ಬಾಂಧವ್ಯ ಆರೋಗ್ಯಕರವಾಗಿರಲಿ
ಕ.ಪ್ರ.ವಾರ್ತೆ ಪಾವಗಡ ಸೆ. 6
ಪಾಠ ಪ್ರವಚನ ಹಾಗೂ ಮಾರ್ಗದರ್ಶನ ಸೇರಿದಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದ ಶಾಸಕ ಕೆ.ಎಂ.ತಿಮ್ಮರಾಯಪ್ಪ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಾಂಧವ್ಯ ನಿರಂತರ ಆರೋಗ್ಯಕರವಾಗಿರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ತುಮಕೂರು,ತಾಪಂ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಪಾವಗಡ ವತಿಯಿಂದ ಗುರುವಾರ ಪಟ್ಟಣದ ಎಸ್ಎಸ್ಕೆ ಸಮುದಾಯ ಭವನದಲ್ಲಿ ಏರ್ಪಾಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿಂದಿನ ಕಾಲದ ಶಿಕ್ಷಕರಿಗೂ ಮತ್ತು ಈಗಿನ ಕಾಲದ ಶಿಕ್ಷಕರಿಗೆ ಆಜಗಜಾಂತರ ವ್ಯತ್ಯಾಸವಿದ್ದು, ಹಿಂದಿನ ಕಾಲದ ಶಿಕ್ಷಕರು ಅನೇಕ ರೀತಿಯ ಸಮಸ್ಯೆಗಳಿದ್ದರೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.ಆದರೆ ಈಗಿನ ಕಾಲದ ಶಿಕ್ಷಕರಿಗೆ ಎಲ್ಲಾ ರೀತಿಯ ಅನುಕೂಲಗಳಿದ್ದರೂ ಶಿಕ್ಷಕರು ಕರ್ತವ್ಯ ಮರೆತು ಕೆಲಸ ಮಾಡುತ್ತಾರೆ ಎಂದು ವಿಷಾದಿಸಿದರು. ಗಡಿ ಗ್ರಾಮಗಳ ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಕೂಲ ಸೇರಿದಂತೆ ಗ್ರಾಮೀಣಾ ಪ್ರಯಾಣಿಕರ ಅನುಕೂಲಕ್ಕಾಗಿ ಪಟ್ಟಣದ ಸರ್ಕಾರಿ ಬಸ್ ಡಿಪೋ ಸ್ಥಾಪಿಸಿದ್ದು ಗಡಿ ಪ್ರದೇಶಗಳ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕಿಯರು ಅನುಭವಿಸುವ ಸಮಸ್ಯೆ ಹಿನ್ನಲೆಯಲ್ಲಿ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ತಿಮ್ಮರಾಯಪ್ಪ ಅವರನ್ನು ಶಿಕ್ಷಣ ಇಲಾಖೆ ವತಿಯಿಂದ ಸನ್ಮಾನಿಸಿದರು. ಹಿರಿಯ ಮುಖಂಡ ಎನ್.ತಿಮ್ಮಾರೆ, ಬೆಂಗಳೂರು ಬಸವನಗುಡಿ ಕಾಲೇಜಿನ ಸಂದರ್ಶಕ ಪ್ರಾಧ್ಯಾಪಕ ಬಿ.ಪಿ. ವೀರೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ, ಕ್ರೀಯಾಶೀಲ ಶಿಕ್ಷಕರಿಗೆ ಪ್ರಶಸ್ತಿ ಸೇರಿದಂತೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಲೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.
ಜಿಪಂ ಸದಸ್ಯರಾದ ನಳಿನಿಗೋವಿಂದಪ್ಪ, ಜಯಮ್ಮ ಎಸ್.ಟಿ ನಾಗರಾಜ್, ನಾಗವೇಣಿ ನಾರಾಯಣಪ್ಪ, ರೇಖಾ ಅಂಜನೇಯಲು, ಮುಖಂಡರಾದ ಭೀಮನಕುಂಟೆ ಸತ್ಯಪ್ಪ ಎಸ್.ವಿ. ಗೋವಿಂದಪ್ಪ, ಮೈಲಪ್ಪ ಸೇರಿದಂತೆ ತಹಸೀಲ್ದಾರ್ ಆಲ್ತಾಪ್ ಪಾಷ ತಾಪಂ ಇಒ ರಂಗನಾಥ್, ಬಿಇಒ ಬಿ.ಪಿ.ನಾಗರಾಜಪ್ಪ, ತಾ.ಸಮಾಜ ಕಲ್ಯಾಣಾಧಿಕಾರಿ ವೈ.ಆರ್ ಚೌದರಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

