ತುಮಕೂರು

ಶಿಕ್ಷಣವಂತರಾಗಿ ಜಾಗೃತರಾದಾಗ ಅಭಿವೃದ್ಧಿ ಸಾಧ್ಯ

Published On :

ತುಮಕೂರು: ಅಂಬೇಡ್ಕರ್ ಆಶಯದಂತೆ ನಾವು ಶಿಕ್ಷಣವಂತರಾಗಿ ಜಾಗೃತರಾದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ  ಎಂದು ಹೆಬ್ಬೂರು ಪೊಲೀಸ್ ಠಾಣೆ ಪಿಎಸ್‌ಐ ಸಿದ್ದರಾಜು ಅಭಿಪ್ರಾಯಪಟ್ಟರು.
ಅವರು ತುಮಕೂರು ತಾಲೂಕು ಹೆಬ್ಬೂರಿನಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದಲಿತರು ಹೆಚ್ಚು ಹೆಚ್ಚು ಮಕ್ಕಳಿಗೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಸಮಾಜ ಸೇವಕ ಪಾಂಡುರಂಗ ಶೆಟ್ಟಿ ಮಾತನಾಡಿ ಸಮಾಜದಲ್ಲಿ ಮೇಲು, ಕೀಳು ಎಂಬ ಭಾವನೆ ದೂರಾಗುತ್ತಿಲ್ಲ. ಪ್ರಜ್ಞಾವಂತರು ಸಮಾಜವನ್ನು ಒಂದೆಡೆ ಕರೆದೊಯ್ಯಲು ಜಾಗೃತಿ ಮೂಡಿಸಬೇಕು ಎಂದರು. ಅಂಬೇಡ್ಕರ್ ಗ್ರಾಮೀಣ ಶೈಕ್ಷಣಾಭಿವೃದ್ಧಿ ಜಾಗೃತ ವೇದಿಕೆ ಅಧ್ಯಕ್ಷ ಸಿರಿವರ ಶಿವಮೂರ್ತಿ ಮಾತನಾಡಿ ಅಂಬೇಡ್ಕರ್ ಆಶಯದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಸಹ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ದಲಿತರು, ಶೋಷಿತರು, ಬಡವರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಬೇಕೆಂದು ತಿಳಿಸಿದರು. ಹೆಬ್ಬೂರಿನ ಅಂಬೇಡ್ಕರ್ ಭವನ ಮಲಮೂತ್ರ ವಿಸರ್ಜನ ಕೇಂದ್ರವಾಗಿದ್ದು ಈ ಕೂಡಲೇ ಈ ಭವನವನ್ನು ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು. ಸಭೆಯಲ್ಲಿ ಸಮಾಜ ಸೇವಕ ರಾಘವೇಂದ್ರ ದಲಿತರು ಎಲ್ಲಾ ರಂಗಗಳಲ್ಲೂ ಏಳಿಗೆ ಹೊಂದಬೇಕೆಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ದಸಂಸ ಸಂಚಾಲಕ ನಿಟ್ಟೂರು ರಂಗಸ್ವಾಮಿ ಅಂಬೇಡ್ಕರ್ ಅವರು ಭಾರತ ರತ್ನ ಸಂವಿಧಾನ ಶಿಲ್ಪಿ. ಅವರು ದಲಿತರ, ಶೋಷಿತರ ದನಿಯಾಗಿದ್ದರು. ಅವರು ನೊಂದವರ ಬಾಳಿಗೆ ಬೆಳಕು ಚೆಲ್ಲಿದರು ಎಂದರು. ದಸಂಸ ಪದಾಧಿಕಾರಿಗಳಾದ ಕೇಬಲ್ ರಘು, ಮರಳೂರು ಕೃಷ್ಣ ಮೂರ್ತಿ, ಕೆಂಪಹನುಮಯ್ಯ, ಸೈಯದ್ ಫಯಾಜ್, ಎಚ್.ಜಿ. ಆನಂದಕುಮಾರ್, ಮಲ್ಲೇಶ್, ಎಚ್.ಡಿ. ಗೋವಿಂದರಾಜು, ಜಗ ದೀಶ್, ಮಣ್ಣೆಮೂರ್ತಿ ಹಾಜರಿದ್ದರು. ಸಂಘಟಕ ಗಾಂಧಿರಾಜ್ ಸ್ವಾಗತಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.