ಸಮರ್ಪಕ ನಿರ್ವಹಣೆ ಇಲ್ಲದೆ ಪಾಳು ಬಿದ್ದ ಪಾರ್ಕ್
ಮಧುಗಿರಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ಗಳಿದ್ದು ಬಹುತೇಕ ಎಲ್ಲ ವಾರ್ಡಗಳಲ್ಲೂ ಸಾರ್ವಜನಿಕರ ಅನುಕೂಲಕ್ಕಾಗಿ ಪಾರ್ಕ್ ನಿರ್ಮಾಣಕ್ಕೆ ಜಾಗ ಮೀಸಲಿಟ್ಟಿದ್ದು ಆ ಪಾರ್ಕಗಳು ಸಮರ್ಪಕ ನಿರ್ವಹಣೆ ಇಲ್ಲದೆ ಪಾಳು ಬಿದ್ದು ಭಣಗುಡುತ್ತಿವೆ.
ಪಟ್ಟಣದ ಪುರಸಭೆ ಆವರಣದ ಪಾರ್ಕ್ ಮಾತ್ರ ನಾಗರಿಕರ ಅನುಕೂಲಕ್ಕೆ ತಕ್ಕಂತೆ ನಿರ್ಮಿಸಿದ್ದು ಬಿಟ್ಟರೆ ಇನ್ನು ಯಾವುದೇ ವಾರ್ಡಗಳಲ್ಲೂ ಪಾರ್ಕ್ ಇದ್ದರೂ ಕೂಡ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ.ಇನ್ನೂ ಕೆಲ ವಾರ್ಡಗಳಲ್ಲಿ ಒತ್ತುವರಿಯಾಗಿದ್ದರೆ ಕೆಲವು ವಾರ್ಡಗಳಲ್ಲಿ ಪಾರ್ಕ್ಗೆ ಜಾಗವೇ ಇಲ್ಲದಂತಾಗಿದೆ.
ಬಡಾವಣೆಗೊಂದು ಉದ್ಯಾನವನ ಎಂಬಂತೆ 7ನೇ ವಾರ್ಡ್ ಲಿಂಗೇನಹಳ್ಳಿಯಲ್ಲಿ ಲಕ್ಷಾಂತರ ರು.ಖರ್ಚು ಮಾಡಿ ಸಾರ್ವಜನಿಕರ ಅನುಕೂಲಕ್ಕಾಗಿ ಸುಸಜ್ಜಿತ ಪಾರ್ಕ್ ನಿರ್ಮಿಸಿದ್ದಾರೆ. ಈ ಪಾರ್ಕ್ ಇದ್ದರೂ ಕೂಡ ಆಳುವವರ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂದಿಸಿ ಬೀಗ ಜಡಿದು ಕೈ ತೊಳೆದು ಕೊಂಡಿದ್ದಾರೆ. ಈ ಪಾರ್ಕ್ನಲ್ಲಿ ಮರ, ಗಿಡ, ಬೆಳೆಸಿ ಉತ್ತಮ ಉದ್ಯಾನವನ್ನವನ್ನಾಗಿ ಮಾಡಲು ಒಳ್ಳೆಯ ವಾತಾವರಣವಿದೆ. ಒಳಗೆ ಸಮುದಾಯ ಭವನ, ಶ್ರೀ ಆಂಜನೇಯಸ್ವಾಮಿ ದೇವಾಲಯ ಕಟ್ಟಿದ್ದಾರೆ. ಸಾರ್ವಜನಿಕರು ವಿಶ್ರಾಂತಿ ಪಡೆಯಲು, ವಾಕಿಂಗ್ ಮಾಡಲು ಮಕ್ಕಳು ಮರಿ ಆಟ ಆಡುವ ಸಲುವಾಗಿ ನಾಗರಿಕರ ಬಳಕೆಗೆ ತಕ್ಕಂತೆ ನಿರ್ಮಿಸಿದ್ದರೂ ಕೂಡ ಸಮ್ಮನೆ ರಾಜಕೀಯ ಕಾರಣದಿಂದಾಗಿ ಎರಡು ಗುಂಪಿನ ನಡುವೆ ಉಂಟಾದ ವಿವಾದದಲ್ಲಿ ಯಾರು ಒಳಗೆ ತೆರಳದಂತೆ ಬೀಗ ಜಡಿದು ನಿರ್ಬಂದ ಹೇರಲಾಗಿದೆ ಎಂದು ಆ ಭಾಗದ ನಾಗರಿಕರು ತಿಳಿಸಿದ್ದಾರೆ.
ಹಂದಿಗಳ ಹಾವಳಿ...
ಮಧುಗಿರಿ ಪಟ್ಟಣದ ಹೃದಯ ಭಾಗದ ಕೆಲವು ದೊಡ್ಡ ಚರಂಡಿಗಳಲ್ಲಿ ಮಡುಗಟ್ಟಿ ನಿಂತ ಕೊಚ್ಚೆ ಮತ್ತು ಹಲವು ಬಡಾವಣೆಗಳ ಖಾಲಿ ನಿವೇಶನಗಳ ಪೊದೆಗಳಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದೆ. ಸೊಳ್ಳೆಗಳ ಸಂತಾನೋತ್ಪತ್ತಿ ವೃದ್ಧಿಯಾಗಿ ಸಂಜೆ ಆದರೆ ಸಾಕು ಜನರ ರಕ್ತ ಹೀರುವುದರಿಂದ ವಿವಿಧ ಮಾರಕ ಕಾಯಿಲೆಗಳಿಗೆ ತುತ್ತಾಗಿ ಮಕ್ಕಳು, ಮರಿ ಹಾಗೂ ಜನರು ಬಳಲುವಂತಾಗಿದೆ. ಪುರಸಭೆ ಮನೆ ಮನೆ ಕಸ ಸಂಗ್ರಹಣೆ ಕಾರ್ಯವನ್ನು ಚೆನ್ನಾಗಿ ಮಾಡುತ್ತಿದೆ. ಆದರೆ ಅದೇ ರೀತಿ ಚರಂಡಿ ಸ್ವಚ್ಛಗೊಳಿಸುವಲ್ಲಿ ಪುರಸಭೆ ಹಿಂದೆ ಬಿದ್ದಿರುವ ಪರಿಣಾಮ ಸೊಳ್ಳೆಗಳ ಕಾಟ ಹೆಚ್ಚಿ ರಾತ್ರಿ ಆದರೆ ಸಾಕು, ಮನುಷ್ಯನ ಸುತ್ತ ಗಿರಕಿ ಹೊಡೆಯುತ್ತವೆ. ಇನ್ನು ಕೆಲವು ಬಡಾವಣೆಗಳಲ್ಲಿ ಚರಂಡಿಗಳೇ ಇಲ್ಲ, ಪಟ್ಟಣ ದಿನೇ ದಿನೇ ಬೃಹದಾಕಾರವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಹೊಸ ಬಡಾವಣೆಗಳಲ್ಲಿ ಮೂಲಭತ ಸೌಕರ್ಯಗಳಿಲ್ಲದೆ ಜನತೆ ಪರದಾಡುವಂತಾಗಿದೆ. ಇನ್ನು ಸೊಳ್ಳೆ ನಾಶಪಡಿಸಲು ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ನಾಗರಿಕರ ಆರೋಪ. ಬೇಸಿಗೆ ರಣ ಬಿಸಿಲು ಜೋರಾಗಿದೆ. ಏಕಶಿಲಾ ಬೆಟ್ಟದ ಹೆಬ್ಬಂಡೆ ಕಾವಿಗೆ ಪಟ್ಟಣದ ಜನತೆ ಬಾಡಿ ಬಸವಳಿದು ಬೆಂಡಾಗಿದ್ದಾರೆ. ಹಾಗಾಗಿ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

