ಟಿ.ಬಿ.ಜೆ ದಲಿತರ ವಿರೋಧಿಯಲ್ಲ
ಶಿರಾ: ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ.ಜಯಚಂದ್ರ ಅವರು ಈವರೆಗಿನ ತಮ್ಮ ರಾಜಕಾರಣದ ಅವಧಿಯಲ್ಲಿ ಎಂದೂ ಕೂಡ ದಲಿತರ ವಿರುದ್ಧ ವರ್ತನೆಯನ್ನು ತೋರಿಲ್ಲ ಎಂದು ಪುರಸಭೆಯ ಮಾಜಿ ಸದಸ್ಯ ಲೋಕೇಶ್ ತಿಳಿಸಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ದಲಿತರಿಗೆ ಒಳಮೀಸಲಾತಿ ಕಲ್ಪಿಸುವ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಜಾರಿಗೆ ತರುವಂತೆ ವಿಧಾನಸಭೆಯಲ್ಲಿ ಪ್ರಪ್ರಥಮವಾಗಿ ಧ್ವನಿ ಎತ್ತಿದ ಮೊದಲ ಶಾಸಕರು ಜಯಚಂದ್ರ ಅವರಾಗಿದ್ದು, ದಲಿತರ ವಿವಿಧ ಜಾತಿ ಜನಾಂಗಗಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಆದಿ ಜಾಂಬವ ಮಠದ ಶ್ರೀಗಳು ದಾನವಾಗಿ ಸರ್ಕಾರಕ್ಕೆ ನೀಡಿದ 2 ಎಕರೆ ಭೂಮಿಯಲ್ಲಿ ಬಾಬು ಜಗಜೀವನ ರಾಂ ಸಮುದಾಯ ಭವನ ನಿರ್ಮಿಸಲು ಸಚಿವರು ಮುಂದಾಗಿದ್ದಾರೆ. ಸ್ವಾಮೀಜಿಗಳು ಸದರಿ ನಿವೇಶನವನ್ನು ಸರ್ಕಾರಕ್ಕೆ ದಾನ ಮಾಡಿದ್ದಾರೆಯೇ ಹೊರತು ಮಾರಾಟ ಮಾಡಿಲ್ಲ. ವೈಯಕ್ತಿಕ ಲಾಭದ ದೃಷ್ಟಿಯಿಂದ ಕೆಲವರು ಬಾಬು ಜಗಜೀವನ ರಾಂ ಸಮುದಾಯ ಭವನವನ್ನು ಈ ಸ್ಥಳದಲ್ಲಿ ಕಟ್ಟದಂತೆ ತಡೆ ಹಿಡಿಯಲು ಪಿತೂರಿ ನಡೆಸಿರುವುದು ನಿಜಕ್ಕೂ ವಿಷಾದನಿಯ ಎಂದರು.
ಜಮೀನು ಅಲಭ್ಯ: ಸಚಿವರು ಸದರಿ ಭವನದ ನಿರ್ಮಾಣಕ್ಕಾಗಿ ಸರ್ಕಾರಿ ಜಾಗವನ್ನು ಹುಡುಕಿದರಾದರೂ ನಗರಕ್ಕೆ ಸಮೀಪದಲ್ಲಿ ಅಷ್ಟೊಂದು ಜಮೀನು ಲಭ್ಯವಾಗದ ಕಾರಣ ಸ್ವಾಮೀಜಿಗಳು ದಾನವಾಗಿ ನೀಡಿದ ಭೂಮಿಯಲ್ಲಿ ಭವನದ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದರು. ಸಚಿವರ ವಿರುದ್ಧ ಜಗಜೀವನ ರಾಂ ಭವನ ನಿರ್ಮಾಣದ ಬಗ್ಗೆ ಕೆಲವು ದಲಿತ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು ಇದು ಸಾಧುವಲ್ಲ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಸಂಸ ಸಂಚಾಲಕ ಲಕ್ಷ್ಮೀಕಾಂತ್, ಸಾಹಿತಿ ಕರಿದಾಸರಹಳ್ಳಿ ನರಸಪ್ಪ, ನಗರಸಭೆ ಸದಸ್ಯ ಬಸವರಾಜು, ಜಮೀನು ದಾನಿ ನರಸಿಂಹಯ್ಯ, ತಾ.ಪಂ. ಮಾಜಿ ಸದಸ್ಯ ಪಿ.ಬಿ.ನರಸಿಂಹಯ್ಯ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

