ಶಸ್ತ್ರ ಚಿಕಿತ್ಸಾ ಶಿಬಿರ
ಮಂಡ್ಯ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಿಂದ ಜಿಲ್ಲೆಯಲ್ಲಿ 2014 ಏಪ್ರಿಲ್ ತಿಂಗಳಲ್ಲಿ ವಿವಿಧ ಸ್ಥಳಗಳಲ್ಲಿ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಏ.2 ರಂದು ಹಲಗೂರು, ಏ.4ರಂದು ಕೆ.ಆರ್.ಪೇಟೆ, 5 ರಂದು ತೂಬಿನಕೆರೆ, 7 ರಂದು ಕೆರಗೋಡು, 8 ರಂದು ಬೆಳಗೊಳ, 9 ರಂದು ಮದ್ದೂರು, 11 ರಂದು ಕೆ.ಎಂ.ದೊಡ್ಡಿ, 15 ರಂದು ಕ್ಯಾತುಂಗೆರೆ, 16 ರಂದು ನಾಗಮಂಗಲ, 19 ರಂದು ಮಳವಳ್ಳಿ, 21 ರಂದು ಕಿಕ್ಕೇರಿ, 22 ರಂದು ಗೆಜ್ಜಲಗೆರೆ, 23 ರಂದು ಬೆಳ್ಳೂರಿನಲ್ಲಿ ಬೆಳಿಗ್ಗೆ 10 ಗಂಟೆಗೆ ಶಿಬಿರ ನಡೆಯಲಿದೆ. 5 ರಂದು ಅರಕೆರೆ, 15 ರಂದು ಗೊರವಾಲೆ ಹಾಗೂ 22 ರಂದು ಕೊಪ್ಪದಲ್ಲಿ ಮಧ್ಯಾಹ್ನ 1 ಗಂಟೆಗೆ ಉದರದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೋರಿದ್ದಾರೆ.
ಪ್ರವಚನ ಇಂದು
ಮಂಡ್ಯ: ನಗರದ ಚಿನ್ಮಯ ಮಿಷನ್ವತಿಯಿಂದ ಏ.2ರಿಂದ ಏ.7ರವರೆಗೆ ಪ್ರತಿನಿತ್ಯ ಸಂಜೆ 6.30ರಿಂದ ರಾತ್ರಿ 8 ಗಂಟೆಯವರೆಗೆ ದಶೋಪನಿಷತ್ಸಾರ ರಾಮಭದ್ರ ಸ್ತೋತ್ರದ ಪ್ರವಚನ ಬೆಂಗಳೂರಿನ ಚಿನ್ಮಯ ಮಿಷನ್ನ ಆಚಾರ್ಯ ಸ್ವಾಮಿನಿ ಸಮತಾನಂದರಿಂದ ಏರ್ಪಡಿಸಲಾಗಿದೆ. ಪ್ರವಚನ ಚಿನ್ಮಯ ಮಿಷನ್ನ ಚಿನ್ಮಯಿ ರಾಮಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಕೊನೆಯ ದಿನ ಶ್ರೀರಾಮನವಮಿ ಆಚರಿಸಲಾಗುವುದು. ಹೆಚ್ಚಿನ ವಿವರಗಳಿಗೆ ದೂ.221442 ಸಂಪರ್ಕಿಸಿ.
ಪೊಲೀಸ್ ಧ್ವಜ ದಿನ
ಮಂಡ್ಯ: ಜಿಲ್ಲಾ ಪೊಲೀಸ್ ಇಲಾಖೆಯಿಂದ ಏ.2 ರಂದು ಬೆಳಿಗ್ಗೆ 7.30 ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಏರ್ಪಡಿಸಲಾಗಿದೆ. ನಿವೃತ್ತ ಆರಕ್ಷಕ ಉಪಾಧೀಕ್ಷಕ ಜಿ.ಹನುಮಂತರೆಡ್ಡಿ ಧ್ವಜವಂದನೆ ಸ್ವೀಕರಿಸಲಿದ್ದಾರೆ ಎಂದು ಎಸ್ಪಿ ಭೂಷಣ್ ಬೊರಸೆ ತಿಳಿಸಿದ್ದಾರೆ.
ಡಿಕ್ಕಿ: ಸವಾರ ಸಾವು
ಕಿಕ್ಕೇರಿ: ಪಟ್ಟಣದ ಹೊರ ಭಾಗದ ಬಂಕ್ ಬಳಿ ರಾಜ್ಯ ಹೆದ್ದಾರಿ ಬದಿಯ ಸಿಮೆಂಟು ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಮೃತ ಬೈಕ್ ಸವಾರ ಅವಿವಾಹಿತ ಪಾಂಡವಪುರದ ದಿ. ಪುಟ್ಟಸ್ವಾಮಿ ಪುತ್ರ ಪಿ.ಆನಂದ್(28) ಎಂದು ಎನ್ನಲಾಗಿದೆ. ಹಾಸನದಲ್ಲಿರುವ ತನ್ನ ಸಹಪಾಠಿಗಳ ಮನೆಗೆ ಯುಗಾದಿ ಹಬ್ಬ ಆಚರಿಸುವ ಸಂಬಂಧ ರಾತ್ರಿ ಸುಮಾರು 11ಗಂಟೆಯಲ್ಲಿ ಪಾಂಡವಪುರದಿಂದ ಯಮಹಾ ಬೈಕ್ನಲ್ಲಿ ಹೋಗುತ್ತಿದ್ದನು. ಆಗ ರಸ್ತೆ ಬದಿಯಲ್ಲಿದ್ದ ಸಿಮೆಂಟು ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ. ಆನಂದ್ನನ್ನು ಚಿಕಿತ್ಸೆಗಾಗಿ ತುರ್ತು ವಾಹನದಲ್ಲಿ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

