ನಾಯಿಗಳ ದಾಳಿ: 12 ಕುರಿ ಸಾವು
ಅರಸೀಕೆರೆ: ಕುರಿ ಕೊಟ್ಟಿಗೆಯ ಮೇಲೆ ಏಕ ಕಾಲದಲ್ಲಿ 15 ನಾಯಿಗಳು ದಾಳಿ ನಡೆಸಿದ ಪರಿಣಾಮ 12 ಕುರಿಗಳು ಸಾವನಪ್ಪಿದ್ದರೆ 7 ಕುರಿಗಳು ತೀವ್ರಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ತಾಲ್ಲೂಕಿನ ಜಾವಗಲಲ್ಹೋಬಳಿ ಕೆರೆ ಕೋಡಿಹಳ್ಳಿ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ. ಗ್ರಾಮದ ನಂಜುಂಡೇಗೌಡ ಎಂಬುವವರಿಗೆ ಸೇರಿದ ಈ ಕೊಟ್ಟಿಗೆಯಲ್ಲಿ ಮಂಗಳವಾರ ರಾತ್ರಿ ಕುರಿಗಳನ್ನು ಕೂಡಿ ಹಾಕಿ ರಾತ್ರಿ ಮಲಗಿದ್ದಾಗ ಮಧ್ಯರಾತ್ರಿ ವೇಳೆ ದಿಢೀರನೇ ನಾಯಿಗಳು ದಾಳಿ ನಡೆಸಿದ್ದರಿಂದ ಈ ಅವಘಡ ಸಂಭವಿಸಿದ್ದು ಸ್ಥಳಕ್ಕೆ ಪಶು ವೈದ್ಯ ಹಾಗೂ ಪೊಲೀಸ್ ಇಲಾಖೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾ ಮಟ್ಟದ ಯುವಜನ ಮೇಳ
ತುಮಕೂರು: ಗುಬ್ಬಿ ಎಂ.ಜಿ. ರಸ್ತೆಯಲ್ಲಿರುವ ಬಿ.ಆರ್.ಸಿ. ಕಚೇರಿ ಆವರಣದಲ್ಲಿ ಫೆ 8 ರಂದು ಸಂಜೆ 6 ಗಂಟೆಗೆ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಆಗಮಿಸುವರು. ಫೆಬ್ರವರಿ 9 ರಂದು ಮ.3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ಎರಡನೇ ಸುತ್ತಿನ ಸಾರ್ವಜನಿಕ ಸಭೆ
ತಿಪಟೂರು ನಗರಸಭೆಯ 2014-15ನೇ ಸಾಲಿನ ಆಯವ್ಯಯ ಅಂದಾಜು ಪಟ್ಟಿ ತಯಾರಿಸಲು ಸರ್ಕಾರೇತರ ಸಂಘ ಸಂಸ್ಥೆಗಳು, ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಸ್ಥೆಗಳ ಪದಾಧಿಕಾರಿಗಳ ಹಾಗೂ ಸಾರ್ವಜನಿಕರ ಎರಡನೇ ಸುತ್ತಿನ ಸಮಾಲೋಚನಾ ಸಭೆಯನ್ನು ತಿಪಟೂರು ನಗರಸಭೆಯ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಫೆ.11 ರಂದು ಬೆಳಿಗ್ಗೆ 11 ಗಂಟೆಗೆ ನಗರಸಭೆ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಸಭೆಗೆ ಹಾಜರಾಗಿ ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ, ಉದ್ದೇಶಿಸಿರುವ ಆಯವ್ಯಯವನ್ನು ಪ್ರಗತಿಶೀಲವಾಗಿ ರೂಪಿಸಲು ಸಹಕಾರ ನೀಡಬೇಕಾಗಿ ಕೋರಿದೆ.
ನಗರದಲ್ಲಿ ವಿದ್ಯುತ್ ವ್ಯತ್ಯಯ
ತುಮಕೂರು ನಗರ ಉಪ ವಿಭಾಗ-1 ವ್ಯಾಪ್ತಿಗೆ ಬರುವ ಶಾಖೆಗಳ ವಿವಿಧ ಬಡಾವಣೆಗಳಲ್ಲಿ ಬೆವಿಕಂ ವತಿಯಿಂದ ಎಲ್. ಅಂಡ್ ಟಿ ಗುತ್ತಿಗೆದಾರರು ಕೇಂದ್ರ ಸರ್ಕಾರದ ಯೋಜನೆಯ ಆರ್ಎಪಿಡಿಆರ್ಪಿ ಕಾರ್ಯಕ್ರಮದಡಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದರಿಂದ ಫೆ. 6 ರಿಂದ ಮಾರ್ಚ್ 5 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಈ ಕೆಳಕಂಡ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಬೆವಿಕಂ, ನಗರ ಉಪ ವಿಭಾಗ ತುಮಕೂರು ಅವರು ತಿಳಿಸಿದ್ದಾರೆ.
ಪರಿವರ್ತಕಗಳ ಮೇಲ್ದರ್ಜೆಗೇರಿಸುವಿಕೆ, ಮುರಿದ ಕಂಬಗಳ ಬದಲಾವಣೆ, ತಂತಿ ಬದಲಾವಣೆ, ಹಾಗೂ ಇತರೆ ಕಾಮಗಾರಿಗಳು ಒಂದು ತಿಂಗಳ ಕಾಲ ನಡೆಯುವುದರಿಂದ ಸಾರ್ವಜನಿಕರು ಸಹಕರಿಸಬೇಕಾಗಿ ಅವರು ಕೋರಿದ್ದಾರೆ. ಕೇಂದ್ರ ಶಾಖೆ ವ್ಯಾಪ್ತಿಗೆ ಬರುವ ಎಂಜಿ ರಸ್ತೆ, ಕೆ.ಆರ್. ಬಡಾವಣೆ, ಶ್ರೀರಾಮನಗರ, ಆರ್ ಟಿ ನಗರ, ಎನ್.ಆರ್. ಕಾಲೋನಿ, ವಿದ್ಯಾನಗರ, ವಾಲ್ಮೀಕಿನಗರ, ಬಟವಾಡಿ, ಹನುಮಂತಪುರ, ಗಣೇಶನಗರ, ವೈಸರ್ ಪಾಳ್ಯ, ನಿರ್ವಾಣೆ ಬಡಾವಣೆ, ಕುವೆಂಪು ನಗರ, ಜಗನ್ನಾಥಪುರ, ಶಾರದಾದೇವಿನಗರ, ಬೆಳಗುಂಬ, ಕುಂದೂ, ಭಾಗ್ಯನಗರ, ಜ್ಯೋತಿಪುರ ಹಾಗೂ ಸುತ್ತಮುತ್ತಲ ಪ್ರದೇಶಗಳು.ಉತ್ತರಶಾಖೆ ವ್ಯಾಪ್ತಿಗೆ ಬರುವ ಸ್ವಾಂದೇನಹಳ್ಳಿ, ಮುತ್ಸಂದ್ರ, ಬೀರನಕಲ್ಲು, ರೊಪ್ಪದಪಾಳ್ಯ, ಅರಕೆರೆ,ಮಲ್ಲೇನಹಳ್ಳಿ,ಯಲ್ಲಾಪುರ, ಅಂತರಸನಹಳ್ಳಿ,ಅಣ್ಣೇನಹಳ್ಳಿ ರಂಗಾಪುರ, ಡಿ.ಸಿ.ಬಂಗ್ಲೆ, ಶೇದೇವಿ ಹಾಸ್ಟೆಲ್,ರೆಡ್ ಕ್ರಾಸ್, ರಿಮ್ ಆಸ್ಪತ್ರೆ, ಸತ್ಯಮಂಗಲ, ಅಂತರಸನಹಳ್ಳಿ ಕೈಗಾರಿಕಾ ಪ್ರದೇಶ, ಮರಳೇನಹಳ್ಳಿ, ಮತ್ತು ಸುತ್ತಮುತ್ತಲ ಪ್ರದೇಶಗಳು.ಪಶ್ಚಿಮ ಶಾಖೆ ವ್ಯಾಪ್ತಿಗೆ ಬರುವ ದಿಬ್ಬೂರು, ಸಂತೆಪೇಟೆ, ಅಗ್ರಹಾರ, ಚಿಕ್ಕಪೇಟೆ,ಮಂಡಿಪೇಟೆ, ವಿನೋಬನಗರ, ಜಯಪುರ, ಪಿಎಚ್. ಕಾಲೋನಿ, ಹೆಗಡೆಕಾಲೋನಿ, ಸರ್ಕಾರಿ ಆಸ್ಪತ್ರೆ, ಜೆ.ಸಿ.ಆರ್ ಕಲೋನಿ, ಗುಬ್ಬಿ ಗೇಟ್, ವಿನಾಯಕನಗರ, ಮಳೆ ಫ್ಯಾಕ್ಟರಿ, ಶಿರಾಗೇಟ್, ಹೌಸಿಂಗ್ ಬೋರ್ಡ್, ಹೊನ್ನೇನಹಳ್ಳಿ, ಹಾಗೂ ಸುತ್ತಮುತ್ತಲ ಪ್ರದೇಶಗಳು. ಪೂರ್ವ ಶಾಖೆಗೆ ಒಳಪಡುವ ಕ್ಯಾತ್ಸಂದ್ರ, ಬಡ್ಡಿಹಳ್ಳಿ, ಗೋಕುಲ ಬಡಾವಣೆ, ಶ್ರೀನಗರ, ಬಂಡೇಪಾಳ್ಯ, ಹಳೇ ಕಾತ್ಸಂದ್ರ, ಎಚ್ ಎಂ ಎಸ್ . ಜಾಸ್ ಟೋಲ್ಗೇಟ್, ಮಂಚಕಲ್ ಕುಪ್ಪೆ, ಸಿದ್ದರಾಮೇಶ್ವರ ಬಡಾವಣೆ, ದೇವರಾಯಪಟ್ಟಣ, ಶ್ರೀ ಸಿದ್ಧಗಂಗಾ ಮಠ, ಹಾಗೂ ಸುತ್ತಮುತ್ತಲ ಪ್ರದೇಶಗಳು.
ಇಂದು ತಾಪಂ ಕಚೇರಿ ನೂತನ ಕಟ್ಟಡ ಉದ್ಘಾಟನೆ
ಗುಬ್ಬಿ: ಪಟ್ಟಣದ ತಾಲೂಕು ಪಂಚಾಯ್ತಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ತಾಲೂಕು ಪಂಚಾಯ್ತಿ ಕಚೇರಿಯ ಕಟ್ಟಡ ಹಾಗೂ ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಸಮಾರಂಭವನ್ನು ಫೆ.6 ರಂದು ಏರ್ಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಸ್.ಆರ್.ಶ್ರೀನಿವಾಸ್ ವಹಿಸಲಿದ್ದು ತಾಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಎನ್. ಬಾಲಕೃಷ್ಣ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅಥಿತಿಗಳಾಗಿ ವಿಧಾನಪರಿಷತ್ ಸದಸ್ಯ ಡಾ.ಎ.ಎಚ್.ಶಿವಯೋಗಿಸ್ವಾವು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸಾಕಮ್ಮ, ಸಂಸದ ಜಿ.ಎಸ್. ಬಸವರಾಜು, ಶಾಸಕರಾದ ಎಂ.ಟಿ. ಕೃಷ್ಣಪ್ಪ, ಡಾ. ಎಂ.ಆರ್.ಹುಲಿನಾಯ್ಕರ್, ವೈ.ಎ. ನಾರಾಯಣಸ್ವಾಮಿ, ಜಗ್ಗೇಶ್, ದೊಡ್ಡರಂಗೇಗೌಡ, ಎಂ.ಡಿ. ಲಕ್ಷ್ಮೀನಾರಾಯಣ್, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಜಾನಮ್ಮ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ.ಡಿ. ಸುರೇಶ್ಗೌಡ, ತಾಪಂ ಉಪಾಧ್ಯಕ್ಷೆ ಚಿಕ್ಕಮ್ಮ ಸೇರಿದಂತೆ ಜಿಲ್ಲಾ ಪಂಚಾಯ್ತಿ ಸದಸ್ಯರುಗಳು ಭಾಗವಹಿಸಲಿದ್ದಾರೆಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಬಿ.ಮಂಜುನಾಥ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

