ನಿರ್ಮಲ ಗಂಗಾ ಘಟಕ ಉದ್ಘಾಟನೆ
ಕ.ಪ್ರ.ವಾರ್ತೆ ಮಧುಗಿರಿ ಏ.23
ಬರದ ನಾಡು ಮಧುಗಿರಿಯನ್ನು ಮಧು ಕೆರೆಯನ್ನಾಗಿ ರೂಪಿಸುವ ಜನನಿ ಸೇವಾ ಸಂಸ್ಥೆಯ ಸಾಮಾಜಿಕ ಕಾರ್ಯ ಮೆಚ್ಚುವಂಥದ್ದು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ನುಡಿದರು.
ಮಧುಗಿರಿ ತಾಲೂಕಿನ ಚನ್ನಮಲ್ಲೇನಹಳ್ಳಿಯಲ್ಲಿ ಬೆಂಗಳೂರಿನ ಜನನಿ ಸೇವಾ ಸಂಸ್ಥೆ ನಿರ್ಮಿಸಿರುವ ಶುದ್ಧ ಕುಡಿವ ನೀರು ಒದಗಿಸುವ ನಿರ್ಮಲ ಗಂಗಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಬಯಲು ಸೀಮೆ ಬರದ ನಾಡಿನ ಮಧುಗಿರಿಯಲ್ಲಿ ನೀರು ತುಂಬಲಿ ಎಂದು ಹಾರೈಸಿದ ಸ್ವಾಮೀಜಿ ನಿಷ್ಕಲ್ಮಶ ಹೃದಯದಲ್ಲಿ ಭಗವಂತನ ಪ್ರತಿಬಿಂಬ ಕಾಣುತ್ತದೆ. ಅದೇ ರೀತಿ ಜಲ ಪಂಚಭೂತಗಳಲ್ಲಿ ಒಂದು ಸಕಲ ಜೀರಾಶಿಗಳಿಗೂ ನೀರು ಅತ್ಯಗತ್ಯ. ನಿರ್ಮಿಲವಾದ ನೀರಿನಲ್ಲಿ ಸೂರ್ಯನ ಬಿಂಬ ಕಾಣುವಂತೆ ನೀರನ್ನು ಭಗವಂತನ ಒಂದು ರೂಪವನ್ನಾಗಿ ಕಾಣಬೇಕು ಎಂದರೆ ನೀರಿನಂತೆ ಹೃದಯ ಕೂಡ ನಿರ್ಮಲವಾಗಿರಬೇಕು ಎಂದರು.
ರಾಷ್ಟ್ರದ ಕಲ್ಯಾಣಕ್ಕೆ 4 ಗ ಗಳ ಅಗತ್ಯವಿದ್ದು ಗಂಗೆ, ಗಾಯಿತ್ರಿ, ಗೀತೆ ಮತ್ತು ಗೋಮಾತೆ ಈ 4 ಗ ಗಳಿಂದ ಜೀವನದಲ್ಲಿ ಗೋವಿಂದನ ಅನುಗ್ರಹ ಪಡೆಯಲು ಸಾಧ್ಯ ಎಂದ ಸ್ವಾಮೀಜಿ ನೀರನ್ನು ಹಿತ ಮಿತವಾಗಿ ಬಳಸುವ ನಿಟ್ಟಿನಲ್ಲಿ ಅದರ ಪಾವಿತ್ರ್ಯತೆ ಕಾಪಾಡಬೇಕು ಎಂದರು.
ಸಿದ್ದರಬೆಟ್ಟ ಶ್ರೀ ಕ್ಷೇತ್ರದ ವೀರಭದ್ರಶಿವಾಚಾರ್ಯಸ್ವಾಮೀಜಿ ಮಾತನಾಡಿ, ಹಿಂದೆ ಗ್ರಾಮಗಳ ಅಭ್ಯುದಯಕ್ಕಾಗಿ ನಮ್ಮ ಪೂರ್ವಿಕರು ಕೆರೆ ನಿರ್ಮಿಸಿದ್ದರು. ಆದರೆ, ಈಗ ಆ ಕೆರೆಗಳನ್ನು ರಕ್ಷಿಸುವ ಬದಲಾಗಿ ಒತ್ತುವರಿ ಮಾಡಿಕೊಳ್ಳುವ ದುಷ್ಟರು ನಮ್ಮ ಸುತ್ತಮುತ್ತ ಇದ್ದಾರೆ ಎಂದು ವಿಷಾದಿಸಿದರು. ತಗ್ಗಿಹಳ್ಳಿ ಶ್ರೀರಾಮಕೃಷ್ಣ ಆಶ್ರಮದ ರಮಾನಂದ ಚೈತನ್ಯ ಸ್ವಾಮೀಜಿ, ಹನುಮಂತನಾಥಸ್ವಾಮೀಜಿ ಆರ್.ಎಸ್.ಎಸ್.ಪ್ರಚಾರಕ ಸೂರ್ಯನಾರಾಯಣರಾವ್, ಜನನಿ ಸೇವಾ ಸಂಸ್ಥೆ ಅಧ್ಯಕ್ಷೆ ಪಾರ್ವತಮ್ಮ, ಸುರಭಿ ಗೋಶಾಲೆ ಮಧುಸೂದನ್ ರಾವ್ ಅನೇಕರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

