇವಾಲಯಕ್ಕೆ ಹೋಗಬೇಕಿದ್ದು, ಈ ಮಾರ್ಗದಲ್ಲಿ ರಸ್ತೆಯು ತುಂಬಾ ಕಿರಿದಾಗಿದ್ದು, ವಾಹನ ಸವಾರರಿಗೆ ಸಂಚರಿಸಲು ಸಾಧ್ಯವಾಗದೆ ದಟ್ಟಣೆ ಉಂಟಾಗುತ್ತದೆ. ಅಲ್ಲದೆ, ರಸ್ತೆ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡುವುದು, ತಳ್ಳುಗಾಡಿ ವ್ಯಾಪಾರಿಗಳು, ಕೆಲ ಅಂಗಡಿಗಳವರು ಈ ಕಿರಿದಾದ ರಸ್ತೆಯನ್ನೇ ಆವರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು, 2ವಾಹನಗಳು ಅಕ್ಕಪಕ್ಕದಲ್ಲಿ ಸಂಚರಿಸಲು ಆಗದೆ ಚಾಲಕರು ಪರದಾಡುವಂತಾಗಿದೆ ಎಂದು ಹಿತರಕ್ಷಣಾ ವೇದಿಕೆ ಆರೋಪಿಸಿದೆ.
ಇದರಿಂದಾಗಿ ಪ್ರತಿನಿತ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಗಾಂಧಿನಗರದ ವಾಸಿಗಳು ಹಾಗೂ ಸಾರ್ವಜನಿಕರುಗಳು ಜೀವವನ್ನು ಕೈಯಲ್ಲಿಡಿದುಕೊಂಡೆ ಓಡಾಡುವಂತ ಸಂದಿಗ್ಧ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ನೂತನ ಶಾಸಕರು ಈಗಾಗಲೆ ಕೆಲ ರಸ್ತೆಗಳನ್ನು ಸಾರ್ವಜನಿಕರ ಹಿತದೃಷ್ಠಿಯಿಂದ ಅಗಲೀಕರಣಗೊಳಿಸಲಾಗುವುದೆಂದು ಹೇಳಿರುವಂತೆ,ಗಾಂಧಿನಗರದ ರಸ್ತೆಯ ಎಲ್ಲಾ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಂಡು ಈ ರಸ್ತೆ ಅಗಲೀಕರಣ ಮಾಡಿಸುವ ಮೂಲಕ ಪಾದಚಾರಿ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

